ಸ್ವಚ್ಛ ಬೆಳ್ಳಾರೆ ಹಾಗೂ ಡೆಂಘೆ , ಕ್ಷಯರೋಗ ಜಾಗೃತಿ ಕಾರ್ಯಕ್ರಮ:

August 4, 2019
12:34 PM

ಬೆಳ್ಳಾರೆ : ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳ್ಳಾರೆ, ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಜೆ.ಸಿ.ಐ. ಬೆಳ್ಳಾರೆ ಹಾಗೂ ಡಾ| ಕೆ. ಶಿವರಾಮ ಕಾರಂತ ಪ್ರ.ದರ್ಜೆ ಕಾಲೇಜು ಬೆಳ್ಳಾರೆಯ ಸಮಾಜ ಕಾರ್ಯ ವಿಭಾಗಗಳ ಸಹಭಾಗಿತ್ವದಲ್ಲಿ ಸ್ವಚ್ಛ ಬೆಳ್ಳಾರೆ, ಡೆಂಘೆ , ಕ್ಷಯರೋಗಗಳ ಜಾಗೃತಿ ಕಾರ್ಯಕ್ರಮವು ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರಗಿತು.

ಸಂಪನ್ಮೂಲ ವ್ಯಕ್ತಿಯಾಗಿ ಪೆರ್ಲಂಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ| ಅಮಿತ್‍ ಅವರು ಮಾತನಾಡಿ, ಡೆಂಘೆ ಕಾಯಿಲೆಗೆ ನಿರ್ದಿಷ್ಟ ಔಷಧಿವಿರುವುದಿಲ್ಲ. ಜಾಲತಾಣಗಳಲ್ಲಿ ನಮೂದಿಸಿರುವ ಔಷಧಗಳ ಬಗ್ಗೆ ಯಾವುದೇ ಭರವಸೆಯಿಲ್ಲ. ಜ್ವರ ಇತ್ಯಾದಿ ಕಾಯಿಲೆಗಳಿಗೆ ವೈದ್ಯರ ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ ಎಂದು ಕರೆ ಇತ್ತರು.

ಆರೋಗ್ಯ ಕೇಂದ್ರದ ವೈದ್ಯೆ ಡಾ| ಅಶ್ವಥಿ, ಮಾತನಾಡಿ ಕಾಯಿಲೆ ಹಬ್ಬದಂತೆ, ಪರಿಸರವನ್ನು ಸ್ವಚ್ಛವಾಗಿಸುವ ಬಗ್ಗೆ ಜಾಗೃತಿ ಮೂಡಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರೋಟರಿ ಕ್ಲಬ್ ಟೌನ್‍ನ ಅಧ್ಯಕ್ಷ ಬಿ. ನರಸಿಂಹ ಜೋಶಿ ಮಾತನಾಡಿ, ಡೆಂಗ್ಯೂ ಇನ್ನಿತರ ಮಾರಕ ಕಾಯಿಲೆಗಳ ಬಗ್ಗೆ ಪ್ರತಿಯೊಬ್ಬರೂ ಸೂಕ್ತ ಮಾಹಿತಿ ಪಡಕೊಂಡು ಆರೋಗ್ಯವಂತ ಸಮಾಜವನ್ನು ಕಟ್ಟಲು ಸಹಕರಿಸಬೇಕೆಂದು ಕೋರಿದರು.

ಬೆಳ್ಳಾರೆ ಗ್ರಾ.ಪಂ. ಸದಸ್ಯ ಮಹಮ್ಮದ್ ಆರೀಫ್‍ ಅವರು ‘ಸ್ವಚ್ಛ ಬೆಳ್ಳಾರೆ’ಯ ಕನಸನ್ನು ನನಸಾಗಿಸಲು ಪ್ರತಿಯೊಬ್ಬರೂ ಸಹಕರಿಸುವಂತೆ ಮನವಿ ಮಾಡಿದರು.

ಜೆ.ಸಿ.ಐ.ನ ಅಧ್ಯಕ್ಷ ಲೋಕೇಶ್ ತಂಟೆಪ್ಪಾಡಿ ಸ್ವಾಗತಿಸಿ ಕ್ಷಯರೋಗ ನಿರ್ಮೂಲನೆ ಬಗ್ಗೆ ಮಾಹಿತಿ ನೀಡಿದರು. ರೋಟರಿ ಕ್ಲಬ್‍ನ ಕಾರ್ಯದರ್ಶಿ ಗೋಪಾಲಕೃಷ್ಣ ಪಿ. ಯಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‍ನ ಶ್ಯಾಮಸುಂದರ ರೈ, ಏ.ಕೆ. ಮಣಿಯಾಣಿ, ಐತ್ತಪ್ಪ ಗೌಡ ಕಾವಿನಮೂಲೆ, ಸೀತಾರಾಮ ನೆಟ್ಟಾರು, ಜೆ.ಸಿ.ಐ.ನ ಪ್ರಸಾದ್ ಸೇವಿತ ಉಪಸ್ಥಿತರಿದ್ದರು.

ಕೇಂದ್ರದ ಆಶಾ ಕಾರ್ಯಕರ್ತೆಯರು, ಕಾಲೇಜಿನ ಸಮಾಜ ಸೇವಾ ಕಾರ್ಯದ ವಿದ್ಯಾರ್ಥಿಗಳು ಹಾಗೂ ಸಂಘಟನೆಗಳ ಸದಸ್ಯರು, ಸ್ವಚ್ಛ ಬೆಳ್ಳಾರೆಯ ಅಂಗವಾಗಿ ಪೇಟೆಯ ಇಕ್ಕೆಲೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಇನ್ನಿತ್ತರ ಕಸಗಳನ್ನು ವಿಲೇವಾರಿ ಮಾಡಿ ಸ್ವಚ್ಛತೆಗೈದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಲವು ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ – ಆರೆಂಜ್ ಅಲರ್ಟ್
October 17, 2026
7:30 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ
October 17, 2026
7:23 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ
October 16, 2026
5:14 PM
by: ವಿಶೇಷ ಪ್ರತಿನಿಧಿ
ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ
October 16, 2026
3:42 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror