ಮಂಗಳೂರು :- ಭಾರತೀಯ ಕೃಷಿ ಸಂಶೋಧನಾ ಪರಿಷತ್‍ನ ಅಂಗ ಸಂಸ್ಥೆಯಾದಂತಹ ಮಂಗಳೂರಿನ ಕಂಕನಾಡಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ವರ್ಣಧಾರ ಕೋಳಿ ಸಾಕಾಣೆಯ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬೀದರ್ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಅಭಿವೃದ್ಧಿ ಪಡಿಸಿದ ಸ್ವದೇಶಿ ತಳಿ ‘ಸ್ವರ್ಣಧಾರ’ ಕೋಳಿಗೆ ಜಿಲ್ಲೆಯಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಆಸಕ್ತ ರೈತರಿಗೆ ವೈಜ್ಞಾನಿಕ ರೀತಿಯಲ್ಲಿ ಕೋಳಿ ಸಾಕಾಣೆಮಾಡುವ ಸಲುವಾಗಿ ತರಬೇತಿ ನೀಡಲಾಯಿತು. 8 ವಾರಗಳಲ್ಲಿ ಸ್ವರ್ಣಧಾರ ಕೋಳಿಯು 1 ರಿಂದ 1.2 ಕೆ. ಜಿ. ತೂಕ ಬೆಳೆಯುವ ಸಾಮತ್ರ್ಯವಿದ್ದು ನಾಟಿಕೋಳಿಗಳಿಗೆ ಹೊಲಿಸಿದಾಗ ಎರಡುಪಟ್ಟು ಹೆಚ್ಚಾಗಿದೆ. ವಾರ್ಷಿಕವಾಗಿ 180-200 ಮೊಟ್ಟೆ ಉತ್ಪಾದಿಸುವ ಸಾಮಥ್ರ್ಯವಿರುವ ಈ ತಳಿಗೆ ಕರಾವಳಿಯಲ್ಲಿ ರೈತನು ಯಾವುದೇ ಪಂಜರದ ಸಹಾಯವಿಲ್ಲದೆ ಸಣ್ಣಪ್ರಮಾಣದೊಂದಿಗೆ ಹಿತ್ತಲಿನಲ್ಲಿ ಸಾಕಬಹುದಾಗಿದೆ.
ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಪಶುವೈದ್ಯಾಧಿಕಾರಿ ಡಾ|| ಗುರುಮೂರ್ತಿ ಘಟ್ಟ ಪ್ರದೇಶದಲ್ಲಿ ಪ್ರಚಲಿತವಾಗಿರುವ ಈ ಕೋಳಿಗಳ ಸಾಕಾಣೆಗೆ ಈಗ ಕರಾವಳಿಯಲ್ಲೂ ಆಸಕ್ತಿ ಹೆಚ್ಚುತ್ತಿದೆಯೆಂದು ಅಭಿಪ್ರಾಯಪಟ್ಟರು. ವೈಜ್ಞಾನಿಕವಾಗಿ ಸಾಕುವ ವಿಧಾನಗಳು, ಮರಿ ಮಾಡುವುದು, ಅಹಾರ ನೀಡುವ ಪದ್ಧತಿಗಳು, ರೋಗಗಳ ನಿರ್ವಹಣೆ, ಕೋಳಿ ತ್ಯಾಜದ ನಿರ್ವಹಣೆ ಮತ್ತಿತರ ವಿವರಗಳನ್ನು ರೈತರಿಗೆ ನೀಡಿದರು.
ಇದೇ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮೀನುಗಾರಿಕಾ ವಿಜ್ಞಾನಿ ಡಾ|| ಎನ್. ಚೇತನ್ ಕೋಳಿ ಸಾಕಾಣೆಕೆಯಿಂದ ಆರ್ಥಿಕ ಅಭಿವೃದ್ಧಿಯ ಕುರಿತು ಮಾತನಾಡಿದರು. ಗ್ರಾಮೀಣ ಭಾಗದ ಜನರಿಗೆ ಕಡಿಮೆ ಬಂಡವಾಳದೋಂದಿಗೆ ಸುಲಭವಾಗಿ ಪೌಷ್ಟಿಕ ಅಹಾರವು ದೊರೆಯುವಂತೆ ಮಾಡಲು ಸುಧಾರಿತ ನಾಟಿ ಕೋಳಿ ಸಾಕಾಣೆಮಾಡುವ ಬಗ್ಗೆ ಅರಿವು ಮೂಡಿಸುತ್ತಿರುವ ಕೃಷಿ ವಿಜ್ಞಾನ ಕೇಂದ್ರದ ಯೋಜನೆಗಳನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ಶಾಸ್ತ್ರ ವಿಜ್ಞಾನಿ ಡಾ||. ಮಲ್ಲಿಕಾರ್ಜುನ ಹಾಗು ಇತರೆ ಸಿಬ್ಬಂದಿಯಾದ ಸತೀಶ್, ದೀಪ, ಸೌಮ್ಯ, ವಿದ್ಯಾವತಿ, ಸೀತಾರಾಮ್, ಸೊಮಶೇಕರೈಯ್ಯ, ಅಶ್ವಿಥ್ ಉಪಸ್ತಿತರಿದ್ದರು. ತರಬೇತಿಯ ನಂತರ ಸರ್ಕಾರಿ ದರದಲ್ಲಿ ಕೋಳಿಮರಿಗಳನ್ನು ಮಾರಾಟ ಮಾಡಲಾಯಿತು.