ಸ್ವಸ್ಥ ಬದುಕಿಗೆ ನಿಯಮಗಳ ಪಾಲನೆ ಅಗತ್ಯ – ವೃತ್ತ ನಿರೀಕ್ಷಕ ನವೀನಚಂದ್ರಜೋಗಿ

February 20, 2020
12:32 PM

ಸುಳ್ಯ: ಚಾಲ್ತಿಯಲ್ಲಿರುವ ಯಾವುದೇ ಕಾನೂನನ್ನು ಮೀರಿ ಮಾಡಿದ ಕೃತ್ಯ ಅಥವಾ ಘಟನೆ ಅಪರಾಧವೆನಿಸುತ್ತದೆ. ಹಾಗಾಗಿ ಸ್ವಸ್ಥ ಬದುಕಿಗೆ ನಿಯಮಗಳ ಪಾಲನೆ ಅಗತ್ಯ ಎಂದು ಸುಳ್ಯ ವೃತ್ತ ನಿರೀಕ್ಷಕ ನವೀನ್‍ಚಂದ್ರ ಜೋಗಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement
Advertisement
Advertisement
Advertisement

ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್‍ಕ್ರಾಸ್ ಘಟಕದ ವತಿಯಿಂದ ಹಮ್ಮಿಕೊಂಡ ಅಪರಾಧ ತಡೆ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನದಲ್ಲಿ ಅಪರಾಧಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಯಾವ ವ್ಯಕ್ತಿಗೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದಕ್ಕೆ ಅಡೆತಡೆಯಾಗುವುದೋ ಆಗ ಅಪರಾಧಗಳು ಪ್ರಾರಂಭವಾಗುತ್ತವೆ. ಎಲ್ಲರೂ ಪ್ರಯತ್ನಪಟ್ಟರೆ ಅಪರಾಧ ಪ್ರಕರಣವನ್ನು ತಡೆಗಟ್ಟಬಹುದು. ಹಾಗಾಗಿ ಅದರ ಬಗ್ಗೆ ಮಾಹಿತಿ ಪಡೆಯಬೇಕಾದ ಅಗತ್ಯವಿದೆ ಎಂದರು.

Advertisement

ಸುಬ್ರಹ್ಮಣ್ಯ ಪೋಲೀಸ್ ಠಾಣೆಯ ಪೋಲೀಸ್ ಕಾನ್ಸ್ ಟೇಬಲ್ ಭೀಮನಗೌಡ ಬಿರಾದಾರ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀಧರ್ ವಿ, ರೆಡ್‍ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತೇಜಸ್ವಿನಿ ಮತ್ತು ಮೌನ ಪ್ರಾರ್ಥಿಸಿದರು. ಮೌನವಿ ಸ್ವಾಗತಿಸಿ, ಮೌನ ವಂದಿಸಿದರು. ಕಾವ್ಯಾ ಕೆ ಡಿ ಕಾರ್ಯಕ್ರಮ ನಿರೂಪಿಸಿದರು. ಮಾಹಿತಿ ಕಾರ್ಯಕ್ರಮದ ನಂತರ ಸಂವಾದ ಚರ್ಚೆ ನಡೆಯಿತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೇಂದ್ರ ಸರ್ಕಾರದ  ಬಜೆಟ್ ಮೇಲೆ ರೈತಾಪಿ ವರ್ಗ  ಬಹಳ ನಿರೀಕ್ಷೆ | ಕುರುಬೂರು ಶಾಂತಕುಮಾರ್
January 27, 2025
8:41 PM
by: The Rural Mirror ಸುದ್ದಿಜಾಲ
‌ಸಾರಡ್ಕ ಕೃಷಿ ಹಬ್ಬ | “ನಾ ಕಂಡಂತೆ ಸಾರಡ್ಕ ಕೃಷಿ ಹಬ್ಬ 2025” ಕೃಷಿಕ ಎ ಪಿ ಸದಾಶಿವ ಅವರ ಅಭಿಪ್ರಾಯ |
January 27, 2025
11:12 AM
by: ಎ ಪಿ ಸದಾಶಿವ ಮರಿಕೆ
ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಭಾರೀ ಕಾಡ್ಗಿಚ್ಚು | ನೂರಾರು ಎಕರೆ ಅರಣ್ಯ ನಾಶ | ಬೆಂಕಿ ನಂದಿಸಲು ಅರಣ್ಯ ಇಲಾಖೆ ಪ್ರಯತ್ನ |
January 26, 2025
7:35 AM
by: The Rural Mirror ಸುದ್ದಿಜಾಲ
ವಿದೇಶದಿಂದ ಅಡಿಕೆ ಕಳ್ಳಸಾಗಾಣಿಕೆ ಪ್ರಕರಣ | ಡಿಎಂಕೆ ಕೌನ್ಸಿಲರ್ ವಶಕ್ಕೆ ಪಡೆದ ಡಿಆರ್‌ಐ
January 26, 2025
7:14 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror