ಹಲೋ…. ಹಲೋ….. ಯಾರಿದ್ದೀರಿ….? ನಮ್ಮ “ಬಿಎಸ್ಎನ್ಎಲ್” ಬದುಕಿಸಿ

June 6, 2019
8:00 AM

ಗ್ರಾಮೀಣ ಭಾರತದ ಸಂಪರ್ಕ ಸೇತು ಬಿಎಸ್ಎನ್ಎಲ್. ಇದು ನಿಜವಾದ  ಕನೆಕ್ಟಿಂಗ್ ಇಂಡಿಯಾ. ಆದರೆ ಈಗ ಮಾತ್ರಾ ಆಗಾಗ ಡಿಸ್ ಕನೆಕ್ಟಿಂಗ್ ಇಂಡಿಯಾ..!.

Advertisement
Advertisement

ಬಿಎಸ್ಎನ್ಎಲ್ ಉಳಿಸಿ, ಬಿಎಸ್ಎನ್ಎಲ್ ಬದುಕಿಸಿ ಅಭಿಯಾನ…!. ಇಡೀ ದೇಶವನ್ನು ಸಂಪರ್ಕಿಸುವ ನೆಟ್ವಕ್ ಇದು. ಸ್ಥಿರದೂರವಾಣಿಯಿಮದ ತೊಡಗಿ ಮೊಬೈಲ್ ವರೆಗೆ ಎಲ್ಲವೂ ಇದೆ. ಆದರೆ ವ್ಯವಸ್ಥೆಗಳೆ ಸರಿ ಇಲ್ಲದೆ ಸೊರಗಿದೆ. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಬಿಎಸ್ಎನ್ಎಲ್ ನೆಚ್ಚಿಕೊಂಡವರೇ ಅನೇಕರು. ಹೀಗಾಗಿಯೇ ಬಿಎಸ್ಎನ್ಎಲ್ ಬೇಕು ಎಂದು ಜನ ಸರಕಾರದ ಮುಂದೆ ಮೊರೆ ಇಡುತ್ತಿದ್ದಾರೆ. ಸರಕಾರಿ ಸ್ವಾಮ್ಯದ ಈ ಸಂಸ್ಥೆ ಖಾಸಗೀಕರಣವಾಗಲಿ ಅಂತ ಅನೇಕರು ಹೇಳುತ್ತಾರೆ. ಆದರೆ ಒಂದು ಕ್ಷಣ ಯೋಚಿಸಬೇಕು, ಇದೊಂದು ಸೇವಾ ಸಂಸ್ಥೆ. ಸೇವೆಗಾಗಿ ಗ್ರಾಹಕರು ಸರಕಾರವನ್ನು ಕೇಳಬಹುದು. ಆದರೆ ಖಾಸಗೀ ಸಂಸ್ಥೆಯನ್ನು  ಕೇಳಲು ಹೇಗೆ ಸಾಧ್ಯ. ಈ ಕಾರಣಕ್ಕಾಗಿ ಗುಣಮಟ್ಟದ, ಉತ್ತಮ ಸೇವೆಗಾಗಿ  ಗ್ರಾಹಕರೇ ಹೋರಾಟ ನಡೆಸಬೇಕು, ಒತ್ತಾಯ ಮಾಡಬೇಕು. ನಮ್ಮಿಂದ ಆಯ್ಕೆಯಾದ ಮಂದಿ ಈ ಕೆಲಸ ಮಾಡಬೇಕು. ಈ ಆಶಯದೊಂದಿಗೆ ಗ್ರಾಮೀಣ ಭಾಗದ ಸಮಸ್ಯೆ ತೆರೆದಿಡುತ್ತೇವೆ.

Advertisement

ಸುಳ್ಯ ತಾಲೂಕಿನ ಮಡಪ್ಪಾಡಿ ಎಂಬ ಪುಟ್ಟ ಗ್ರಾಮ. ಇಲ್ಲಿನ ಒಬ್ಬ ಯುವಕ ಬೆಂಗಳೂರಿನಲ್ಲಿ  ಉದ್ಯೋಗದಲ್ಲಿದ್ದಾನೆ. ನಿತ್ಯ ಮನೆಗೆ ಸಂಪರ್ಕ ಮಾಡಬೇಕು ಎಂದರೆ ಸಾದ್ಯವಾಗುತ್ತಿಲ್ಲ. ಕಾರಣ ಸ್ಥಿರ ದೂರವಾಣಿ ಸರಿ ಇಲ್ಲ. ಮೊಬೈಲ್ ಟವರ್ ಆಪ್…!. ಸ್ಥಿರ ದೂರವಾಣಿ ದುರಸ್ತಿಗೆ ಯಾವುದೇ ವ್ಯವಸ್ಥೆ ಈಗ ಇಲ್ಲ. ಕೇಬಲ್ ಸಂಪರ್ಕ ಕಲ್ಪಿಸಲು, ತುಂಡಾದರೆ ಸರಿ ಮಾಡಲು ವ್ಯವಸ್ಥೆ ಈಗಿಲ್ಲ. ಆದರೆ ಮೊಬೈಲ್ ಟವರ್ ಆಫ್ ಆಗುವುದಕ್ಕೆ ಹಲವು ಕಾರಣ. ಹೀಗೇ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ  ಈ ಸಮಸ್ಯೆ ಇದೆ.

ಕೊಲ್ಲಮೊಗ್ರ, ಬಾಳುಗೋಡು ಸೇರಿದಂತೆ ಅನೇಕ ಗ್ರಾಮೀಣ ಭಾಗದಲ್ಲಿ ಬೇರೆ ಯಾವುದೇ ನೆಟ್ ವರ್ಕ್ ಇಲ್ಲ. ಬಿಎಸ್ಎನ್ಎಲ್ ಮಾತ್ರವೇ ಇಲ್ಲಿನ ಜನರಿಗೆ ಆಧಾರ. ಕಳೆದ ಕೆಲವು ಸಮಯಗಳಿಂದ ಬಿಎಸ್ಎನ್ಎಲ್ ನಷ್ಟದಲ್ಲಿದೆ ಎಂದು ಟವರ್ ಅಸಮರ್ಪಕ ಸ್ಥಿತಿಯಲ್ಲಿದೆ. ವಿದ್ಯುತ್ ಕೈಕೊಟ್ಟರೆ ಜನರೇಟರ್ ಗೆ ಡೀಸೆಲ್ ಸರಬರಾಜು ಇಲ್ಲವಾಗಿದೆ. ಒಂದು ವೇಳೆ ವಿದ್ಯುತ್ ಇಲ್ಲವಾದರೆ ಟವರ್ ಆಫ್. ಜನರಿಗೆ ಸಂಕಷ್ಟ. ಇನ್ನು  ಟವರ್ ಗೆ ಸಂಬಂಧಿತ ಉಪಕರಣಗಳೂ ಹಾಗೆಯೇ ಕೈಕೊಟ್ಟರೆ ದೇವರೇ ಗತಿ. ದುರಸ್ತಿ ಮಾಡುವ ಸ್ಥಿತಿಯಲ್ಲಿಲ್ಲ. ಹಾಗಂತ ಬಿಎಸ್ಎನ್ಎಲ್ ಅಧಿಕಾರಿಗಳು ಕೆಲಸವೇ ಮಾಡುತ್ತಿಲ್ಲ ಅಂತಲ್ಲ. ಅನೇಕರು ಕಾಳಜಿ ಇರುವ ಅಧಿಕಾರಿಗಳು ಇದ್ದಾರೆ. ಆದರೆ ಸಾಮಾಗ್ರಿಗಳ ಪೂರೈಕೆ ಇಲ್ಲದೇ ಇದ್ದರೆ ಅಥವಾ ಕಳಪೆ ಸಾಮಾಗ್ರಿ ಪೂರೈಕೆಯಾದರೆ ಅಧಿಕಾರಿಗಳು ಅಸಹಾಯಕರು. ಹೀಗಾಗಿ ಇಲ್ಲಿ ವ್ಯವಸ್ಥೆ ಮಾಡಬೇಕಾದ್ದು ಸರಕಾರ ಮಟ್ಟದಲ್ಲಿ. ಗ್ರಾಮೀಣ ಭಾರತ, ಗ್ರಾಮೀಣ ಭಾರತದ ಸಂಪರ್ಕ ಅಂತೆಲ್ಲಾ ಸವಾಲು ಸ್ವೀಕರಿಸುವಾಗ ಇಂದು ಜನರು ಅತೀ ಹೆಚ್ಚು ಅಗತ್ಯ ಪಡುವ ನೆಟ್ ವರ್ಕ್ ಕಡೆಗೆ ಸರಕಾರವೇ ಗಮನಹರಿಸಬೇಕಿದೆ.

Advertisement

 

ಹೀಗಾಗಿ ಗ್ರಾಮೀಣ ಭಾಗದ ಅದರಲ್ಲೂ ಮಂಗಳೂರು ವಿಭಾಗದ ಬಿಎಸ್ಎನ್ಎಲ್ ಉದ್ದಾರವಾಗಲಿ, ಡೀಸೆಲ್ ಸರಬರಾಜು ಬೇಗನೆ ವ್ಯವಸ್ಥೆಯಾಗಲಿ ಎಂದು ಜನರು ಒತ್ತಾಯ ಮಾಡುತ್ತಾರೆ. ಇಲಾಖೆಗಳು ಅದರ ಜೊತೆಗೆ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಲಿ.

Advertisement

 

ಈ ಬಗ್ಗೆ ಸರಕಾರಕ್ಕೆ ತಲುಪಲು  ಟ್ವೀಟ್ ಮೂಲಕ ಗಮನಕ್ಕೆ ತರಲಾಗಿದೆ. ಇದಕ್ಕೆ ಬಿಎಸ್ಎನ್ಎಲ್ ಉತ್ತರಿಸಿದೆ. ಅದು ಹೀಗಿದೆ…

Advertisement

 

Advertisement

 

Advertisement

 

 

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

 ಕಸ್ತೂರಿ ರಂಗನ್ ವರದಿ ಬಗ್ಗೆ ಕೋರ್ಟ್‌ಗೆ ಮನವರಿಕೆ | ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ |
October 8, 2024
11:03 PM
by: ದ ರೂರಲ್ ಮಿರರ್.ಕಾಂ
 ದಸರಾ ಅಂಗವಾಗಿ  ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ | ಮೊದಲ ಬಹುಮಾನ 1 ಲಕ್ಷ |
October 8, 2024
10:20 PM
by: ದ ರೂರಲ್ ಮಿರರ್.ಕಾಂ
ತಂಬಾಕು ನಿಯಂತ್ರಿಸಲು ಕ್ರಮ | ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 6 ತಿಂಗಳಲ್ಲಿ 265 ಮಂದಿ ತಂಬಾಕಿನಿಂದ ದೂರ |
October 8, 2024
8:25 PM
by: ದ ರೂರಲ್ ಮಿರರ್.ಕಾಂ
 ರಾಸುಗಳಿಗೆ ತಪ್ಪದೇ ಜೀವ ವಿಮೆ ಮಾಡಿಸಿ
October 8, 2024
8:16 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror