ಹಿಂಜಾವೇ ಕಾರ್ಯಕರ್ತ ಕಾರ್ತಿಕ್ ಸುವರ್ಣ ಸವಿನೆನಪಲ್ಲಿ ಪ್ರತಿ ತಿಂಗಳು ಆಹಾರ ಧಾನ್ಯ ನೀಡುವ ಯೋಜನೆಗೆ ಚಾಲನೆ

October 18, 2019
8:56 PM

ಪುತ್ತೂರು: ಸಾಮಾಜಿಕ, ಧಾರ್ಮಿಕ ಕಾರ್ಯದ ಮೂಲಕ ಗುರುತಿಸಿಕೊಂಡಿರುವ ಉದ್ಯಮಿ, ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಂದ ಪ್ರೇರಣೆಗೊಂಡ ಯುವಕರು ರಚಿಸಿದ ಅಶೋಕ್ ಕುಮಾರ್ ರೈ ಅಭಿಮಾನಿ ಬಳಗ ಎ.ಆರ್ ವಾರಿಯರ್ಸ್‌ ಮೂಲಕ ಇತ್ತೀಚೆಗೆ ಮೃತಪಟ್ಟ ಹಿಂಜಾವೇ ಕಾರ್ಯಕರ್ತ ಕಾರ್ತಿಕ್ ಸುವರ್ಣ ಮೇರ್ಲರ ಸವಿನೆನಪುಗಳ ಜೊತೆಗೆ ಪ್ರತಿ ತಿಂಗಳು ಒಂದು ಅಶಕ್ತ ಕುಟುಂಬಕ್ಕೆ ಆಹಾರ ಧಾನ್ಯ ನೀಡುವ ಯೋಜನೆಯ ಪ್ರಥಮ ಹಂತವಾಗಿ ಕಳೆದ ಕೆಲ ದಿನಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟ ಪುತ್ತೂರು ತಾಲೂಕಿನ ಬೀರಾವು ನಿವಾಸಿ ಹರೀಶ್ ಅವರ ಮನೆಗೆ ಆಹಾರ ಧಾನ್ಯಗಳನ್ನು ಎ.ಆರ್ ವಾರಿಯರ್ಸ್‌ ನ ಸದಸ್ಯರು ಒದಗಿಸಿದರು.

ಈ ಸಂದರ್ಭದಲ್ಲಿ ಪ್ರಜ್ವಲ್ ರೈ ಸವಣೂರು, ಧನು ಪಟ್ಲ ಕಲ್ಲೇಗ, ಕಮಲ್ ಕುಲಾಲ್, ಸುಜಿತ್ ಬಂಗೇರ ಸಂಟ್ಯಾರ್, ಪ್ರಜನ್ ರೈ ತೊಟ್ಲ, ಭರತ್ ಶೆಟ್ಟಿ, ರಾಕೇಶ್ ಈಶ್ವರಮಂಗಲ, ಮನೋಜ್ ಸಂಟ್ಯಾರ್ ಉಪಸ್ಥಿತರಿದ್ದರು. ಎ ಆರ್ ವಾರಿಯರ್ಸ್‌ ಬಳಗದ ಮೂಲಕ ಇತ್ತೀಚೆಗೆ ನೂರಾರು ಯುವಕರು ಸೇರಿ ನೆರೆ ಪೀಡಿತ ಪ್ರದೇಶವಾದ ಬೆಳ್ತಂಗಡಿ ತಾಲೂಕಿನ ದಿಡುಪೆಯಲ್ಲಿ ಶ್ರಮದಾನ ಕಾರ್ಯ ಮಾಡಿತ್ತು.

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | ಕರಾವಳಿ, ಮಲೆನಾಡು ಭಾಗಗಳಲ್ಲಿ ಬೇಸಿಗೆ ಮಳೆಯು ಮುಂದುವರಿಯುವ ಲಕ್ಷಣ |
March 16, 2025
11:20 AM
by: ಸಾಯಿಶೇಖರ್ ಕರಿಕಳ
ದಾವಣಗೆರೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ | ಬಾಡಿಗೆ ಆಧಾರದಲ್ಲಿ ಖಾಸಗಿ ಕೊಳವೆಬಾವಿ
March 16, 2025
7:53 AM
by: The Rural Mirror ಸುದ್ದಿಜಾಲ
ಯಾದಗಿರಿ ಜಿಲ್ಲೆಗೆ ತಾಪಮಾನ ಎಚ್ಚರಿಕೆ | ಮುಂದಿನ ಮೂರು ತಿಂಗಳಿನಲ್ಲಿ ಗರಿಷ್ಠ 45 ಡಿಗ್ರಿ ತಾಪಮಾನ ದಾಖಲಾಗುವ ಸಾಧ್ಯತೆ
March 16, 2025
7:36 AM
by: The Rural Mirror ಸುದ್ದಿಜಾಲ
ಏಪ್ರಿಲ್ 30 ರವರೆಗೆ ಜೋಗ ಜಲಪಾತಕ್ಕೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ
March 16, 2025
7:29 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror