ಹಿತಮಿತದ ಮಾತನಿಂದ ಜನರ ಮನಗೆಲ್ಲಬಹುದು

July 14, 2019
12:00 PM

ಬೆಳ್ಳಾರೆ: ಮಾತು ಜನರನ್ನು ಮೋಡಿಗೊಳಿಸುವಷ್ಟು ಆಕರ್ಷ ಮತ್ತು ನಾಜೂಕಾಗಿರಬೇಕು. ಮಾತುಗಾರಿಕೆ ಒಂದು ಅತ್ಯುತ್ತಮ ಕಲೆಯಾಗಿದೆ. ಹಿತಮಿತದ ಮಾತನಿಂದ ಜನರ ಮನಗೆಲ್ಲಬಹುದು ಎಂದು ಉದ್ಯಮಿ ಮಿಥುನ್ ಶೆಣೈ ಹೇಳಿದರು.
ಬೆಳ್ಳಾರೆ ಜೇಸಿಐ ಹಾಗು ಬೆಳ್ಳಾರೆ ಜ್ಞಾನದೀಪ ವಿದ್ಯಾಸಂಸ್ಥೆಯ ಜಂಟಿ ಆಯೋಜನೆಯಲ್ಲಿ ಮೋಂಟೆಸರಿ ವಿದ್ಯಾರ್ಥಿ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳಿಗೆ ನಡೆದ ಎರಡು ದಿನಗಳ ಮಾತುಗಾರಿಕಾ ಕಮ್ಮಟ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಜೇಸಿಐ ರಾಷ್ಟ್ರೀಯ ತರಬೇತುದಾರ ಜೇಸಿ ರಾಜೇಂದ್ರ ಭಟ್ ಮಾತನಾಡಿ ದೇಶ ಮತ್ತು ರಾಜ್ಯದ ಶ್ರೇಷ್ಠ ವಾಗ್ಮಿಗಳಲ್ಲಿ ಬಹುತೇಕರು ಜೇಸಿಐ ಹಿನ್ನೆಲೆಯವರಾಗಿದ್ದಾರೆ. ವ್ಯಕ್ತಿತ್ವ ರೂಪಿಸುವುದರಲ್ಲಿ ಮತ್ತು ಮಾತುಗಾರಿಕೆ ಕಲಿಸುವಿಕೆಯಲ್ಲಿ ಜೇಸಿಐ ಅಗ್ರಸ್ಥಾನ ಪಡೆದಿದೆ. ಯುವಜನಾಂಗದವರು ಜೇಸಿಐ ತರಬೇತಿಗಳನ್ನು ಗರಿಷ್ಠ ಮಟ್ಟದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳಾರೆ ವಲಯದ ಜೇಸಿಐ ಅಧ್ಯಕ್ಷ ಲೋಕೇಶ್ ತಂಟೆಪ್ಪಾಡಿ ವಹಿಸಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಜೇಸಿಐ ಬೆಳ್ಳಾರೆ ಮಾಜಿ ಅಧ್ಯಕ್ಷ ಜಯರಾಮ್ ಉಮಿಕ್ಕಳ, ಪ್ರಧಾನ ಕಾರ್ಯದರ್ಶಿ ಪ್ರವೀಣ್‍ಕುಮಾರ್ ಬೆಳ್ಳಾರೆ, ಯುವ ಜೇಸಿಐ ಅಧ್ಯಕ್ಷ ಸಾಗರ್, ಜ್ಞಾನದೀಪ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಉಮೇಶ್ ಮಣಿಕ್ಕಾರ ಉಪಸ್ಥಿತರಿದ್ದರು.

Advertisement

ಬಾಲಚಂದ್ರ ಕೋಟೆ ಜೇಸಿಐ ವಾಣಿ ವಾಚಿಸಿದರು. ರಶೀದ್ ಬೆಳ್ಳಾರೆ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ನಂತರ ಮಾತುಗಾರಿಕಾ ಕಮ್ಮಟ ತರಬೇತಿ ಶಿಬಿರ ನಡೆಯಿತು.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 21-02-2026 | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣ | ಎಲ್ಲೆಲ್ಲಾ ಮಳೆ ಇದೆ…? ಎಷ್ಟು ದಿನ ಮಳೆ ಸಾಧ್ಯತೆ…?
February 21, 2026
2:42 PM
by: ದ ರೂರಲ್ ಮಿರರ್.ಕಾಂ
ಮಿಶ್ರ ಕೃಷಿಯತ್ತ ಮಲೆನಾಡಿನ ರೈತನ ಹೆಜ್ಜೆ ಅನಿವಾರ್ಯ
February 21, 2026
10:19 AM
by: ಮಹೇಶ್ ಪುಚ್ಚಪ್ಪಾಡಿ
ನಂದಿನಿ ಉತ್ಪನ್ನಗಳ ವಿರುದ್ಧದ ವದಂತಿ ನಂಬಬೇಡಿ : ಗ್ರಾಹಕರಿಗೆ ಕೆಎಂಎಫ್ ಮನವಿ
February 21, 2026
10:03 AM
by: ದ ರೂರಲ್ ಮಿರರ್.ಕಾಂ
ರೈತರಿಗೆ ಗನ್ ಪರವಾನಗಿ : ಶೀಘ್ರದಲ್ಲೇ ಆನ್ಲೈನ್ ವ್ಯವಸ್ಥೆ ಜಾರಿ – ಜಿಲ್ಲಾಧಿಕಾರಿ ದರ್ಶನ್ ಎಚ್.ವಿ
February 21, 2026
9:59 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror