*ಹುಚ್ಚನು ನಾನಲ್ಲ…* 

May 3, 2019
7:30 AM
ಹುಟ್ಟಿದಾಗ ಹುಚ್ಚನು ನಾನಲ್ಲ..
ನನ್ನಂತ ಸುಖಿ ಬೇರಾರು ಇರಲಿಲ್ಲ..
ಕಣ್ಣಿಗೆ ಕಂಡದ್ದನ್ನೇ ಸತ್ಯ ಅಂದುಕೊಂಡೆ ನಾನು
ಸುಖವೂ ಹೋಗಿ ದುಃಖ ಬಂತು ಮೋಸ ಹೋದೆ ನಾನು ||1||
ಜನರಾರು ಸೇರಿಸಲಿಲ್ಲ ಅವರ ಹತ್ತಿರ ನನ್ನನು
ಬೀದಿಯಲ್ಲಿ ಹುಚ್ಚನಾಗಿ ಅಲೆದಾಡಿದೆ ನಾನು
ನಾಯಿತಿಂದುಳಿದ ಆಹಾರವೇ ಮೃಷ್ಟಾನ್ನವೆಂದುಕೊಂಡೆ
ಹರಕಲು‌‌ಗೋಣಿಯಿಂದ ಮಾನ ಮುಚ್ಚಿಕೊಂಡೆ ||2||
ಹುಟ್ಟುತ್ತಾ ನಾನು ಹುಚ್ಚನಲ್ಲ,ಜನ ನನ್ನ ಹುಚ್ಚ ಅಂದ್ರು
ನನ್ನವರೇ ನನ್ನ ಬೀದಿಗಟ್ಟಿ, ಇದೇ ನಿನ್ನ ಜಾಗ ಅಂದ್ರು
ಪುಟಾಣಿ ಮಕ್ಕಳು‌‌ ನನ್ನ ನೋಡಿ ಕಲ್ಲು ಹೊಡೆದು ಬಿಟ್ರು
ಹಣೇಲಿ ಸುರಿದ ರಕ್ತ ನೋಡಿ,ಜನ ಕೇಕೇ ಹಾಕಿ ನಕ್ರು ||3||
ಹುಟ್ಟುತ್ತಾ ನಾನು ಹುಚ್ಚನಲ್ಲ,ನಿಮ್ಮಂತೆ ನಾನಿದ್ದೆ ಅಂದೆ
ಯಾರಿಗೂ ನನ್ನ ಮಾತು ಕೇಳಲೇ ಇಲ್ಲ
ಧಾರಕಾರ ಸುರಿದ  ಮಳೆಯಲಿ ಕಣ್ಣೀರು ಕೂಡಿ ಹೋಯ್ತು
ಒಂದಿಬ್ಬರು ಸಾಂತ್ವಾನ ಕೇಂದ್ರ ಸೇರಿಸಿ ಬಿಟ್ರು ||4||
ಹುಚ್ಚನಾದ ನಾನು ಮತ್ತೆ ಎಲ್ಲರಂತಾಗಿ ಬಿಟ್ಟೆ
ಜನ ಮತ್ತೆ ನನ್ನ ಸೇರಿಸ್ಕೋತಾರೆ ಅಂದುಕೊಂಡು ಬಿಟ್ಟೆ
ಎಲ್ರೂ ಮತ್ತೆ ಹುಚ್ಚ ಎಂದು ಕರೆದು ಬಿಟ್ರು
ಹುಚ್ಚ ಅನ್ನೋ ಹೆಸರೇ ನನಗೆ ಖಾಯಂ ಆಗೋಯ್ತು… ||5||
‌‌
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಗ್ರಾಮೀಣ ಮೌಲ್ಯಗಳು ಮತ್ತು ನಗರ ಜೀವನ – ಸಮತೋಲನವೇ ನಿಜವಾದ ಮಾರ್ಗ!
April 18, 2026
7:28 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ – ಎಳೆಯ ಹಲಸಿನ ಕಾಯಿ ಬಾಲ್ : ಕರಕರಾ, ರುಚಿಕರ ಮತ್ತು ಆರೋಗ್ಯಕರ ಸ್ನ್ಯಾಕ್
April 11, 2026
6:16 PM
by: ದಿವ್ಯ ಮಹೇಶ್
ಕುಟುಂಬದಲ್ಲೇ ಆರೋಗ್ಯದ ಬೀಜ – ಕುಟುಂಬದಲ್ಲಿ ಆರೋಗ್ಯಕರ ಅಭ್ಯಾಸಗಳ ಬೆಳವಣಿಗೆ
April 10, 2026
6:11 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಮತ್ತು ನಾಗರಿಕ ಸಂಸ್ಕೃತಿ – ಸಮಾಜದ ನಿಜವಾದ ಅಳತೆ
April 5, 2026
9:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror