ಹೊಸ ತಲೆಮಾರು ಓದಿನಿಂದ ದೂರ ಸರಿಯುವುದು ಪತ್ರಿಕಾ ಕ್ಷೇತ್ರಕ್ಕೆ ಸವಾಲು- ಡಾ.ಕೇನಾಜೆ : ಸುಳ್ಯದಲ್ಲಿ ಪತ್ರಿಕಾ ದಿನಾಚರಣೆ- ಸನ್ಮಾನ

July 30, 2020
4:51 PM

ಸುಳ್ಯ: ಆಧುನಿಕ ಯುಗದಲ್ಲಿ ಹೊಸ ತಲೆಮಾರು ಓದಿನಿಂದ ದೂರ ಸರಿಯುತಿರುವುದು ಪತ್ರಿಕಾ ಕ್ಷೇತ್ರದ ದೊಡ್ಡ ಸವಾಲು ಎಂದು ಪುತ್ತೂರು ಡಾ.ಶಿವರಾಮ ಕಾರಂತ ಬಾಲವನದ ಆಡಳಿತಾಧಿಕಾರಿ, ಲೇಖಕ ಡಾ.ಸುಂದರ ಕೇನಾಜೆ ಹೇಳಿದ್ದಾರೆ.

Advertisement

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಗುರುವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು. ಜಾಗೃತಿ, ಅರಿವು ಮೂಡಿಸುವ ಬದಲು ಹಲವು ಸಂದರ್ಭದಲ್ಲಿ ಮಾಧ್ಯಮಗಳು ಭಯಗೊಳಿಸುತ್ತವೆ. ಭಯಗೊಳಿಸುವ ವಾತಾವರಣದಿಂದ ಜನರು ದೂರ ಹೋಗುವ ಸಾಧ್ಯತೆ ಹೆಚ್ಚು. ಆದುದರಿಂದ ಅರಿವು, ತಿಳುವಳಿಕೆ ಮತ್ತು ಜಾಗೃತಿ ಮೂಡಿಸುವ ಮೂಲಕ ಮಾಧ್ಯಮಗಳು ಜನರನ್ನು ಹತ್ತಿರವಾಗಿಸಬೇಕು. ಶಿಕ್ಷಣ, ಆರೋಗ್ಯ, ಕಲೆ, ಸಾಹಿತ್ಯವನ್ನು ನಾವು ಎಂದೂ ಉದ್ಯಮ ಎಂದು ಪರಿಗಣಿಸಿಲ್ಲ. ಆದರೆ ಅದೇ ಸಾಲಿಗೆ ಸೇರುವ ಪತ್ರಿಕಾ ಕ್ಷೇತ್ರ ಉದ್ಯಮವಾಗಿದೆ. ಇದು ಈ ಕ್ಷೇತ್ರದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗುತಿದೆ. ಇಂದಿನ ಸವಾಲಿನ ಸಂದರ್ಭದಲ್ಲಿ ಪತ್ರಿಕೆಗಳು ಉದ್ಯಮ ಆಗದೇ ಇದ್ದರೆ ಜನರನ್ನು ಇನ್ನಷ್ಟು ಹತ್ತಿರ ಮಾಡಬಹುದು. ಅದು ಸಾಧ್ಯವಾಗದೇ ಇದ್ದರೆ ಮುದ್ರಣ ಮಾಧ್ಯಮ ದೊಡ್ಡ ಸವಾಲನ್ನು ಎದುರಿಸಬೇಕಾದಿತು ಎಂದು ಅವರು ಹೇಳಿದರು.

ಪತ್ರಿಕಾ ಮೌಲ್ಯವನ್ನು ಕಾಪಾಡುವುದು ಮುಖ್ಯ: ಎನ್.ಭವಾನಿಶಂಕರ್

ಕಾರ್ಯಕ್ರಮವನ್ನು ಉದ್ಘಾಟಿಸಿದ ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ ಟೀಕೆ ಮಾಡುವುದು ಮಾತ್ರವಲ್ಲ ಅಭಿವೃದ್ಧಿಗೂ ಪತ್ರಕರ್ತರು ಹೆಚ್ಚು ಗಮನ ಕೊಡುವುದು ಅಶಾದಾಯಕ ಬೆಳವಣಿಗೆ ಎಂದು ಹೇಳಿದರು. ಪತ್ರಿಕಾ ಮಾಧ್ಯಮಗಳು ಮೌಲ್ಯವನ್ನು ಕಾಪಾಡಿಕೊಳ್ಳಬೇಕು ಮತ್ತು ರಚನಾತ್ಮಕವಾಗಿರಬೇಕು. ನಿಷ್ಪಕ್ಷಪಾತ ಮತ್ತು ನಿರ್ಭೀತ ಮಾಧ್ಯಮಗಳು ಜನರ ವಿಶ್ವಾಸ ಗಳಿಸಲು ಸಾಧ್ಯ ಎಂದು ಹೇಳಿದರು‌.

ಪತ್ರಿಕೆಗಳೆಂದರೆ ವಿಶ್ವಾಸಾರ್ಹತೆ- ಎಂ.ಆರ್.ಹರೀಶ್

Advertisement

ಸನ್ಮಾನ ನೆರವೇರಿಸಿ ಮಾತನಾಡಿದ ಸುಳ್ಯ ಪೊಲೀಸ್ ಉಪನಿರೀಕ್ಷಕ ಎಂ.ಆರ್.ಹರೀಶ್ ‘ಪತ್ರಿಕಾ ಸುದ್ದಿಗಳಿಗೆ ಇರುವ ವಿಶ್ವಾಸಾರ್ಹತೆ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಅದು ಪ್ರತಿ ದಿನ ಮಾಹಿತಿಯ ದೊಡ್ಡ ಖಣಜವನ್ನೇ ಕಟ್ಟಿ ಕೊಡುತ್ತದೆ ಎಂದು ಹೇಳಿದರು. ಬ್ಯಾಂಕಿಂಗ್, ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಕ್ಕೆ ಕರಾವಳಿ ಭಾಗದ ಕೊಡುಗೆ ಬಹಳ ದೊಡ್ಡದು. ಕೊರೋನಾ ಕಾಲದಲ್ಲಿ ಪತ್ರಕರ್ತರು ದೊಡ್ಡ ಸೇವೆಯನ್ನೇ ನೀಡಿದ್ದಾರೆ
ಎಂದು ಅವರು ಅಭಿಪ್ರಾಯಪಟ್ಟರು.

ಪತ್ರಿಕಾ ಕ್ಷೇತ್ರದ ಸೇವೆಗಾಗಿ ಶಂಕರ ಪೆರಾಜೆ ಅವರನ್ನು ಸನ್ಮಾನಿಸಲಾಯಿತು. ಡಾ.ಸುಂದರ ಕೇನಾಜೆ ಅವರನ್ನು ಗೌರವಿಸಲಾಯಿತು.
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮುರಳೀಧರ ಅಡ್ಡನಪಾರೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗಿರೀಶ್ ಅಡ್ಪಂಗಾಯ, ಕೋಶಾಧಿಕಾರಿ ಸತೀಶ್ ಹೊದ್ದೆಟ್ಟಿ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಗಂಗಾಧರ ಕಲ್ಲಪಳ್ಳಿ ಸ್ವಾಗತಿಸಿದರು. ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ದುರ್ಗಾಕುಮಾರ್ ನಾಯರ್ ಕೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು, ತೇಜೇಶ್ವರ ಕುಂದಲ್ಪಾಡಿ ಸನ್ಮಾನ ಪತ್ರ ವಾಚಿಸಿದರು, ಶಿವಪ್ರಸಾದ್ ಕೇರ್ಪಳ ವಂದಿಸಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಲೋಕೇಶ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶದಾದ್ಯಂತ ಸಾಮಾನ್ಯ ಮಳೆ | ಮಲೆನಾಡು-ಕರಾವಳಿಯಲ್ಲಿ ವ್ಯಾಪಕ ಮಳೆ ಸಾಧ್ಯತೆ
July 16, 2025
7:51 AM
by: ದ ರೂರಲ್ ಮಿರರ್.ಕಾಂ
ಆರೋಗ್ಯದಲ್ಲಿ ಈ ರಾಶಿಯವರಿಗೆ ದೀರ್ಘಕಾಲದ ಕಾಯಿಲೆಯಿಂದ ಚೇತರಿಕೆ
July 16, 2025
7:17 AM
by: ದ ರೂರಲ್ ಮಿರರ್.ಕಾಂ
ಭೂಮಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ
July 15, 2025
9:39 PM
by: ದ ರೂರಲ್ ಮಿರರ್.ಕಾಂ
ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗೃಹಗಳ ವ್ಯವಸ್ಥೆಗೆ ಕ್ರಮ
July 15, 2025
9:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group