ಸವಣೂರು: ಬೆಳಂದೂರು ಜಿ.ಪಂ.ವ್ಯಾಪ್ತಿಯ ಸವಣೂರು ಗ್ರಾ.ಪಂ.ಕ್ಕೊಳಪಟ್ಟ ಅಂಕತ್ತಡ್ಕ-ಬಂಬಿಲ-ಮಂಜುನಾಥನಗರ ಸಂಪರ್ಕ ರಸ್ತೆ ಅಭಿವೃದ್ದಿ ಕೆಲಸ ನ.9ರಂದು ಆರಂಭಗೊಂಡಿತು.ಈ ಮೂಲಕ ಈ ಭಾಗದ ಬಹುವರ್ಷಗಳ ಬೇಡಿಕೆಯೊಂದು ಈಡೇರುವ ಹಂತಕ್ಕೆ ಬಂದಿದೆ.
ಲೋಕೋಪಯೋಗಿ ಇಲಾಖೆಯ 5-50 ಅಪೆಂಡಿಕ್ಸ್-ಇ ಯೋಜನೆಯ ಮೂಲಕ 2 ಕೋಟಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಆರಂಭವಾಗಿದೆ. ಮಳೆಗಾಲದಲ್ಲಿ ಈ ರಸ್ತೆಯೂ ಸಂಪೂರ್ಣವಾಗಿ ಹದೆಗೆಟ್ಟು ಸಂಚರಿಸುವುದೇ ಕಷ್ಟಕರವಾದ ಪರಿಸ್ಥಿತಿ ಇಲ್ಲಿತ್ತು.ಪ್ರತೀ ಬಾರಿಯೂ ಮಳೆಗಾಲದಲ್ಲಿ ಊರಿನ ಪ್ರಮುಖರು ಸೇರಿಕೊಂಡು ತಮ್ಮ ಸ್ವಂತ ಖರ್ಚಿನಲ್ಲಿ ಕೆಂಪು ಕಲ್ಲು, ದಪ್ಪ ಮರಳು ತಂದು ಹೊಂಡಮುಚ್ಚಿಸಿ, ರಸ್ತೆ ದುರಸ್ಥಿಪಡಿಸುವ ಮೂಲಕ ಸಾರ್ವಜನಿಕರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದರು.ಮುಂದಕ್ಕೆ ಈ ಸಮಸ್ಯೆ ತಪ್ಪಲಿದೆ.
ಹಿರಿಯರಾದ ಭಾರತಿ ಗ್ರಾಮ ವಿಕಾಸ ಪ್ರತಿಷ್ಟಾನದ ಸ್ಥಾಪಕಾಧ್ಯಕ್ಷ ಬಿ.ಕೆ.ರಮೇಶ್ ಬಂಬಿಲ ಚಾಲನೆ ನೀಡಿದರು.
ಈ ಸಂದರ್ಭ ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ,ಉಪಾಧ್ಯಕ್ಷ ರವಿಕುಮಾರ್ ಬಿ.ಕೆ,ಮಾಜಿ ಸದಸ್ಯ ಸುಧೀರ್ ಕುಮಾರ್ ರೈ ಕುಂಜಾಡಿ,ಚೈತನ್ಯ ರೈತ ಶಕ್ತಿಗುಂಪಿನ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ,ಪಾಲ್ತಾಡಿ ಗ್ರಾಮ ವಿಕಾಸ ಸಮಿತಿಯ ಗೌರವ ಸಲಹೆಗಾರ ಸುಧಾಕರ ರೈ ಕುಂಜಾಡಿ,ಸಿದ್ದಿವಿನಾಯಕ ಸೇವಾ ಸಂಘದ ಅಧ್ಯಕ್ಷ ಪ್ರವೀಣ್ ಬಂಬಿಲದೋಳ,ನವೀನ್ ಕುಮಾರ್ ರೈ ಕುಂಜಾಡಿ,ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ರೈ ಬೈಲಾಡಿ,ಸದಸ್ಯರಾದ ಜಯಪ್ರಕಾಶ್,ಪ್ರಶಾಂತ್ ಕುಂಜಾಡಿ,ರುಕ್ಮಯ್ಯ,ಮಂಜುನಾಥನಗರ ಹಿ.ಪ್ರಾ.ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ ವಿಮಲಾ,ಸವಿತಾ ಹರೀಶ್ ರೈ ಮೊದಲಾದವರಿದ್ದರು.