ಅಂಗಾರರು ಸಚಿವರಾಗುತ್ತಾರಾ..? ಸುಳ್ಯಕ್ಕೆ ಒಲಿದು ಬರುತ್ತದಾ ಗೂಟದ ಕಾರು?

July 24, 2019
9:45 AM

* ಸ್ಪೆಷಲ್ ಕರೆಸ್ಪಾಂಡೆಂಟ್, ಸುಳ್ಯನ್ಯೂಸ್.ಕಾಂ

Advertisement
Advertisement
Advertisement
Advertisement
Advertisement

ಸುಳ್ಯ:  ಹಲವು ದಿನಗಳ ಅನಿಶ್ಷಿತತೆ, ಗೊಂದಲಗಳ ಕೊನೆಯಲ್ಲಿ ಮೈತ್ರಿ ಸರಕಾರ ಪತನಗೊಂಡಿದೆ. ವಿಶ್ವಾಸ ಮತ ಪಡೆಯಲು ವಿಫಲರಾಗಿ ಕುಮಾರಸ್ವಾಮಿ ಸರಕಾರ ಗದ್ದುಗೆಯಿಂದ ಇಳಿದಿದೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ ರಚಿಸುವ ಹೊಸ್ತಿಲಲ್ಲಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುತ್ತದೆ ಎಂಬ ಸ್ಥಿತಿ ಉಂಟಾಗುತ್ತಿದ್ದಂತೆ ಸುಳ್ಯದ ಜನರಲ್ಲಿಯೂ ನಿರೀಕ್ಷೆ ಗರಿಗೆದರಿದೆ. ಸುಳ್ಯ ಶಾಸಕ ಎಸ್.ಅಂಗಾರ ಸಚಿವರಾಗುತ್ತಾರಾ.. ಸುಳ್ಯಕ್ಕೆ ಗೂಟದ ಕಾರು ಒಲಿದು ಬರುತ್ತದಾ. ಮುಖ್ಯಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡರ ಬಳಿಕ ಮತ್ತೊಮ್ಮೆ ಸುಳ್ಯಕ್ಕೆ ಸಚಿವ ಗಿರಿಯ ಸಂಭ್ರಮ ಒಲಿಯುತ್ತದಾ ಹೀಗೆ ಹಲವು ಚರ್ಚೆಗಳು ಆರಂಭವಾಗಿದೆ. ಬಿಜೆಪಿಯ ಹೊಸ ಸರಕಾರ ಬಂದರೆ ಅಂಗಾರರು ಸಚಿವರಾಗುತ್ತಾರಾ ಎಂಬ ಜಿಜ್ಞಾಸೆ ಕೆಲವು ದಿನಗಳಿಂದ ಇತ್ತು. ಇದೀಗ ಮೈತ್ರಿ ಸರಕಾರ ಪತನಗೊಂಡು ಬಿಜೆಪಿ ಸರಕಾರ ಬರುತ್ತದೆ ಎಂದಾದ ಕೂಡಲೇ ರಾಜಕೀಯ ವಲಯದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಅಂಗಾರರ ಸಚಿವ ಸ್ಥಾನದ ಕುರಿತು ಚರ್ಚೆ ನಡೆಯುತ್ತಿದೆ. ಸತತ ಆರು ಬಾರಿ ಶಾಸಕರಾಗಿರುವ ಅಂಗಾರರು ಸಚಿವರಾಗುತ್ತಾರಾ, ಅಥವಾ ಮತ್ತೆ ಕಡೆಗಣಿಸಲ್ಪಡುತ್ತಾರಾ ಎಂಬ ಅಭಿಪ್ರಾಯಗಳು ವ್ಯಕ್ತವಾಗುತಿದೆ.

Advertisement

ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಅಂಗಾರರನ್ನು ಸಚಿವರನ್ನಾಗಿ ಮಾಡಬೇಕು ಎಂಬ ಬೇಡಿಕೆ, ಒತ್ತಾಯ ಕೇಳಿ ಬಂದಿತ್ತು. ಆದರೆ ಇದುವರೆಗೂ ಸಚಿವ ಭಾಗ್ಯ ಒಲಿದು ಬರಲಿಲ್ಲ. 20 ತಿಂಗಳು ಬಿಜೆಪಿ-ಜೆಡಿಎಸ್ ಮೈತ್ರಿ ಸರಕಾರ ಇದ್ದ ಸಂದರ್ಭದಲ್ಲಿ ಬೇಡಿಕೆ ಇದ್ದರೂ ಅವಕಾಶ ಇರಲಿಲ್ಲ. ಬಳಿಕ ಬಿಜೆಪಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕಾಗಿ ಬಂದಾಗ ಈ ಬಾರಿ ಸಚಿವ ಸ್ಥಾನ ಗ್ಯಾರಂಟಿ ಎಂದು ಸುಳ್ಯದ ಜನತೆ ನಂಬಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿ ಆದ ಬಳಿಕ ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್ ಸರಕಾರದಲ್ಲೂ ಅಂಗಾರರಿಗೆ ಸಚಿವ ಸ್ಥಾನದ ಬೇಡಿಕೆ ಇದ್ದರೂ ಅವಕಾಶ ದೊರೆಯಲಿಲ್ಲ. ಸದಾನಂದ ಗೌಡರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಶೆಟ್ಟರ್ ಸರಕಾರ ಅಧಿಕಾರಕ್ಕೆ ಏರಿದಾಗ ಅಂಗಾರರಿಗೆ ಸಚಿವ ಸ್ಥಾನ ನೀಡದಿರುವುದನ್ನು ವಿರೋಧಿಸಿ ಸುಳ್ಯ ಬಿಜೆಪಿ ಮಂಡಲ ಸಮಿತಿಯ ಎಲ್ಲಾ ಪದಾಧಿಕಾರಿಗಳು ರಾಜಿನಾಮೆ ನೀಡಿ ಒಂದು ತಿಂಗಳ ಕಾಲ ಬಿಜೆಪಿ ಕಚೇರಿಯನ್ನೇ ಮುಚ್ಚಿದ್ದ ಪ್ರಸಂಗ ನಡೆದಿತ್ತು. 2018ರಲ್ಲಿ ಬಿಜೆಪಿ ಅಧಿಕಾರಕ್ಕೆ ಏರಿದಾಗ ಈ ಬಾರಿ ಅಂಗಾರರು ಸಚಿವರಾಗುತ್ತಾರೆ ಎಂದು ಜನ ಬಲವಾಗಿ ನಂಬಿದ್ದರು. ಆದರೆ ಸರಕಾರ ಎರಡೇ ದಿನದಲ್ಲಿ ಉರುಳಿದ ಕಾರಣ ನಿರೀಕ್ಷೆ ಕಮರಿತ್ತು. ಇದೀಗ ಮತ್ತೆ ನಿರೀಕ್ಷೆ ಗರಿಗೆದರಿದೆ.

ಜಿಲ್ಲೆಯ ಹಿರಿಯ ಶಾಸಕ:
ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹಿರಿಯ ಶಾಸಕ ಎಸ್.ಅಂಗಾರ. ಜಿಲ್ಲೆಯಲ್ಲಿ ಎಂಟು ಸ್ಥಾನಗಳ ಪೈಕಿ ಏಳು ಶಾಸಕರು ಬಿಜೆಪಿಯವರು. ಇವರಲ್ಲಿ ಆರು ಬಾರಿ ಶಾಸಕರಾಗಿರುವ ಅಂಗಾರರೇ ಹಿರಿಯರು. ಉಳಿದ ಆರು ಮಂದಿ ಪ್ರಥಮ ಬಾರಿ ಶಾಸಕರಾಗಿದ್ದಾರೆ.
ಆರು ಬಾರಿ ಶಾಸಕರಾಗಿದ್ದ ಸಂದರ್ಭದಲ್ಲಿ ಸುಮಾರು ಆರೂವರೆ ವರ್ಷಗಳ ಕಾಲ ಬಿಜೆಪಿ ಸರಕಾರವೇ ಇತ್ತು. ಆದರೆ ಯಾವುದೇ ಪ್ರಮುಖ ಸರಕಾರಿ ಸ್ಥಾನಗಳು ಅಂಗಾರರಿಗೆ ಒಲಿದು ಬರಲಿಲ್ಲ. ಸ್ವತಃ ಅಂಗಾರರೇ ಅಧಿಕಾರ ಸ್ಥಾನದ ಹಿಂದೆ ಹೋಗಿರಲಿಲ್ಲ. ಸ್ಥಾನ ಮಾನ ನೀಡಬೇಕೆಂಬ ಬೇಡಿಕೆಯನ್ನು ಎಲ್ಲೂ ಇಟ್ಟಿರಲಿಲ್ಲ. ಶೆಟ್ಟರ್ ಸರಕಾರ ಅಧಿಕಾರ ವಹಿಸಿದ ಸಂದರ್ಭದಲ್ಲಿ ‘ಹಿರಿಯರನ್ನು ಕಡೆಗಣಿಸುತ್ತಿದ್ದಾರೆ’ ಎಂಬ ಒಂದು ಅಸಮಾಧಾನ ಹೊರಹಾಕಿದ್ದು ಬಿಟ್ಟರೆ ಬೇರೆಲ್ಲೂ ಅಧಿಕಾರಕ್ಕಾಗಿ ಬೇಡಿಕೆ ಇಟ್ಟವರಲ್ಲ, ಲಾಬಿಯೂ ಮಾಡಿದವರಲ್ಲ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಸ್ಸಾಂನಲ್ಲಿ ವಶಪಡಿಸಿಕೊಂಡ 60,000 ಕೆಜಿಗೂ ಹೆಚ್ಚು ಅಡಿಕೆಯ ಒಡೆಯರು ಯಾರು…? | ಅಧಿಕಾರಿಗಳಿಗೆ ತಲೆನೋವಾದ ಅಡಿಕೆ…! |
March 6, 2025
12:27 PM
by: The Rural Mirror ಸುದ್ದಿಜಾಲ
ಹೊಸರುಚಿ | ಗುಜ್ಜೆ ಕಟ್ಲೇಟ್
March 6, 2025
11:27 AM
by: ದಿವ್ಯ ಮಹೇಶ್
ಕುಂಭಮೇಳ | ಪ್ರಯಾಗ ತಲಪುವಾಗ ಸಂತಸವೇ ಸಂತಸ…
March 6, 2025
10:52 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಮಾರ್ಚ್ ಆರಂಭದಲ್ಲೇ ರಾಜ್ಯದ ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚಳ
March 4, 2025
10:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror