ಸುಳ್ಯ:ಅಜಾತಶತ್ರು, ಜನಪ್ರಿಯ ಶಾಸಕ ಎಸ್. ಅಂಗಾರರವರಿಗೆ ಮಂತ್ರಿ ಪದವಿ ನೀಡಿ ಸುಳ್ಯ ತಾಲೂಕಿನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಬೇಕೆಂದು ಸುಳ್ಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಕಳಂಜ ವಿಶ್ವನಾಥ ರೈ ಮುಖ್ಯ ಮಂತ್ರಿಗಳಿಗೆ ಮನವಿ ಮುಖಾಂತರ ಒತ್ತಾಯಿಸಿದ್ದಾರೆ.
ಸುಳ್ಯ ತಾಲೂಕು ರಾಜ್ಯದಲ್ಲಿ ಹೋಲಿಸಿದರೆ ಅಭಿವೃದ್ಧಿಯಾಗಲು ತುಂಬಾ ಹಿಂದುಳಿದಿದ್ದು ಅಂಗಾರವರಿಗೆ ಮಂತ್ರಿ ಪದವಿ ನೀಡಿ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಗೆ ಸಹಕರಿಸುವಂತೆ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಹಾಗೂ ತಾಲೂಕಿನ ಎಲ್ಲಾ ವರ್ಗಗಳ ಜನರಲ್ಲೂ ಪ್ರೀತಿಯನ್ನು ಗಳಿಸಿಕೊಂಡು ಸರಳ ಸಜ್ಜನಿಕೆ ಶಿಸ್ತಿನ ಅಜಾತಶತ್ರುವಾಗಿ ಎಲ್ಲರ ಪ್ರೀತಿಗೆ ಪಾತ್ರರಾದ ಮಾನ್ಯ ಎಸ್. ಅಂಗಾರರವರಿಗೆ ಕ್ಯಾಬಿನೆಟ್ ದರ್ಜೆಯ ಮಂತ್ರಿ ಪದವಿಯನ್ನು ನೀಡಿ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಆಶೋತ್ತರಗಳನ್ನು ನೀಗಿಸಬೇಕೆಂದು ಕಳಕಳಿಯ ಮನವಿಯೊಂದಿಗೆ ಮುಖ್ಯ ಮಂತ್ರಿಯವರನ್ನು ಜಿಲ್ಲೆಯ ಎಲ್ಲಾ ಸಹಕರಿಗಳ ಹಾಗೂ ಕೃಷಿಕರ ಒಕ್ಕೊರಲಿನ ಅಭಿಪ್ರಾಯವೆಂದು ಪತ್ರದ ಮುಖಾಂತರ ಮನವರಿಕೆ ಮಾಡಲಾಗಿದೆ ಎಂದು ಕಳಂಜ ವಿಶ್ವನಾಥ ರೈತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಬಾರಿ ಬಜೆಟ್ ಮೇಲೆ ರೈತಾಪಿ ವರ್ಗ ಬಹಳ ನಿರೀಕ್ಷೆ…
ಸಾರಡ್ಕದಲ್ಲಿ ನಡೆದ ಕೃಷಿಹಬ್ಬದ ಬಗ್ಗೆ ಸಾವಯವ ಕೃಷಿಕ ಎ ಪಿ ಸದಾಶಿವ ಅವರ…
ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್‌ನಲ್ಲಿ ಉಂಟಾದ ಎರಡನೇ ಕಾಡ್ಗಿಚ್ಚು ಪ್ರಕರಣ ಇದಾಗಿದೆ.…
ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…
ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…