ಅಂತರಾಷ್ಟ್ರೀಯ ಯೋಗ ದಿನಾಚರಣೆ….

June 21, 2020
8:38 AM
ಯೋಗೇನ ಚಿತ್ತಸ್ಯ ಪದೇನ ವಾಚಾಂ
ಮಲಂ ಶರೀರಸ್ಯ ಚವೈದ್ಯಕೇನಾ
ಯೋಪಾ ಕರೋತ್ಂ ಪ್ರವರಂ ಮುನೀನಾಂ
ಪತಂಜಲಿಂ ಪ್ರಾಂಜಲಿ ರಾನತೋಸ್ಮಿ. 
ನಮ್ಮ ದೇಶದ ಹೆಮ್ಮೆ ಯೋಗ. ಪ್ರಾಚೀನ ಪರಂಪರೆಯ ಕೊಡುಗೆ. ಆಯುರ್ವೇದ ವೈದ್ಯ ಪದ್ಧತಿಯೊಂದಿಗೆ  ಯೋಗದ ಕೊಡುಗೆಯೂ ಮಹತ್ವದ್ದು.  ಪತಂಜಲಿ ಮಹರ್ಷಿಯೋಗ ಪಿತಾಮಹ. ಯೋಗದ ಸೂತ್ರಗಳನ್ನು ಕ್ರೋಡೀಕರಿಸಿದವರು.ಹತ್ತು ಹದಿನೈದು ವರುಷಗಳಿಂದ ಯೋಗದ ಸ್ವರೂಪ ಬದಲಾಗುತ್ತಿದೆ. ಯೋಗಕ್ಕೆ ಅಂತರಾಷ್ಟ್ರೀಯ ಮನ್ನಣೆ ದೊರೆಯುವಲ್ಲಿ  ಪ್ರಮುಖ ಪಾತ್ರ ವಹಿಸಿದವರು ನಮ್ಮ ಪ್ರಧಾನ ಮಂತ್ರಿಯವ    ರಾದ ನರೇಂದ್ರ ಮೋದಿಯವರು.
ಕೆಲವು  ವರ್ಷಗಳ ಹಿಂದೆ ಜಗತ್ತಿನ ದೃಷ್ಟಿ ಯಲ್ಲಿ ಭಾರತ ಹೀಗಿರಲಿಲ್ಲ. , ಭಾರತವೆಂದರೆ ಹಾವಾಡಿಗರ ದೇಶ, ಅಜ್ಞಾನ ಮೌಢ್ಯಗಳ ತವರೂರು, ಗಲೀಜು ದೇಶ, ಅನಕ್ಷರಸ್ಥರ ದೇಶ, ಅಲ್ಲಿನ ಜನರು  ಹೊರಗಿನಿಂದ ಬಂದವರನ್ನು ಸುಲಿಗೆ ಮಾಡುತ್ತಾರೆ ಎಂಬ ವಿಷಯಗಳೇ‌ ಪ್ರಮುಖ ವಾಹಿನಿಗಳಲ್ಲಿ ಹರಿದಾಡುತ್ತಿತ್ತು. ಆದರೆ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ಯವರು ತಮ್ಮ ಭಾರತದ ಚಿತ್ರಣವನ್ನು ಸಂಪೂರ್ಣ ವಾಗಿ ಬದಲಿಸುವ ನಿಟ್ಟಿನಲ್ಲಿ ಕಾರ್ಯತತ್ಪರರಾದರು.  ಅವುಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡದ್ದು  “ಯೋಗ”. ಆರೋಗ್ಯದ  ದೃಷ್ಟಿಯಿಂದ ಯೋಗದ ಪ್ರಾಮುಖ್ಯತೆ ಯನ್ನು ಜಗತ್ತು ಗುರುತಿಸುವಂತೆ ಮಾಡಿದರು. ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಖಾಯಂ ಪ್ರತನಿಧಿಯಾಗಿರುವ ಅಶೋಕ್ ಕುಮಾರ್ ಮಂಡಿಸಿದ್ದರು. ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದರು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ಸೂಚಿಸಿದುವು.   ಪ್ರಪಂಚದೆಲ್ಲೆಡೆ ಈ ದಿನದಂದು ಯೋಗದಿನವಾಗಿ ಆಚರಿಸಲಾಗುತ್ತದೆ.
ಜೂನ್ 21  ವಿಶೇಷವಾದ ಆಯನ ಸಂಕ್ರಾಂತಿಯ ದಿನ. ಇಂದು ದೀರ್ಘ ಕಾಲದ ಹಗಲಿರುತ್ತದೆ.  ಉತ್ತರ ಗೋಲಾರ್ಧದಲ್ಲಿ ದೀರ್ಘ ವಾಗಿಯು, ದಕ್ಷಿಣ ಗೋಳಾರ್ಧದಲ್ಲಿ ಕಡಿಮೆ ಹಗಲು ಇರುವ ದಿನವಾಗಿದೆ. ಯೋಗದ ದೃಷ್ಟಿ ಯಲ್ಲಿ ಈ ದಿನ ಮಹತ್ವ ಪೂರ್ಣ ವಾದ ದಿನವಾಗಿದೆ.  ದಕ್ಷಿಣ ಯಾನಕ್ಕೆ ಪರಿವರ್ತನೆ  ಎಂದು  ಗುರುತಿಸುವ  ದಿನವಾಗಿದೆ. ಆಧ್ಯಾತ್ಮಿಕ ಅಭ್ಯಾಸ ಗಳಿಗೆ ದಕ್ಷಿಣ ಯಾನ ನೈಸರ್ಗಿಕ ಬೆಂಬಲವೀಯುವುದರಿಂದ ಈ ದಿನವನ್ನು ಸೂಕ್ತ ವೆಂದು ಆಯ್ದುಕೊಳ್ಳಲಾಗಿದೆ.  ದೈವ ಬಲವೂ , ಮನೋಬಲವು ಒಂದಾದರೆ  ಯಶಸ್ಸು ಖಂಡಿತ. ಯೋಗ ವೆಂದರೆ ಬರಿಯ ವ್ಯಾಯಾಮ ವಲ್ಲ. ಶಿಸ್ತು ಬದ್ಧ ಉಸಿರಾಟದೊಂದಿಗೆ ಕ್ರಮಬದ್ಧ ವಾಗಿ ಮಾಡುವ ಯೋಗವೇ ನಿಜವಾದ ಯೋಗ. ಗುರುಮುಖೇನವೇ ಯೋಗ ಕಲಿಯಬೇಕೆಂಬ ನಿಯಮವಿದೆ. ಶಿಸ್ತು, ಸಂಯಮವನ್ನು  ಯೋಗ ಕಲಿಸುತ್ತದೆ. ಮನಸಿನ ನಿಯಂತ್ರಣವನ್ನು ಹೇಗೆ ಮಾಡಬೇಕೆಂದು ಯೋಗ ತಿಳಿಸುತ್ತದೆ. ಮನೋಬಲವನ್ನು ಹೆಚ್ಚಿಸುತ್ತಾ  ಶರೀರವನ್ನು ಗಟ್ಟಿಗೊಳಿಸುವ ಶಕ್ತಿ ಯೋಗಕ್ಕಿದೆ. ನಾವು ಏನೇ ಮಾಡಿದರು ನಂಬಿಕೆಯಿದ್ದಾಗ ಮಾತ್ರ.  ಯಶಸ್ಸಿನ ನಿರೀಕ್ಷೆ ಮಾಡಬಹುದು. ಈ ಮಾತು ಯೋಗದ ವಿಷಯದಲ್ಲಿ ಅಕ್ಷರಶಃ  ಸತ್ಯ. ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಪಲಿತಾಂಶ ಖಂಡಿತ. ಯಾವುದನ್ನು ಇಷ್ಟಪಟ್ಟು ಮಾಡುತ್ತೇವೋ ಅದು ಎಷ್ಟು ಕ್ಲಿಷ್ಟಕರವಾದರೂ ನಮಗೊಲಿಯುತ್ತದೆ.  ಅದಕ್ಕಾಗಿ ಸಮಯ ಮೀಸಲಿಟ್ಟು ಮಾಡಬೇಕಲ್ಲಾ ಎಂಬ ಭಾವನೆಯಲ್ಲಿ ಮಾಡಿ ಪ್ರಯೋಜನವಿಲ್ಲ, ಯಾವುದೇ ಒತ್ತಡದಲ್ಲೂ ಮಾಡಬಾರದು( ಒತ್ತಡ ನಿವಾರಣೆಗೇ ಯೋಗ ಮಾಡುವುದು. ಅದರಿಂದಲೇ  ಒತ್ತಡವಾಗಬಾರದು) ಶಾಂತ ಮನಸ್ಥಿತಿಯಿಂದ  ಗಡಿಬಿಡಿಯಿಲ್ಲದೆ ಆರಾಮವಾಗಿ ಮಾಡಬೇಕು.
ನನ್ನ ಮಟ್ಟಿಗೆ ಯೋಗವೆಂದರೆ  personal ಸಮಯ.  ದಿನದ ಕೆಲವು ಸಮಯವನ್ನಾದರೂ  ನನಗಾಗಿ , ನನ್ನ ಆರೋಗ್ಯಕ್ಕಾಗಿ ಮೀಸಲಿಡುವ ಅಗತ್ಯ ಅರಿವಾಗಿದೆ. ಕಳೆದುಕೊಳ್ಳಲು ಮನಸೇ ಬಾರದು.  ಒಂದಷ್ಟು ಸಮಯ ನಮ್ಮ ಉಸಿರಾಟದ ಜೊತೆಯಲ್ಲಿ,  ದೇಹಕ್ಕಾಗುವ ವ್ಯಾಯಾಮ  ಕೊಡುವ ಲಾಭ ನಮ್ಮ ಊಹೆಗೂ ನಿಲುಕದ್ದು. ಆರೋಗ್ಯವಂತ ಶರೀರಕ್ಕೆ ಸಂತುಲಿತ  ಆಹಾರ ಎಷ್ಟು ಮುಖ್ಯ ವೋ  ದೇಹದ  ‌‌ಸಮತೋಲನ  ಕಾಪಾಡುವಲ್ಲಿ ಯೋಗವೂ ಅಷ್ಟೇ ಪಾತ್ರವಹಿಸುತ್ತದೆ.  ಯೋಗದ ಬಗ್ಗೆ ಗೌರವವಿರಲಿ.  ಯೋಗವನ್ನು ಪ್ರೀತಿಸಿ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಸಾಮಾಜಿಕ ಕಾರ್ಯಕರ್ತ ಧನಂಜಯ ವಾಗ್ಲೆ ಇನ್ನಿಲ್ಲ | ಅವರು ಬರೆದಿರುವ ಓದಲೇಬೇಕಾದ ಬರಹ ಇಲ್ಲಿದೆ…
July 13, 2025
5:09 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 13-07-2025 | ಇಂದು ಸಾಮಾನ್ಯ ಮಳೆ | ಕರಾವಳಿ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ – ಏಕೆ?
July 13, 2025
2:14 PM
by: ಸಾಯಿಶೇಖರ್ ಕರಿಕಳ
ಮೊಬೈಲ್‌ ಕಣ್ಣು ಮಾತ್ರವಲ್ಲ – ಮನಸ್ಸನ್ನೂ ಹಾಳು ಮಾಡುತ್ತದೆ..!
July 13, 2025
11:36 AM
by: ಮಹೇಶ್ ಪುಚ್ಚಪ್ಪಾಡಿ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶರಧಿ.ಡಿ.ಎಸ್
July 13, 2025
8:14 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group