ಕೋಲ್ಕತಾ: ಪ್ರಬಲವಾದ ಅಂಫಾನ್ ಚಂಡಮಾರುತದ ಪ್ರಭಾವ ಪಶ್ಚಿಮ ಬಂಗಾಳ ಹಾಗೂ ಒಡಿಸ್ಸಾ ಕಡಲ ತೀರದಲ್ಲಿ ಆರಂಭವಾಗಿದೆ. ಇದರ ಪರಿಣಾಮವಾಗಿ ಒಡಿಸ್ಸಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಭಾರತೀಯ ಹವಾಮಾನ ಇಲಾಖೆ, ಬಂಗಾಳ ಕೊಲ್ಲಿಯಲ್ಲಿ ಉದ್ಭವಗೊಂಡಿರುವ ಅಂಫಾನ್ ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡಿತ್ತು.
ಹವಾಮಾನ ಇಲಾಖೆಯ ಎಚ್ಚರಿಕೆಯ ಮೇರೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪಶ್ಚಿಮ ಬಂಗಾಳ ಹಾಗೂ ಒಡಿಶಾ ತೀರ ಪ್ರದೇಶದಿಂದ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.
20 ವರ್ಷಗಳ ಬಳಿಕ ಭಾರಿ ಅನಾಹುತವನ್ನುಂಟು ಮಾಡುವ ಸೈಕ್ಲೋನ್ ಆಗಿ ಪರಿವರ್ತನೆಯಾಗುವ ಭೀತಿಯಿದ್ದು, ಗಂಟೆಗೆ 100ರಿಂದ ಹಿಡಿದು 250 ಕೀ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ರವಾನಿಸಿತ್ತು.
Advertisement
ಪಶ್ಚಿಮಬಂಗಾಳದ ದಿಘಾದಿಂದ ದಕ್ಷಿಣಕ್ಕೆ ಸುಮಾರು 170 ಕಿ.ಮೀ ದೂರದಲ್ಲಿರುವ ‘ಅಮ್ಫಾನ್’ ಚಂಡಮಾರುತವು ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯ ಮೇಲೆ ತೀವ್ರವಾದ ಚಂಡಮಾರುತವಾಗಳಲಿದೆ,ಬುಧವಾರ ಮಧ್ಯಾಹ್ನ ಅಥವಾ ಸಂಜೆ ನಡುವೆ ಸುಂದರ್‌ಬನ್ಸ್ ಬಳಿ ಭೂಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement