ಪುತ್ತೂರು: ಪ್ರಾಮಾಣಿಕತೆ, ಶ್ರದ್ಧೆ ಇದ್ದರೆ ಏನನ್ನೂ ಸಾಧಿಸಬಹುದು. ದೇಶದ ಅಭಿವೃದ್ಧಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್‍ಗಳ ಅವಶ್ಯಕತೆ ತುಂಬಾ ಇದೆ. ಸುಮಾರು ಐದು ಲಕ್ಷ ಚಾರ್ಟರ್ಡ್ ಅಕೌಂಟೆಂಟ್‍ಗಳ ಅವಶ್ಯಕತೆ ಇದೆ. ಆದರೆ ಕೇವಲ ಎರಡು ಲಕ್ಷವಷ್ಟೇ ಪೂರೈಕೆಯಾಗಿದೆ. ಪ್ರಾಮಾಣಿಕ ಪ್ರಯತ್ನದಿಂದ ಮಾತಾ-ಪಿತ, ಗುರುಹಿರಿಯರ ಆಶೀರ್ವಾದದಿಂದ ನೀವೆಲ್ಲಾ ಶ್ರದ್ಧೆಯಿಂದ ಅಭ್ಯಾಸ ನಡೆಸಿ ದೇಶದ ಅವಶ್ಯಕತೆಯ ಪೂರ್ತಿಗಾಗಿ ಛಲದಿಂದ ಕೋರ್ಸ್ ಪೂರ್ತಿಗೊಳಿಸಿ ಎಂದು ಪುತ್ತೂರಿನ ಪ್ರಸಿದ್ಧ ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ರಾಮ ಭಟ್ ಹೇಳಿದರು.
ಅವರು ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಸಿ.ಎ. ಕೋಚಿಂಗ್ ತರಗತಿಯನ್ನು ಉದ್ಘಾಟಿಸಿದರು. ಅಂಬಿಕಾ ಸಮೂಹ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ವಾನ್ ಡಾ.ಸೊಂದಾ ಭಾಸ್ಕರ ಭಟ್ ಸಿ.ಎ. ಫೌಂಡೇಶನ್ ಕೋರ್ಸ್‍ನ ಬಗ್ಗೆ ಮಾಹಿತಿ ನೀಡಿದರು. ಪ್ರಾಚಾರ್ಯರಾದ ರಾಜಶ್ರೀ ನಟ್ಟೋಜ, ತರಬೇತುದಾರರಾದ ಯಶಸ್ವಿನಿ ಕೆ ಅಮೀನ್, ಅನೀಶ್ ದೇವಾಡಿಗ, ಉಪಪ್ರಾಂಶುಪಾಲರಾದ ಸತ್ಯಜಿತ್ ಉಪಾಧ್ಯಾಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಶರಣ್ಯ, ಗ್ರೀಷ್ಮಾ, ಮೇಘನಾ ಪ್ರಾರ್ಥಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಕು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.