Advertisement
ಕಾರ್ಯಕ್ರಮಗಳು

ಅಂಬಿಕಾ ಬಾಲವಿದ್ಯಾಲಯದಲ್ಲಿ ಅಜ್ಜ-ಅಜ್ಜಿ ಮೊಮ್ಮಕ್ಕಳ ಸಮ್ಮಿಲನ -ಇದು “ಬಾಂಧವ್ಯ”

Share

ಪುತ್ತೂರು : ಬಪ್ಪಳಿಗೆಯ ಅಂಬಿಕಾ ಬಾಲ ವಿದ್ಯಾಲಯದಲ್ಲಿ ನ.11 ರಂದು ಅಜ್ಜ-ಅಜ್ಜಿ ಮೊಮ್ಮಕ್ಕಳ ಸಮ್ಮಿಲನ ಕಾರ್ಯಕ್ರಮವು ಸಂಸ್ಥೆಯ ಸಂಚಾಲಕರಾದ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement
Advertisement

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರೊಫೆಸರ್ ವಿ.ಬಿ ಅರ್ತಿಕಜೆ ,ಮಣ್ಣಿನಲ್ಲಿ ಬೀಜಗಳನ್ನು ಬಿತ್ತಿ ನೀರೆರೆವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮನೆಯೊಂದು ತನ್ನ ಅರ್ಥ ಕಂಡುಕೊಳ್ಳುವುದು, ಮಕ್ಕಳು ಮೊಮ್ಮಕ್ಕಳ ಜೊತೆಗೆ ಮನೆಯ ಹಿರಿಯರು ನೆಮ್ಮದಿಯಿಂದ ಬದುಕು ಸವೆಸಿದಾಗ ಮಾತ್ರಾ. ನಮ್ಮದೇಶ ಅಂತಹ ವಿಶಿಷ್ಟ ಸಂಬಂಧಗಳ ನೆಲೆವೀಡು. ನಮ್ಮ ಜೀವನಾನುಭವಗಳನ್ನು ಧಾರೆಯೆರೆದು ಮುಂದಿನ ಪೀಳಿಗೆ ಬದುಕು ಕಟ್ಟಿಕೊಳ್ಳುವಲ್ಲಿ ನೆರವಾಗೋಣ ಎಂದು  ನುಡಿದರು.  ಈ ಸಂದರ್ಭದಲ್ಲಿ ಶಾಲಾ ವಾಚನಾಲಯಕ್ಕೆ ವಾಲ್ಮೀಕಿ ರಾಮಾಯಣ ಸಂಪುಟವನ್ನು ಕೊಡುಗೆಯಾಗಿ ಅವರು ನೀಡಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಚಾಲಕ  ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಯಾವುದೇ ವೃದ್ಧಾಶ್ರಮ ಅನಾಥಾಶ್ರಮಗಳು ಇಲ್ಲದೆ ಇರುವ ನಾಡೊಂದು ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.

ಸಂಚಾಲಕರು ಮುಖ್ಯ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟಿನ ಖಜಾಂಜಿ ರಾಜಶ್ರೀ ನಟ್ಟೋಜ, ಮುಖ್ಯೋಪಾಧ್ಯಾಯಿನಿ ಸುಜನೀ ಬೋರ್ಕರ್, ಸಹ ಮುಖ್ಯೋಪಾಧ್ಯಾಯಿನಿ ಮಾಲತಿ ಡಿ ಭಟ್ ಉಪಸ್ಥಿತರಿದ್ದರು.

Advertisement

ಕೆ.ಜಿ ವಿಭಾಗದ ಶಿಕ್ಷಕಿ ಮಾಲತಿ ಶೆಟ್ಟಿ ಅತಿಥಿಗಳ ಪರಿಚಯಿಸಿದರು. ಎಲ್.ಕೆ.ಜಿ ಯ ಮೈತ್ರೇಯಿ ಪ್ರಾರ್ಥಿಸಿದರು. ಚಿರಂಜೀವಿ ಮಯೂರ್ ಮಯ್ಯ ಸ್ವಾಗತಿಸಿ, ಖ್ಯಾತಿ ವಂದಿಸಿದರು.

 ಕಾರ್ಯಕ್ರಮಕ್ಕೆ ಸಂತಸದಿಂದ ಆಗಮಿಸಿದ ಪುಟಾಣಿಗಳು ಅವರೇ ತಯಾರಿಸಿದ ಗೂಡುದೀಪ , ಅಲಂಕಾರಿಕ ಹಣತೆಗಳಿಂದ ಶೃಂಗರಿಸಿದ ತುಂಬಿದ ಸಭೆಯಲ್ಲಿ ಅಜ್ಜ ಅಜ್ಜಿ ಮೊಮ್ಮಕ್ಕಳ ಸಮಾಗಮದ ವಿಶಿಷ್ಟವಾದ ಕಾರ್ಯಕ್ರಮವು ಅರ್ಥಪೂರ್ಣವಾಗಿ ಮೂಡಿಬಂದಿತ್ತು. ಸಮಾರಂಭದ ಕೊನೆಯಲ್ಲಿ ಆಜ್ಜ ಅಜ್ಜಿ ಮೊಮ್ಮಕ್ಕಳಿಗಾಗಿ ವಿವಿಧ ಆಟೋಟಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. 

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |

ಮೇ 7 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ…

19 hours ago

ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |

ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…

2 days ago

Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |

ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…

2 days ago

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

3 days ago

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

3 days ago