ಕಬಕ: ಮಿತ್ತೂರು ಸಮೀಪ ಲಾರಿ ಅಂಬುಲೆನ್ಸ್ ಗೆ ಡಿಕ್ಕಿಯಾಗಿ ರೋಗಿಯ ಪತ್ನಿ ಸಾವನ್ನಪ್ಪಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಅಂಬುಲೆನ್ಸ್ ನಲ್ಲಿದ್ದ ಇತರ ಮೂರು ಮಂದಿಗೆ ಗಾಯಬವಾಗಿದೆ.
ಕಿಡ್ನಿ ಸಮಸ್ಯೆಯಿಂದ ಮಿತ್ತೂರು ಏಮಾಜೆ ನಿವಾಸಿ ವಾಮನ ನಾಯ್ಕ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮಂಗಳವಾರ ರಾತ್ರಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಅಂಬುಲೆನ್ಸ್ ನಲ್ಲಿ ಕರೆದೊಯ್ಯುತ್ತಿರುವ ಸಂದರ್ಭ ಮಿತ್ತೂರು ಸಮೀಪದ ಪರ್ಲೊಟ್ಟು ಎಂಬಲ್ಲಿ ಲಾರಿ ಆಂಬುಲೆನ್ಸ್‌ಗೆ ಡಿಕ್ಕಿಯಾಗಿದೆ. ಆಂಬುಲೆನ್ಸ್‌ನಲ್ಲಿದ್ದ ರೋಗಿ ವಾಮನ ನಾಯ್ಕ ಅವರ ಪತ್ನಿ ಪಾರ್ವತಿ ಸ್ಥಳದಲ್ಲೇ ಮೃತಪಟ್ಟರೆ, ಇತರ ಮೂವರಿಗೆ ಗಾಯವಾಗಿದೆ.
ಅಪಘಾತ ನಡೆಸಿದ ಲಾರಿ ಪರಾರಿಯಾಗಲು ಯತ್ನಿಸಿತ್ತು, ಸ್ಥಳೀಯರು ಲಾರಿಯನ್ನು ತಡೆದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel