ಸುಳ್ಯ: ಅಕ್ರಮವಾಗಿ ನಡೆಯುವ ಗೋವು ಕಳ್ಳತನ, ಗೋವು ಸಾಗಾಟದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಗೋ ಸಾಗಾಟ ತಡೆಯಲು ಸೂಕ್ತ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮುಖ್ಯ ಭಾಷಣ ಮಾಡಿದ ಕೇರಳ ಹಿಂದೂ ಐಕ್ಯ ವೇದಿಕೆಯ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಉಡುಪ ಗೋವುಗಳನ್ನು ರಕ್ಷಿಸಲು ಹೊರಟವರ ಮೇಲೆ ರಾಜಕೀಯ ಒತ್ತಡದಿಂದ ದರೋಡೆ ಕೇಸು ದಾಖಲಿಸಿರುವುದು ಖಂಡನೀಯ ಮತ್ತು ವಿಪರ್ಯಾಸ. ಎಷ್ಟೇ ಕೇಸು ದಾಖಲಿಸಿದರೂ ಗೋವುಗಳ ರಕ್ಷಣೆಗೆ ಹಿಂದೂ ಯುವಕರು ಸದಾ ಸಿದ್ಧರಾಗಿದ್ದೇವೆ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಗಣಪತಿ ಭಟ್ ಮಜಿಗುಂಡಿ, ವಿಶ್ವ ಹಿಂದೂ ಪರಿಷತ್ ಭಜರಂಗದಳ ಜಿಲ್ಲಾ ಸಹಸಂಯೋಜಕ್ ಲತೀಶ್ ಗುಂಡ್ಯ, ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ದಾಮೋದರ ಮಂಚಿ ಮತ್ತಿತರರು ಮಾತನಾಡಿದರು.
ಶಾಸಕ ಎಸ್.ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಉಪಾಧ್ಯಕ್ಷೆ ಶುಭದಾ ಎಸ್. ರೈ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಜಿ.ಪಂ.ಸದಸ್ಯರಾದ ಹರೀಶ್ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಶ್ರೀರಾಮ ಪಾಟಾಜೆ, ಶೀನಪ್ಪ ಬಯಂಬು, ಮಹೇಶ್ ರೈ ಮೇನಾಲ, ಭಾಗೀರಥಿ ಮುರುಳ್ಯ, ಹರೀಶ್ ಬೂಡುಪನ್ನೆ, ನಗರ ಪಂಚಾಯಿತಿ ಸದಸ್ಯರಾದ ವಿನಯಕುಮಾರ್ ಕಂದಡ್ಕ, ಸುಧಾಕರ ಕುರುಂಜಿಭಾಗ್, ಬಾಲಕೃಷ್ಣ ರೈ, ಶಶಿಕಲಾ, ಸುಶೀಲಾ ಜಿನ್ನಪ್ಪ ಗೌಡ, ಸರೋಜಿನಿ ಪೆಲ್ತಡ್ಕ, ಬುದ್ಧ ನಾಯ್ಕ, ಶೀಲಾ ಅರುಣ್ ಕುರುಂಜಿ, ಪ್ರವಿತಾ ಪ್ರಶಾಂತ್, ವಾಣಿಶ್ರೀ, ವಿ.ಹಿಂ.ಪ ಭಜರಂಗ ದಳ ಸುಳ್ಯ ಪ್ರಖಂಡ ಕಾರ್ಯದರ್ಶಿ ರಂಜಿತ್, ವಿಶ್ವ ಹಿಂದೂ ಪರಿಷತ್ ಗೋಕ್ಷಾ ಪ್ರಮುಖ್ ರಾಜೇಶ್ ರೈ, ಸಹ ಸಂಯೋಜಕ್ ವಿಘ್ನೇಶ್ ಆಚಾರ್ಯ, ಗೋ ರಕ್ಷಕ್ ಪ್ರಮುಖ್ ನವೀನ್ ಸುಳ್ಯ, ಸಾಪ್ತಾಹಿಕ ಮಿಲನ್ ರಕ್ಷಿತ್ ಐವರ್ನಾಡು, ಸುರಕ್ಷಾ ಪ್ರಮುಖ್ ಸನತ್ ಚೊಕ್ಕಾಡಿ, ವಿದ್ಯಾರ್ಥಿ ಪ್ರಮುಖ್ ನಿಕೇಶ್ ಉಬರಡ್ಕ, ಐ.ಬಿ.ಚಂದ್ರಶೇಖರ, ಹರೀಶ್ ಬೂಡುಪನ್ನೆ, ಶ್ರೀನಾಥ್ ಬಾಳಿಲ, ತಿಮ್ಮಪ್ಪ ನಾವೂರು, ಗಿರೀಶ್ ಕುಂಠಿನಿ, ಚಿನ್ನಪ್ಪ ಗೌಡ ಬೂಡು ಮತ್ತಿತರರು ಉಪಸ್ಥಿತರಿದ್ದರು. ಅಕ್ರಮ ಗೋಸಾಗಾಟ, ಗೋವು ಕಳ್ಳತನ, ಗೋ ವಧೆ ತಡೆಯಲು ಸೂಕ್ತ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.