ಅಖಿಲ ಭಾರತ ಗೇರು ಬೆಳೆಗಾರರ ಸಂಘ ಅಸ್ತಿತ್ವಕ್ಕೆ

June 21, 2019
12:00 PM

ಪುತ್ತೂರು: ಅಖಿಲ ಭಾರತ ಗೇರು ಬೆಳೆಗಾರರ ಸಂಘ ಇದೀಗ ಅಸ್ತಿತ್ವಕ್ಕೆ ಬಂದಿದೆ. ವಿವಿಧೆಡೆಗಳಿಂದ ಬಂದ ಕೃಷಿಕರು ಹಾಗೂ  ಕ್ಯಾಂಪ್ಕೋ ಅಧ್ಯಕ್ಷರಾದ ಸತೀಶ್ಚಂದ್ರ ಅವರ ಸಮ್ಮುಖದಲ್ಲಿ ಅಖಿಲ ಭಾರತ ಗೇರು ಬೆಳೆಗಾರರ ಸಂಘ ಅಸ್ತಿತ್ವಕ್ಕೆ ಬಂದಿದೆ. ಪುತ್ತೂರಿನಲ್ಲಿ ರಾಷ್ಟ್ರಮಟ್ಟದ ಗೇರು ಕೃಷಿಕರ ಸಂಘಟನೆ ಆರಂಭವಾಗಿರುವುದು ಇದೀಗ ಬೆಳೆಗಾರರಿಗೆ ಉಪಯುಕ್ತವಾಗಿದೆ.

Advertisement
Advertisement

ರಾಷ್ಟ್ರದ ಗೇರು ಕೃಷಿಕರ ನಡುವೆ ಸಂವಹನ ಹೆಚ್ಚಿಸುವುದು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಟ್ಟದಲ್ಲಿ ಗೇರು ಬೆಳೆಗಾರರಿಗೆ ಧ್ವನಿ ನೀಡುವುದು, ವಿವಿಧ ಸಂಘ ಸಂಸ್ಥೆ ಹಾಗೂ ಇಲಾಖೆಗಳ ನಡುವಿನ ಸಂವಹನಕ್ಕೆ ಅನುವಾಗುವುದು, ವೈಜ್ಞಾನಿಕ ಗೇರು ಕೃಷಿ ಹಾಗೂ ಸಂಸ್ಕರಣಾ ಮಾಹಿತಿಯನ್ನು ರೈತರಿಗೆ ತಲುಪಿಸುವುದು, ಗೇರಿನಲ್ಲಿ ರೈತ ಉತ್ಪಾದಕ ಕಂಪನಿಗಳನ್ನು ಉತ್ತೇಜಿಸುವುದು, ಗೇರಿನ ಮಾರುಕಟ್ಟೆಗೆ ಉತ್ತೇಜನ ಹಾಗೂ ಗೇರು ಬೆಳೆಯ ಬಗ್ಗೆ ಮೇಳಗಳನ್ನು ಹಮ್ಮಿಕೊಳ್ಳುವುದು ಈ ಸಂಘಟನೆಯ ಮುಖ್ಯ ಉದ್ದೇಶಗಳಾಗಿವೆ.

Advertisement

ಸಂಘಟನೆಯ ಅಧ್ಯಕ್ಷರಾಗಿ ಪುತ್ತೂರಿನ  ಪ್ರಗತಿಪರ ಗೇರು ಬೆಳೆಗಾರ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನನ್ಯ ಅಚ್ಯುತ ಮೂಡತ್ತಾಯ  ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕಾಸರಗೋಡು ಪ್ರ್ಯಾಂತ್ಯದ ಗೇರು ಬೆಳೆಗಾರ ಶಂಕರನಾರಾಯಣ ಭಟ್ ಖಂಡಿಗೆ, ಕಾರ್ಯದರ್ಶಿಯಾಗಿ ಯುವ ಮುಂದಾಳು  ದಕ್ಷಿಣ ಕನ್ನಡ ಜಿಲ್ಲೆಯ ಪುಣಚದ ದೇವಿಪ್ರಸಾದ್ ಕಲ್ಲಾಜೆ, ಜಂಟಿ ಕಾರ್ಯದರ್ಶಿಯಾಗಿ ಮಹಾರಾಷ್ಟ್ರದ  ವಿಲಾಸ್ ಅನಂತರಾವ್ ಠಾಕೂರ್, ಖಜಾಂಚಿಯಾಗಿ ದಕ್ಷಿಣ ಕನ್ನಡದ ಪ್ರಗತಿಪರ ಗೇರು ಕೃಷಿಕ ಸುಭಾಸ್ ರೈ ಕಡಮಜಲು ಆಯ್ಕೆಯಾಗಿದ್ದಾರೆ.

ಸಂಘಟನೆಯ ಟ್ರಸ್ಟಿಗಳನ್ನಾಗಿ ಬಂಟ್ವಾಳದ ಶಾಸಕ ಹಾಗೂ ಕೃಷಿಕರಾದ ಉಳಿಪಾಡಿಗುತ್ತು  ರಾಜೇಶ್ ನಾಯಕ್, ಗೇರು ಬೆಳೆಗಾರರಾದ ಕೇರಳದ ವಾಸವನ್, ಆಂಧ್ರಪ್ರದೇಶದ ಸೊಮೇಶ್ವರ ರಾವ್, ಗದಗದ ಗುರುನಾಥ ಓದುಗೌಡರ್, ದಕ್ಷಿಣ ಕನ್ನಡದ ಕಾಶ್ಮೀರ್ ಕುಟಿನೋ, ಉಡುಪಿಯ ಚಂದ್ರಶೇಖರ ಉಡುಪ, ಈಶ್ವರ ಮಂಗಲದ ನಟೇಶ್ ಮೂಡಾಯೂರು, ಬೆಳ್ತಂಗಡಿಯ ಸುಕನ್ಯಾ, ಸಾಗರದ ಉಳ್ಳೂರು ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಾಯಿತು.

Advertisement

ಈ ಸಂದರ್ಭದಲ್ಲಿ ಗೇರು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಎಂ.ಜಿ. ನಾಯಕ್ ಮತ್ತು ಹಿರಿಯ ವಿಜ್ಞಾನಿ ಡಾ. ಮೋಹನ್ ಉಪಸ್ಥಿತರಿದ್ದರು.

 

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |
May 4, 2024
10:32 AM
by: ದ ರೂರಲ್ ಮಿರರ್.ಕಾಂ
ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |
May 3, 2024
9:58 PM
by: ದ ರೂರಲ್ ಮಿರರ್.ಕಾಂ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಕ್ಯಾಂಪ್ಕೋದ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಡಾ.ಬಿ.ವಿ.ಸತ್ಯನಾರಾಯಣ ನೇಮಕ|
May 1, 2024
10:52 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror