ಪುತ್ತೂರು: ಗೇರು ಬೆಳೆಗಾರರ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ ಅಖಿಲ ಭಾರತ ಗೇರು ಬೆಳೆಗಾರರ ಸಂಘವನ್ನು ಹುಟ್ಟುಹಾಕುವ ಬಗ್ಗೆ ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಇತ್ತೀಚಿನ ವರ್ಷಗಳಲ್ಲಿ ಒಳ್ಳೆಯ ದರ ಹಾಗೂ ಬೆಳೆಯ ಹಲವಾರು ಉಪಯುಕ್ತ ಗುಣಗಳಿಂದಾಗಿ ಗೇರು ಕೃಷಿ ಜನಪ್ರಿಯವಾಗುತ್ತಿದೆ. ಆದರೆ ದಿಢೀರ್ ದರ ಕುಸಿತ, ಮಧ್ಯವರ್ತಿಗಳ ಹಾವಳಿ, ಕೃಷಿಕರಿಗೆ ಸರಕಾರದ ಮಟ್ಟದಲ್ಲಿ ಧ್ವನಿ ಇಲ್ಲದಿರುವುದು ಇತ್ಯಾದಿ ಹಲವಾರು ಸಮಸ್ಯೆಗಳೂ ಬೆಳೆಗಾರರನ್ನು ಕಾಡುತ್ತಿವೆ, ಹಾಗಾಗಿ ಇಂತಹ ಸಂದರ್ಭಗಳಲ್ಲಿ ಬೆಳೆಗಾರರ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ ಅಖಿಲ ಭಾರತ ಗೇರು ಬೆಳೆಗಾರರ ಸಂಘವನ್ನು ಹುಟ್ಟುಹಾಕಲು ಯೋಜಿಸಲಾಗಿದೆ.
ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉದ್ದೇಶಿತ ಗೇರು ಬೆಳೆಗಾರರ ಸಂಘದ ಧ್ಯೇಯೋದ್ದೇಶಗಳನ್ನು ವಿಸ್ತೃತವಾಗಿ ಚರ್ಚಿಸಲಾಯಿತು. ಗೇರು ಕೃಷಿಕರ ಮಾರುಕಟ್ಟೆಯ ಸಮಸ್ಯೆಗಳಿಗೆ ರಾಜ್ಯ ಮತ್ತು ಕೇಂದ್ರದ ಮಟ್ಟದಲ್ಲಿ ಸ್ಪಂದಿಸುವ ಸಮರ್ಥ ವೇದಿಕೆ, ದೇಶದ ಗೇರು ಕೃಷಿಕರ ನಡುವಿನ ಸಂವಹನ, ಸಂಬಂಧಪಟ್ಟ ಇಲಾಖೆಗಳೊಡನೆ ಸಹಯೋಗ, ಗೇರು ಉತ್ಪಾದನಾ ತಾಂತ್ರಿಕತೆಗಳ ಬಗ್ಗೆ ಅರಿವು ಮೂಡಿಸುವುದು, ರೈತ ಉತ್ಪಾದಕ ಕಂಪನಿಗಳನ್ನು ಗೇರಿನಲ್ಲಿ ಹುಟ್ಟುಹಾಕಲು ಉತ್ತೇಜನ ಮುಂತಾದ ಚಟುವಟಿಕೆಗಳು ಸಂಘದಿಂದ ನಡೆಯಬೇಕು ಎಂದು ತೀರ್ಮಾನಿಸಲಾಯಿತು.
ಕ್ಯಾಂಪ್ಕೋದಿಂದ ಈ ಸಂಘಕ್ಕೆ ಎಲ್ಲ ಸಹಕಾರ ಸಿಗುವ ಭರವಸೆಯನ್ನು ಸತೀಶ್ಚಂದ್ರ ಅವರು ನೀಡಿದರು. ಜೊತೆಗೆ ಸಂಘಕ್ಕೆ ಶಾಸಕರು ಮತ್ತು ಸಂಸದರ ಸಹಾಯವನ್ನು ಪಡೆದುಕೊಳ್ಳಬೇಕು ಎಂದು ತೀರ್ಮಾನಿಸಲಾಯಿತು. ಸಭೆಯಲ್ಲಿ ಕ್ಯಾಂಪ್ಕೋ ಈಗಿರುವ ಬೆಳೆಗಳ ಜೊತೆಗೆ ಗೇರು ಬೀಜ ಸಂಸ್ಕರಣೆಯನ್ನೂ ಕೈಗೆತ್ತಿಕೊಳ್ಳಬೇಕೆಂದು ಕೃಷಿಕರು ಅಭಿಪ್ರಾಯಪಟ್ಟರು.
ಗೇರು ಕೃಷಿಕರಾದ ಸುಭಾಷ್ ರೈ ಕಡಮಜಲು, ನನ್ಯ ಅಚ್ಯುತ ಮೂಡತ್ತಾಯ, ದೇವಿಪ್ರಸಾದ ಪುಣಚ, ನಟೇಶ್ ಮೂಡಾಯೂರು, ನಾರಾಯಣ ನಾಯಕ್, ಮನೋಹರ ಶೆಟ್ಟಿ, ದೇವಣ್ಣ ರೈ, ,ದೊಡ್ಡಬಳ್ಳಾಪುರ ನಾಗರಾಜ್ ಮತ್ತವರ ತಂಡದ ಕೃಷಿಕರು ಹಾಜರಿದ್ದರು.
ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ. ಗಂಗಾಧರ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿರಿಯ ವಿಜ್ಞಾನಿ ಡಾ. ಮೋಹನ್ ವಂದಿಸಿದರು.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…