ಅಗ್ರಿ ಟಿಂಕರಿಂಗ್ ಫೆಸ್ಟ್ : 30 ಮಾದರಿ ಲಘು ಉದ್ಯೋಗ ಭಾರತಿ ವತಿಯಿಂದ ಅಭಿವೃದ್ಧಿ

December 2, 2019
4:54 PM

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ತೆಂಕಿಲದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ  ನಡೆಸಿದ ಅನ್ವೇಷಣಾ 2019 ಕಾರ್ಯಕ್ರಮ ಯಶಸ್ಸುಕಂಡಿದೆ. ಅಗ್ರಿಟಿಂಕರಿಂಗ್ ಫೆಸ್ಟ್ ಹೆಸರಿನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಅತ್ಯುತ್ತಮ 38 ಮಾದರಿಗಳಿಗೆ ಬಹುಮಾನಗಳನ್ನೂ ನೀಡಲಾಗಿದೆ. ಇದರೊಂದಿಗೆ ಸುಮಾರು 30 ಮಾದರಿಗಳು ಅಭಿವೃದ್ಧಿಪಡಿಸುವುದಕ್ಕಾಗಿ ಆಯ್ಕೆಯಾಗಿದೆ. ಒಟ್ಟು 308 ಮಾದರಿಗಳು ಪ್ರದರ್ಶನಗೊಂಡಿದ್ದವು.

Advertisement
Advertisement

ರಾಜ್ಯದಲ್ಲೇ ಮೊದಲ ಬಾರಿಗೆ ಕೃಷಿ ಪರಿಕರಗಳ ನೂತನ ಅನ್ವೇಷಣೆಗಳಿಗಾಗಿ ಮತ್ತು ಕೃಷಿ ಸಂಶೋಧನೆಗಳಿಗೆ ಪ್ರೇರಣೆಕೊಡುವ ನಿಟ್ಟಿನಲ್ಲಿ ಅನ್ವೇಷಣಾ 2019  ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಆಯೋಜನೆ ಮಾಡಿತ್ತು. ಕ್ಯಾಂಪ್ಕೋ, ಕೆ.ಎಂ.ಎಫ್, ಲಘು ಉದ್ಯೋಗ ಭಾರತಿ, ಪಶುಸಂಗೋಪನಾ ಇಲಾಖೆಗಳು ಈ ಕಾರ್ಯಕ್ರಮಕ್ಕೆ ಸಹಯೋಗ ಒದಗಿಸಿದ್ದವು.

Advertisement

ಅನ್ವೇಷಣಾ ಕಾರ್ಯಕ್ರಮದ ಹೈಲೈಟ್ಸ್ ಇದು :

  •  ಸಚಿವಕೋಟ ಶ್ರೀನಿವಾಸ ಪೂಜಾರಿ ಅನ್ವೇಷಣಾಕಾರ್ಯಕ್ರಮದ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಕೋರಿದ್ದು, ಕಾರ್ಯಕ್ರಮದ ವಿವರ, ಯಶಸ್ಸನ್ನು ವಿಧಾನಸಭೆಯಲ್ಲಿ ಮಂಡಿಸಿ, ಮುಂದಿನ ದಿನಗಳಲ್ಲಿ ಸರ್ಕಾರದಿಂದಅನ್ವೇಷಣಾದಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಭರವಸೆ ನೀಡಿದ್ದಾರೆ.
  • ಕಾರ್ಯಕ್ರಮದಲ್ಲಿ ಭಾಗಿಯಾದಒಟ್ಟು ಮುನ್ನೂರಎಂಟು ಮಾದರಿಗಳಲ್ಲಿ ಮೂವತ್ತು ಮಾದರಿಗಳನ್ನು ಲಘು ಉದ್ಯೋಗ ಭಾರತಿ ವತಿಯಿಂದಅಭಿವೃದ್ಧಿಪಡಿಸುವುದಕ್ಕಾಗಿಆಯ್ಕೆ ಮಾಡಲಾಗಿದೆ. ಮುಂದಿನ ಒಂದು ವರ್ಷದಅವಧಿಯಲ್ಲಿಆಯ್ಕೆ ಮಾಡಿದ ಮೂವತ್ತು ಮಾದರಿಗಳನ್ನು ಲಘುಉದ್ಯೋಗ ಭಾರತಿ ಮಾರುಕಟ್ಟೆಗೆತರಲಿದೆ. ಇದರಿಂದ ಕೃಷಿ ಕ್ಷೇತ್ರಕ್ಕೆ ನೂತನ ಆವಿಷ್ಕಾರಗಳು ದೊರೆಯಲಿದ್ದು, ಬಹುದೊಡ್ಡಕೊಡುಗೆ ಎನಿಸಲಿದೆ.
  •  ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಕೃಷಿ ಅನ್ವೇಷಣೆಗಳ ಕುರಿತಾದ ಆಸಕ್ತಿ, ಪ್ರೀತಿಯನ್ನು ಮನಗಂಡು ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ನೂತನ ಸಂಶೋಧನೆಗಳು, ಅವುಗಳ ಪೇಟೆಂಟ್ ವಿವರ, ಸ್ಟಾರ್ಟಪ್ ಯೋಜನೆಗಳನ್ನು ಆರಂಭಿಸುವಕುರಿತಾದ ವಿವರ ಇತ್ಯಾದಿಗಳನ್ನು ಸಂಶೋಧಕರಿಗೆ ಒದಗಿಸಿಕೊಡುವ ಹಿನ್ನೆಲೆಯಲ್ಲಿಒಂದು ಮಾಹಿತಿಕೇಂದ್ರತೆರೆಯುವಕುರಿತುಚಿಂತನೆ ನಡೆಸಲಾಗಿದೆ.
  •  ಅನೇಕ ಮಂದಿ ವಿದ್ಯಾರ್ಥಿಗಳು ತಮಗೆದೊರೆತ ಬೆಂಬಲ, ಪ್ರೋತ್ಸಾಹ ಭರಿತ ಮಾತುಗಳಿಂದ ಪ್ರೇರಿತರಾಗಿ ಮುಂದೆ ನಿರಂತರವಾಗಿ ಕೃಷಿ ತಂತ್ರಜ್ಞಾನದ ಬಗೆಗೆ ಸಂಶೋಧನೆ ನಡೆಸುವುದಾಗಿ ತಿಳಿಸಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಕೃಷಿ ಕುಟುಂಬದವರೇಆಗಿರುವುದರಿಂದತಮ್ಮ ಹೆತ್ತವರುಕೃಷಿಯಲ್ಲಿಎದುರಿಸುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದರ ಮೂಲಕ ಸಮಾಜಕ್ಕೆ ಬಹುದೊಡ್ಡಕೊಡುಗೆ ನೀಡಲಿದ್ದಾರೆ.
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |
May 6, 2024
11:07 AM
by: ಸಾಯಿಶೇಖರ್ ಕರಿಕಳ
ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |
May 5, 2024
3:21 PM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |
May 5, 2024
2:10 PM
by: ಸಾಯಿಶೇಖರ್ ಕರಿಕಳ
Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ
May 4, 2024
12:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror