ಸುಳ್ಯ: ತಾಲೂಕಿನ ಅಜ್ಜಾವರ ಗ್ರಾಮ ಕಂಟೈನ್ಮೆಟ್ ವಲಯವಾಗಿದೆ. ಈ ಪ್ರದೇಶದ ಜನರಿಗೆ ಅಗತ್ಯ ದಿನಬಳಕೆ ಸಾಮಾಗ್ರಿಗಳು ಮತ್ತು ಔಷದಿಗಳನ್ನುಉಚಿತವಾಗಿ ನೀಡಬೇಕು ಎಂದು ಸ್ಥಳೀಯರಾದ ಮಿಥುನ್ ಕರ್ಲಪ್ಪಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಅಜ್ಜಾವರ ಗ್ರಾಮದ ವಾರ್ಡ್ ಸಂಖ್ಯೆ 1,2, ಮತ್ತು 4 ನೇ ವಾರ್ಡಿನ ಸುಮಾರು 300 ಕ್ಕೂ ಹೆಚ್ಚಿನ ಮನೆಗಳಿಗೆ ಅಗತ್ಯ ದಿನಬಳಕೆ ವಸ್ತುಗಳನ್ನು ಪ್ರತಿಮನೆಗಳಿಗೆ ತಲುಪಿಸಲು ಮತ್ತು ಕೆಲ ಸಂಘಸಂಸ್ಥೆಗಳು ಕಿಟ್ ತರಿಸಿದ್ದರು. ಈ ಪ್ರದೇಶದ ಜನರು ದಿನಗೂಲಿ ಮತ್ತು ಕೆಲ ಖಾಸಗಿ ವ್ಯಕ್ತಿಗಳ ಅಂಗಡಿ ಕೆಲಸ ,ದಿನಗೂಲಿ ಮತ್ತು ಇನ್ನಿತರ ಕಡೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈಗ ಲಾಕ್ಡೌನ್ ಕಾರಣದಿಂದ ಯಾವುದೇ ಚಟುವಟಿಕೆಗಳನ್ನು ನಡೆಸಲು ಅಸಾಧ್ಯವಾಗಿದ್ದುಇಲ್ಲಿ ಬಹಳಷ್ಟು ಆರ್ಥಿಕ ಸಂಕಷ್ಡ ಉಂಟಾಗಿದೆ. ಹೀಗಾಗಿ ಈ ಭಾಗದ ಎಲ್ಲಾ ಮನೆಗಳಿಗೆ ಉಚಿತವಾಗಿ ಸಾಮಗ್ರಿಗಳನ್ನು ಮತ್ತುನೀರಿನಬಿಲ್ಲುನ್ನು ಮನ್ನಾ ಮಾಡಲು ಅಜ್ಜಾವರ ಗ್ರಾಮ ಪಂಚಾಯತ್ ಗೆ ನಿರ್ದೇಶನ ನೀಡಬೇಕು ಮತ್ತು ಕೆಲ ರಾಜಕೀಯ ಪ್ರೇರಿತ ಸುಳ್ಳು ಸುದ್ದಿ ಹರಡುವುದು ಇಲ್ಲಿ ಮತ್ತಷ್ಟು ಆತಂಕಕ್ಕೂ ಕಾರಣವಾಗಿದೆ. ಹೀಗಾಗಿ ಇಂತಹ ಸುಳ್ಳುಸುದ್ದಿಗಳ ತಡೆ ಹಾಗೂ ಜನಪ್ರತಿನಿಧಿಗಳನ್ನು ಹೊರತುಪಡಿಸಿ ಸಂಚಾರಕ್ಕೆ ಇತರರಿಗೆ ತಡೆ ನೀಡಬೇಕು ಎಂದು ಮನವಿಯಲ್ಲಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.