ಅಜ್ಜಾವರ: ಅಜ್ಜಾವರ ಗ್ರಾಮದ ನೆಹರುನಗರದಲ್ಲಿ ತಂಗುಣಿ ಎಂಬ ವೃದ್ದೆಯ ಮನೆಯು ಧಾರಕಾರ ಸುರಿದ ಮಳೆಗೆ ಕುಸಿದುಬಿದ್ದಿದ್ದು ಸ್ಥಳೀಯರು ತಕ್ಷಣ ಸಹಾಯ ಮಾಡಿದ್ದಾರೆ.
ಮನೆ ಕುಸಿತವಾದದ್ದನ್ನು ಗಮನಿಸಿದ ಸ್ಥಳೀಯ ವ್ಯಕ್ತಿ ಅಬ್ದಲ್ ಖಾದರ್ ಅವರು ತಕ್ಷಣವೇ ಸಮಾಜಸೇವಕ ಮಿಧುನ್ ಕರ್ಲಾಪ್ಪಾಡಿಯವರಿಗೆ ತಿಳಿಸಿ ತಕ್ಷಣ ಗ್ರಾಮ ಕಾರಣಿಕರ ಮುಖಾಂತರ ತಹಶಿಲ್ದಾರರ ಗಮನಕ್ಕೆ ತಂದು ಅವರಿಗೆ ಪಡಿತರ ಚೀಟಿ, 94 C ಯ ಮುಖಾಂತರ ಸ್ಧಳವನ್ನು ನೀಡುವುದು ಮತ್ತು ಇನ್ನಿತರ ವ್ಯವಸ್ಥೆಯಗಳನ್ನು ಮಾಡಿಸಿಕೊಟ್ಟು ಇದೀಗ ಒಬ್ಬಂಟಿ ವೃದ್ದೆ ತಂಗುಣಿ ಅವರಿಗೆ ನೆರವಾಗಲು ಒಂದು ದಿನದ ಶ್ರಮಾದಾನದ ಮೂಲಕ ಟರ್ಪಲ್ ಹಾಕಿ ತಾತ್ಕಾಲಿಕ ಛಾವಣಿ ರಚಿಸಿ ನೀಡಲಾಯಿತು.
ಟರ್ಪಲ್ಲನ್ನು ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತ್ ಸದಸ್ಯರಾದ ಹನೀಫ್ ಎ ಪಿ ಮತ್ತು ಅಬ್ದಲ್ಲ ಅಜ್ಜಾವ ಅವರು ಪಂಚಾಯತ್ ಪರವಾಗಿ ನೀಡಿದರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೇಟಿ ಶ್ರಮದಾನದ ಸಂದರ್ಭದಲ್ಲಿ ಭೇಟಿ ನೀಡಿದರು .
ಮುಂದೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು ಈ ಶ್ರಮದಾನದಲ್ಲಿ ವಿಶ್ವನಾಧ , ರವಿ , ಬಾಬು , ಮಿಧುನ್ ಕರ್ಲಾಪ್ಪಾಡಿ ,ಅಬ್ದಲ್ ಖಾದರ್ , ಹನೀಫ್ , ಅಬ್ದಲ್ಲ ಮತ್ತಿತರರು ಉಪಸ್ಥಿತಿತರಿದ್ದರು.