ಧರ್ಮಸ್ಥಳ: ಅಡಿಕೆಕೊಯ್ಲು ಮತ್ತು ಬೋರ್ಡೊದ್ರಾವಣ ಸಿಂಪಡಣೆಗೆ ಅಮೇರಿಕಾದಲ್ಲಿರುವ ಹಾಸನ ಮೂಲದ ಎಂಜಿನಿಯರ್ ಬಾಲಸುಬ್ರಹ್ಮಣ್ಯ ಅವರು ಸುಧಾರಿತ ಹೈಟೆಕ್‍ದೋಂಟಿ ಸಂಶೋಧನೆ ಮಾಡಿದ್ದು ಶುಕ್ರವಾರ ಧರ್ಮಸ್ಥಳದಲ್ಲಿರುವ ಹರ್ಪಾಡಿತೋಟದಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ಸವಿವರ ಮಾಹಿತಿ ನೀಡಿದರು.
ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಈ ವರೆಗೆ ಲಭ್ಯಇರುವಕೊಯ್ಲು ದೋಂಟಿಗಳಿಂದ ಇದು ವಿಭಿನ್ನವಾಗಿದ್ದು, ಯಾವುದೇ ಇಂಧನ ಅಥವಾ ವಿದ್ಯುತ್ ಬಳಸದೆ ಸುಲಭದಲ್ಲಿ ಉಪಯೋಗಿಸಬಹುದು. ಕ್ಯಾಂಪ್ಕೋದ ಅಡಿಕೆ ಸಂಶೋಧನಾ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ದೋಂಟಿ ಬಳಕೆಗೆ ಸೂಕ್ತ ಪ್ರೋತ್ಸಾಹ ನೀಡಲು ಪ್ರಯತ್ನಿಸಲಾಗುವುದು.ರೈತರಗೆ ಇದು ವರದಾನವಾಗಿದೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತ ಪಡಿಸಿ ಅಭಿನಂದಿಸಿದರು.
ದೋಂಟಿ ಸಂಶೋಧಕಹಾಗೂ ಎಂಜಿನಿಯರ್ ಬಾಲಸುಬ್ರಹ್ಮಣ್ಯ ಮಾತನಾಡಿ, ಮಲೆನಾಡು ಪ್ರದೇಶದ ತೋಟಗಳಲ್ಲಿ ಈಗಾಗಲೆ ಇಪ್ಪತ್ತಕ್ಕೂ ಹೆಚ್ಚು ಇಂತಹ ದೋಂಟಿಗಳು ಬಳಕೆಯಲ್ಲಿವೆ. ಇದರಿಂದಾಗಿ ಕೂಲಿಕಾರ್ಮಿಕರ ಸಮಸ್ಯೆ ನಿವಾರಣೆಯಾಗುವುದಲ್ಲದೆ ತಿಂಗಳಿಗೆ 70,000ರೂ. ಉಳಿತಾಯವಾಗುತ್ತದೆ ಎಂದು ಹೇಳಿದರು.
ಪ್ರಸಕ್ತದೋಂಟಿಯ ಬೆಲೆ 80,000ರೂ.ಆಗಿದ್ದು ಮುಂದೆರೈತರಿಗೆಕೈಗೆಟಕುವ ಮಿತದರದಲ್ಲಿ ಸಾಧಾರಣ ಹತ್ತು ಸಾವಿರರೂ.ಗೆದೊರಕುವಂತೆ ಮಾಡಲಾಗುವುದುಎಂದು ಬಾಲಸುಬ್ರಹ್ಮಣ್ಯ ಭರವಸೆ ನೀಡಿದರು.
ಧರ್ಮಸ್ಥಳದ ಡಿ. ಹರ್ಷೇಂದ್ರಕುಮಾರ್ ಮತ್ತುಕೃಷಿ ವಿಭಾಗದಮುಖ್ಯಸ್ಥ ಬಿ.ಬಾಲಕೃಷ್ಣ ಪೂಜಾರಿ ಉಪಸ್ಥಿತರಿದ್ದರು.
ದೋಂಟಿಯ ವಿಶೇಷತೆಗಳು:
• ಅಡಿಕೆ ಮರಏರದೆಕೊಯ್ಲು ಹಾಗೂ ಔಷಧಿ ಸಿಂಪಡಣೆ ಮಾಡಬಹುದು.
• 60 ರಿಂದ 80 ಅಡಿ ಎತ್ತರದದೋಂಟಿಅಗತ್ಯಕ್ಕೆ ಬೇಕಾದಷ್ಟು ಎತ್ತರಿಸಿ ಲಾಕ್ ಮಾಡುವ ವ್ಯವಸ್ಥೆ.
• ನಿಂತಲ್ಲೆ 360 ಡಿಗ್ರಿ ಸುತ್ತಮುತ್ತ ಹತ್ತು ಮರಗಳಿಗೆ ಔಷಧಿ ಸಿಂಪಡಣೆ ಸಾಧ್ಯ.
• ಫೈಬರ್ ತಂತ್ರಜ್ಞಾನ ಬಳಕೆ. 20 ವರ್ಷ ಬಾಳಿಕೆ.Advertisement