ಸುಳ್ಯ: ಅಡಿಕೆ ಧಾರಣೆ ಏರಿಕೆಯ ಹಾದಿಯಲ್ಲಿದೆ. ದಿನದಿಂದ ದಿನಕ್ಕೆ ಅಡಿಕೆ ಧಾರಣೆ ಉತ್ತಮವಾಗಿದೆ. ಕಳೆದ ವರ್ಷದ ಕೊಳೆರೋಗದ ಪರಿಣಾಮ ಹಾಗೂ ಮಾರುಕಟ್ಟೆಯಲ್ಲಿ ಅಡಿಕೆಯ ಕೊರತೆಯ ಕಾರಣದಿಂದ ಈಗ ಧಾರಣೆ ಏರುಹಾದಿಯಲ್ಲಿದೆ. ಇದರ ಜೊತೆಗೇ ಈಗ ಕಳ್ಳರ ಭಯವೂ ಆರಂಭವಾಗಿದೆ. ಹೀಗಾಗಿ ಗ್ರಾಮೀಣ ಭಾಗಗಳಲ್ಲಿ ರಾತ್ರಿ ವೇಳೆ ಪೊಲೀಸ್ ಬೀಟ್ ವ್ಯವಸ್ಥೆ ಬಲಗೊಳ್ಳಬೇಕು ಎಂಬ ಬೇಡಿಕೆ ವ್ಯಕ್ತವಾಗುತ್ತಿದೆ.
ಅಡಿಕೆ ಸೇರಿದಂತೆ ಯಾವುದೇ ಕೃಷಿ ವಸ್ತುಗಳ ಧಾರಣೆ ಏರಿದಂತೆ ಆ ವಸ್ತುಗಳ ಕಳ್ಳತನವೂ ಹೆಚ್ಚಾಗುತ್ತದೆ. ಕಳೆದ ಬಾರಿಯೂ ಧಾರಣೆ ಏರಿದ ನಂತರ ಕಳ್ಳರ ಭಯವೂ ಹೆಚ್ಚಾಗಿತ್ತು. ವಿಟ್ಲ, ಪುತ್ತೂರು ಪ್ರದೇಶದಲ್ಲಿ ಅಡಿಕೆ ಗೋಡೌನ್ ಗಳಿಂದ ಕಳ್ಳತನವಾದ ವರದಿಯಾಗಿದೆ. ಕಳ್ಳರೂ ಸೆರೆಯಾಗಿದ್ದಾರೆ. ಈ ಬಾರಿಯೂ ಕಳ್ಳರ ಭಯ ಶುರುವಾಗಿದೆ. ರಾತ್ರಿ ವೇಳೆ ಅನುಮಾಸ್ಪದವಾಗಿ ಓಮ್ನಿ ಕಾರುಗಳು, ಪಿಕ್ ಅಪ್ ಗಳು ತಿರುಗಾಡಲು ಶುರುವಾಗಿದೆ ಎಂಬ ವದಂತಿ ಇದೆ. ಹೀಗಾಗಿ ಬೆಳೆಗಾರರು ಹಾಗೂ ವ್ಯಾಪಾರಿಗಳ ಹಿತದೃಷ್ಠಿಯಿಂದ ಅಲ್ಲಲ್ಲಿ ಸಿಸಿ ಕ್ಯಾಮಾರಗಳು ಸುಸ್ಥಿತಿಯಲ್ಲಿಡುವಂತೆ ಮಾಡುವುದು ಸೇರಿದಂತೆ ಕೃಷಿಕರು, ವ್ಯಾಪಾರಿಗಳು ಸಂಶಯ ಕಂಡುಬಂದರೆ ತಕ್ಷಣವೇ ಎಚ್ಚೆತ್ತು ಸ್ಥಳೀಯ ತಂಡ ಮಾಡಿ ಪೊಲೀಸರಿಗೆ ಮಾಹಿತಿ ನೀಡುವ ಕೆಲಸ ಆಗಬೇಕಾಗಿದೆ. ಇದರ ಜೊತೆಗೆ ಪೊಲೀಸ್ ಬೀಟ್ ಗಳು ಬಲಗೊಳ್ಳಬೇಕು ಹಾಗೂ ರಾತ್ರಿ ವೇಳೆ ತಪಾಸಣೆ ಆರಂಭವಾಗಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ. ಈಚೆಗೆ ಸುಳ್ಯ ತಾಲೂಕಿನ ಪಂಜದಲ್ಲಿ ಅನುಮಾಸ್ಪದವಾಗಿ ತಿರುಗಾಡುತ್ತಿದ್ದ ಕಾರೊಂದರ ಬಗ್ಗೆ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು ನದಿಗಳು ತುಂಬಿ ಹರಿಯುತ್ತಿವೆ. ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಕೊಡಗಿನ…
ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿದ ಮಂಗಳೂರಿನ ರೆಮೋನಾ ಪಿರೇರಾ,…
ಕಳೆದ 11 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆಯಾಗಿದ್ದು, ಕೃಷಿಕರ ಹಿತದೃಷ್ಟಿಯಿಂದ ಕೇಂದ್ರ…
ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ದೆಹಲಿಯಲ್ಲಿ ʻಭಾರತ್ ಸಂಚಾರ್ ನಿಗಮ್ ಲಿಮಿಟೆಡ್ʼನ-…
ರಾಜ್ಯದೆಲ್ಲೆಡೆ ಇಂದು ನಾಗರಪಂಚಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ…
ಕೊಪ್ಪಳ ಜಿಲ್ಲೆಯಲ್ಲಿ ಜುಲೈ ಅಂತ್ಯದವರಿಗೆ 2 ಲಕ್ಷ ಹೆಕ್ಟೇರ್ ಪ್ರದೇಶದ ಬಿತ್ತನೆಯ ಗುರಿ…