ಮಂಗಳೂರು: ಅಡಿಕೆ ಧಾರಣೆ ಏರಿಕೆಯಲ್ಲಿ ಸಾಗಿದೆ. ಅಧಿಕೃತವಾಗಿ ಹಳೆ ಅಡಿಕೆ ಧಾರಣೆ 350 ಹಾಗೂ ಹೊಸ ಅಡಿಕೆ ಧಾರಣೆ 340 ರೂಪಾಯಿ ಆಗಿದ್ದು ಖಾಸಗೀ ವಲಯದಲ್ಲಿ ಹಳೆ ಅಡಿಕೆ 360 ಹಾಗೂ ಹೊಸ ಅಡಿಕೆ 350 ರೂಪಾಯಿಗೆ ಖರೀದಿ ನಡೆಸಲಾಗಿತ್ತು. ಇದೀಗ ಮತ್ತೆ ಅಡಿಕೆ ಧಾರಣೆ ಏರಿಕೆಯ ನಿರೀಕ್ಷೆ ಇದೆ. ಈ ನಡುವೆ ಅಸ್ಸಾಂನಲ್ಲಿ ಶುಕ್ರವಾರ 2 ಕೋಟಿ ರೂಪಾಯಿ ಮೌಲ್ಯದ ಸುಮಾರು 1040 ಬ್ಯಾಗ್ ಅಡಿಕೆ ವಶಪಡಿಸಿಕೊಳ್ಳಲಾಗಿದೆ.
ಅಸ್ಸಾಂ ಅರೆಸೇನಾ ಪಡೆಯು ಅಸ್ಸಾಂ ಸೇರಿದಂತೆ ದೇಶದ ಗಡಿಭಾಗದಲ್ಲಿ ತೀವ್ರ ತಪಾಸಣೆ ನಡೆಸುತ್ತಿದೆ. ಈ ಸಂದರ್ಭ ನಾಗಾಲ್ಯಾಂಡ್ ಮೂಲಕ ಒಳಬಂದ ಅಡಿಕೆಯನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಅಡಿಕೆಯನ್ನು ದಿಮಾಪುರದ ಕಸ್ಟಮ್ ಪ್ರಿವೆಂಟಿವ್ ವಿಭಾಗದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ತನಿಖೆ ನಡೆಯುತ್ತಿದೆ. ಆರಂಭದ ತನಿಖೆಯಲ್ಲಿ ಮ್ಯಾನ್ಮಾರ್ ಪ್ರದೇಶದ ಅಡಿಕೆ ಇದಾಗಿದೆ ಎಂದು ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಕೆಲವು ಸಮಯಗಳಿಂದ ಅಡಿಕೆ ಆಮದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಡಿಕೆ ಖರೀದಿದಾರರಿಗೆ ದೇಶದ ಅಡಿಕೆಯನ್ನೇ ಖರೀದಿ ಮಾಡಬೇಕಾಗಿದೆ. ಆದರೆ ಅಡಿಕೆ ಬೆಳೆಗಾರರು ಬೆಲೆ ಏರಿಕೆ ನಿರೀಕ್ಷೆಯ ಕಾರಣದಿಂದ ಅಡಿಕೆ ಮಾರುಕಟ್ಟೆಗೆ ಬಿಡುತ್ತಿಲ್ಲ. ಹೀಗಾಗಿ ಧಾರಣೆ ಏರಿಕೆಯಾಗುತ್ತಿದೆ. ಕಳೆದ ಎರಡು ವಾರಗಳಲ್ಲಿ ಅಡಿಕೆ ಖರೀದಿದಾರರು ಕಳ್ಳ ಸಾಗಾಣಿಕೆಯ ಮೂಲಕ ನಾಲಾಗ್ಯಾಂಡ್ ಮೂಲಕ ಅಸ್ಸಾಂಗೆ ಅಡಿಕೆ ತರಿಸಿಕೊಂಡು ಈ ಮೂಲಕ ದೇಶದ ವಿವಿಧ ಕಡೆಗಳಿಗೆ ಅಡಿಕೆ ತರಿಸಿಕೊಳ್ಳುವ ಪ್ರಯತ್ನದಲ್ಲಿದ್ದರು. ಹೀಗಾಗಿ ದೇಶದ ಅಡಿಕೆ ಕಡೆಗೆ ಒಲವು ಕಡಿಮೆ ತೋರಿಸಿದ್ದರು. ಈ ಕಾರಣದಿಂದ ಅಡಿಕೆ ಧಾರಣೆ ಎರಡು ವಾರಗಳಿಂದ ಸ್ಥಿರವಾಗಿತ್ತು. ಆದರೆ ಆಮದು ಯೋಚನೆ ವಿಫಲವಾಗಿದೆ, ಸದ್ಯದ ಪರಿಸ್ಥಿತಿಯಲ್ಲಿ ಅಸ್ಸಾಂ ಗಡಿಭಾಗದಲ್ಲಿ ಅಸ್ಸಾಂ ಅರೆಸೇನಾ ಪಡೆ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಕಳೆದೊಂದು ವಾರದಿಂದ ಅಸ್ಸಾಂ ಗಡಿಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ದು ಗುಂಡುಗಳು ಪತ್ತೆಯಾಗಿರುವ ಕಾರಣ ಬಂದೋಬಸ್ತ್ ಬಿಗಿಗೊಳಿಸಿದೆ. ಹೀಗಾಗಿ ಅಡಿಕೆ ಆಮದು ಸದ್ಯಕ್ಕೆ ಕಷ್ಟವಾಗಿದೆ. ಈ ಕಾರಣದಿಂದ ಅಡಿಕೆ ಖರೀದಿದಾರರಿಗೆ ದೇಶದ ಅಡಿಕೆಯೇ ಅಗತ್ಯವಾಗಿದೆ.
ಅಡಿಕೆ ಧಾರಣೆ ಏರಿಕೆಯಾಗುವುದು ಖಚಿತ. ಆದರೆ ತಕ್ಷಣವೇ ಅಡಿಕೆ ಧಾರಣೆ 400 ರೂಪಾಯಿ ಆಗಲಾರದು. ಇದೇ ರೀತಿ ಮುಂದುವರಿದಿದೆ ನಿರೀಕ್ಷಿತ ಧಾರಣೆ ತಲಪುವುದು ಖಚಿತ. ಒಂದು ವೇಳೆ ಅಡಿಕೆ ಆಮದಿಗೆ ಅವಕಾಶ ಸಿಕ್ಕಿದೆ ಅಥವಾ ಉತ್ತರ ಭಾರತದಲ್ಲಿ ಕೊರೋನಾ ಲಾಕ್ಡೌನ್ ಪರಿಸ್ಥಿತಿ ಉಂಟಾದರೆ ಸ್ವಲ್ಪ ಹಿನ್ನಡೆಯಾದೀತು. ಅಂತೂ ಈ ವರ್ಷ ಅಡಿಕೆ ಬೆಳೆಗಾರರಿಗೆ 300 + ಅಡಿಕೆ ಧಾರಣೆ ನಿರೀಕ್ಷೆಯಲ್ಲಿರಬಹುದು ಎಂಬುದು ಮಾರುಕಟ್ಟೆ ವಿಶ್ಲೇಷಣೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…