ಅಡಿಕೆ ಧಾರಣೆ ಏರುತ್ತಿದೆ. ಈ ಬಾರಿ ಕೊರೊನಾ ಕಾರಣದಿಂದ ಅಡಿಕೆ ಬೆಳೆಯ ನಿಜವಾದ ಸಮಸ್ಯೆ ಏನು ಎಂಬುದು ಸೂಕ್ಷ್ಮವಾಗಿ ಅರ್ಥ ಮಾಡಿದರೆ ತಿಳಿಯುತ್ತದೆ. ಪ್ರತೀ ಬಾರಿ ಗುಟ್ಕಾ ನಿಷೇಧ ಎಂದಾಗ ಅಡಿಕೆ ಬೆಳೆಗಾರರು ಭಯಗೊಳ್ಳುತ್ತಿದ್ದರು. ಈ ಬಾರಿ ಗುಟ್ಕಾ ನಿಷೇಧವಾದರೂ ಅಡಿಕೆಗೆ ಬೇಡಿಕೆ ಇದೆ. ಅಡಿಕೆ ಧಾರಣೆ ಏರಿಕೆಯಾಗುತ್ತಿದೆ. ಎಲ್ಲೂ ದಾಸ್ತಾನು ಇಲ್ಲ. ಅಂದರೆ ಅಡಿಕೆ ಕಳ್ಳ ದಾರಿಯ ಮೂಲಕ ಭಾರತದೊಳಗೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಜಕಾರಣಿಗಳು ಎಷ್ಟೇ ಹೇಳಿದರೂ , ಯಾರು ಎಷ್ಟೇ ವಿಶ್ಲೇಷಣೆ ಮಾಡಿದರೂ ಅಡಿಕೆ ಆಮದು ತಡೆಗೆ ಸೂಕ್ತ ಕ್ರಮ ಆಗಲೇಬೇಕಿದೆ. ಅಡಿಕೆ ಬೆಳೆಗಾರರು ಗುಟ್ಕಾ ನಿಷೇಧಕ್ಕಲ್ಲ, ಅಡಿಕೆ ಆಮದು ಬಗ್ಗೆ ಭಯ ಪಡಬೇಕಿದೆ. ಇದರ ತಡೆಗೆ ಸೂಕ್ತ ಕ್ರಮ ಅಗತ್ಯವಿದೆ.
ಪುತ್ತೂರು: ಅಡಿಕೆ ಮಾರುಕಟ್ಟೆ ಏರಿಕೆ ಕಂಡಿದೆ. 300 ರೂಪಾಯಿ ಕಳೆದು ಬುಧವಾರ ಮತ್ತೆ ಧಾರಣೆ ಏರಿಕೆಯಾಗಿದೆ. ಹೊಸ ಅಡಿಕೆ 310 ಹಾಗೂ ಹಳೆ ಅಡಿಕೆ 325 ರೂಪಾಯಿಗೆ ಕ್ಯಾಂಪ್ಕೋ ಖರೀದಿ ಮಾಡುತ್ತಿದೆ.
ಖಾಸಗಿ ವಲಯದಲ್ಲೂ ಧಾರಣೆ ಏರಿಕೆಯಾಗಿದೆ. ಹೊಸ ಅಡಿಕೆ 325 ಹಾಗೂ ಹಳೆ ಅಡಿಕೆ 340 ರೂಪಾಯಿಗೆ ಖರೀದಿ ನಡೆಸಿದೆ. ಹಾಗಿದ್ದರೂ ಅಡಿಕೆ ಮಾರುಕಟ್ಟೆ ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ.ಬೇಡಿಕೆ ಏರುತ್ತಿದೆ. ಸಹಜವಾಗಿಯೇ ಧಾರಣೆ ಏರಿಕೆಯಾಗಿದೆ.
ಕೊರೊನಾ ಇಫೆಕ್ಟ್ ಇದು. ಕೊರೊನಾ ಕಾರಣದಿಂದ ಅಡಿಕೆ ಮಾರುಕಟ್ಟೆಗೆ ಬಿಡಲು ಕನಿಷ್ಟ ಎರಡು ತಿಂಗಳು ಬೆಳೆಗಾರರಿಗೆ ಸಾಧ್ಯವಾಗಿಲ್ಲ. ಇದೇ ಹೊತ್ತಿಗೆ ಅಕ್ರಮವಾಗಿ ಆಮದಾಗುತ್ತಿದ್ದ ಅಡಿಕೆಗಳೂ ಭಾರತದ ಒಳ ಬರಲು ಸಾಧ್ಯವಾಗಿಲ್ಲ. ಪ್ರತೀ ಬಾರಿಯೂ ಅಡಿಕೆ ಆಮದು ನಿಷೇಧ ಎಂದರೂ ಅಡಿಕೆ ಕಳ್ಳದಾರಿ ಮೂಲಕ ಬರುತ್ತಲೇ ಇತ್ತು. ಎಷ್ಟೇ ಹೇಳಿದರೂ ಅಡಿಕೆ ಕಳ್ಳ ದಾರಿಯ ಮೂಲಕ ಬರ್ಮಾ, ಬಾಂಗ್ಲಾದೇಶದಿಂದ ಬರುತ್ತಿತ್ತು. ಹೀಗಾಗಿ ಭಾರತದ ಅಡಿಕೆಗೆ ಧಾರಣೆ ಇಳಿಕೆಯಾಗುತ್ತಿತ್ತು. ಈ ಬಾರಿ ಅಡಿಕೆ ಕಳ್ಳದಾರಿಗೆ ಬ್ರೇಕ್ ಬಿದ್ದಿದೆ. ಹಾಗಾಗಿ ಮುಂಬಯಿ, ಉತ್ತರಪ್ರದೇಶ, ಗುಜರಾತ್ ಸೇರಿದಂತೆ ಉತ್ತರ ಭಾರತದಿಂದ ಅಡಿಕೆಗೆ ಬೇಡಿಕೆ ವ್ಯಕ್ತವಾಗಿದೆ. ಕೊರೊನಾ ಕಾರಣದಿಂದ ಉತ್ತರಭಾರತದಲ್ಲಿ ಇದ್ದ ಅಡಿಕೆ ದಾಸ್ತಾನು ಖಾಲಿಯಾಗಿದೆ.
ಈ ಕಡೆ ಕಳೆದ ವರ್ಷದ ಫಸಲಿನ ಕಾರಣದಿಂದ ಅಡಿಕೆ ಬೆಳೆ ಕಡಿಮೆ ಇದೆ. ಹೀಗಾಗಿ ಧಾರಣೆ ಎಷ್ಟೇ ಆದರೂ ಅಡಿಕೆ ಮಾರುಕಟ್ಟೆಗೆ ನೀಡುವ ಪ್ರಮಾಣ ಕಡಿಮೆಯೇ ಆಗಿದೆ. ಧಾರಣೆ ಏರಿಕೆಯಾಗುತ್ತಲೇ ಇದೆ. ಅಡಿಕೆ ಬೆಳೆಗಾರರು ಇನ್ನು ದೃಢ ನಿಲುವು ಮಾಡಿದರೆ ಅಡಿಕೆ ಮಾರುಕಟ್ಟೆ ಈ ಬಾರಿ ಏರಿಕೆಯಾಗುವುದು ನಿಶ್ಚಿತ. ಆದರೆ ಇನ್ನೊಂದು ಕಡೆ ಆತಂಕವೂ ಇದೆ. ಧಾರಣೆ ಎಗ್ಗಿಲ್ಲದೆ ಸಾಗಿದರೆ ಭವಿಷ್ಯದಲ್ಲಿ ಅಡಿಕೆ ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ. ಧಾರಣೆ ಏರಿಕೆ ಒಂದು ಹಂತದವರೆಗೆ ಮಾತ್ರವೇ ಉತ್ತಮ. ಅಧಿಕ ಪ್ರಮಾಣದಲ್ಲಿ ಏರಿಕೆಯಾದರೆ ಮಾರುಕಟ್ಟೆ ಸ್ಥಿರತೆ ಕಷ್ಟಸಾಧ್ಯವಿದೆ. ಹೀಗಾಗಿ ಅಡಿಕೆ ಬೆಳೆಗಾರರು ಭವಿಷ್ಯದ ಮಾರುಕಟ್ಟೆ ಬಗ್ಗೆಯೂ ಯೋಚಿಸಿ ನೂತನ ಯೋಜನೆ ರೂಪಿಸಬೇಕು ಎಂದು ಅಡಿಕೆ ಬೆಳೆಗಾರ ರಘುನಾಥ ರಾವ್ ಹೇಳುತ್ತಾರೆ.
ಅಡಿಕೆ ಮಾರುಕಟ್ಟೆ ಏರಿಕೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಉತ್ತರ ಭಾರತದಲ್ಲಿ ಅಡಿಕೆ ದಾಸ್ತಾನು ಕೊರತೆ. ಹೀಗಾಗಿ ಈಗ ಅಡಿಕೆ ಬೆಳೆಗಾರರು ಎಚ್ಚರಿಕೆ ನಡೆ , ಯೋಜನೆ ರೂಪಿಸಿಕೊಂಡು ಅಡಿಕೆ ಮಾರುಕಟ್ಟೆ ಬಿಟ್ಟರೆ ಧಾರಣೆಯನ್ನು ಕೆಲವು ಸಮಯದವರೆಗೆ ಹಿಡಿದಿರಿಸಬಹುದು. – ಅಶೋಕ್ ಕಿನಿಲ, ಅಧ್ಯಕ್ಷರು, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ
Advertisement
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…