ಮಂಗಳೂರು: ಚಾಲಿ ಅಡಿಕೆ ಧಾರಣೆ ಏರುತ್ತಿದೆ. ದಿನದಿಂದ ದಿನಕ್ಕೆ ಧಾರಣೆ ಏರಿಕೆಯ ಹಾದಿಯಲ್ಲಿದೆ. ಮಂಗಳವಾರ ಮತ್ತೆ 5 ರೂಪಾಯಿ ಹೊಸ ಅಡಿಕೆಗೆ ಏರಿಕೆಯಾಗಿ 325 ರೂಪಾಯಿಗೆ ಖರೀದಿಯಾಗುವ ಮೂಲಕ ಇದುವರೆಗಿನ ಧಾರಣೆಯಲ್ಲಿ ಸಾರ್ವಕಾಲಿಕ ದಾಖಲೆಯತ್ತ ಸಾಗಿತು. ಹೀಗಾದರೂ ಅಡಿಕೆ ಮಾರುಕಟ್ಟೆಗೆ ಬರುತ್ತಿಲ್ಲ. ಬೇಡಿಕೆ ತಡೆಯಲಾಗುತ್ತಿಲ್ಲ.. ಇದು ಅಡಿಕೆ ಮಾರುಕಟ್ಟೆಯ ಈಗಿನ ಸ್ಥಿತಿ.
ಅಡಿಕೆ ಧಾರಣೆ 300 ರೂಪಾಯಿ ದಾಟಿದ ಬಳಿಕ ಇದೀಗ ವಿದೇಶದ ಅಡಿಕೆ ಕಳ್ಳದಾರಿಯ ಮೂಲಕ ಹೇಗಾದರೂ ತರುವ ಪ್ರಯತ್ನ ನಡೆಯುತ್ತಲೇ ಇದೆ. ಎರಡು ದಿನಗಳ ಹಿಂದೆ 1500 ಕ್ಕೂ ಹೆಚ್ಚು ಚೀಲ ಅಡಿಕೆ ಪತ್ತೆಯಾಗಿತ್ತು. ಇದೀಗ ರೈಲಿನ ಮೂಲಕ ಸಾಗಾಟ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನು ರೈಲ್ವೇ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳೆದ 2 ದಿನಗಳಿಂದ ಇದರ ಮಾಲಕರು ಪತ್ತೆಯಾಗಿಲ್ಲ. ಸುಮಾರು 800 ಚೀಲ ಅಡಿಕೆ ಈಗ ಗುವಹಾಟಿ ರೈಲ್ವೇ ನಿಲ್ದಾಣದಲ್ಲಿದೆ.
ಅಸ್ಸಾಂ ಗುವಹಾಟಿ ರೈಲು ನಿಲ್ದಾಣದಲ್ಲಿ 3 ಬೋಗಿಗಳಲ್ಲಿದ್ದ ಸರಕು ತಪಾಸಣೆ ವೇಳೆ ಅಡಿಕೆ ಇರುವುದು ರೈಲ್ವೇ ಪೊಲೀಸರಿಗೆ ಪತ್ತೆಯಾಗಿದೆ.ಯಾವುದೇ ದಾಖಲೆ ಇರಲಿಲ್ಲ ಹಾಗೂ ಜಿ ಎಸ್ ಟಿ ಬಗ್ಗೆಯೂ ಯಾವುದೇ ದಾಖಲೆ ಇಲ್ಲ ಹೀಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ಬರ್ಮಾದಿಂದ ಬಂದಿರುವ ಕಳಪೆ ಗುಣಮಟ್ಟದ ಅಡಿಕೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನವದೆಹಲಿಗೆ ತೆರಳುವ ಸರಕು ರೈಲಿನ ಮೂರು ವಿಭಾಗಗಳನ್ನು ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ದಿಮಾಪುರದಲ್ಲಿ ತುಂಬಿಸಿರುವುದು ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆ ನಾಗಾಲ್ಯಾಂಡ್ ಮೂಲಕ ದಿಮಾಪುರಕ್ಕೆ ಬಂದಿರುವ ಅಡಿಕೆಯನ್ನು ವಶಕ್ಕೆ ಪಡೆಯಲಾಗಿತ್ತು. ರವಾನೆಗೆ ಸಂಬಂಧಿಸಿದ ದಾಖಲೆಗಳ ತನಿಖೆ ನಡೆಯುತ್ತಿದೆ. ಈಶಾನ್ಯ ರಾಜ್ಯಗಳಿಂದ ದೇಶದ ಬೇರೆಡೆಗೆ ಅಡಿಕೆ ಕಳ್ಳಸಾಗಣೆ ಮಾಡುವುದು ಹೊಸತಲ್ಲ, ಆದರೆ ಈ ಬಾರಿ ಯಾವುದೇ ಅಕ್ರಮವಾಗದಂತೆ ಪೊಲೀಸರು , ಅರೆ ಸೇನಾ ಪಡೆ ಬಿಗಿ ತಪಾಸಣೆ ನಡೆಸುತ್ತಿದೆ.
ಮುಂದಿನ ಏಳು ದಿನಗಳ ಕಾಲ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಕೆಲವು ಕಡೆ ಭಾರೀ…
ಇತಿಹಾಸದಲ್ಲಿ ಮೊದಲ ಬಾರಿಗೆ ಕೇರಳ ಕೊಬ್ಬರಿ ಆಮದು ಮಾಡಿಕೊಳ್ಳುವ ಸಾಧ್ಯತೆ ಇದೆ.ತೆಂಗಿನಕಾಯಿ ಉತ್ಪಾದನೆಯಲ್ಲಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ದೇಶದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಹೆಚ್ಚು ಪರಿಸರ…
ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಆಧುನಿಕ ಮೂಲಭೂತ…
ದಾವಣಗೆರೆ ನಗರ ಸೇರಿದಂತೆ ಜಿಲ್ಲಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು…