ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕಾಸರಗೋಡು ಜಿಲ್ಲೆಯ ಅಡಿಕೆ ತೋಟಗಳಲ್ಲಿ ಎಳೆ ಅಡಿಕೆ ಬೀಳುವುದು ಹಾಗೂ ಸಿಂಗಾರ ಒಣಗುವ ಸಮಸ್ಯೆ ಈ ಬಾರಿ ವಿಪರೀತವಾಗಿ ಕಂಡುಬಂದಿತ್ತು. ಕಳೆದ 2 ವರ್ಷಗಳಿಂದ ಈ ಸಮಸ್ಯೆ ಇದೆ ಎಂದು ಅಡಿಕೆ ಬೆಳೆಗಾರರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ವಿಟ್ಲದ ಸಿಪಿಸಿಆರ್ ಐ ವಿಜ್ಞಾನಿಗಳ ಗಮನಕ್ಕೆ ತಂದು, ಈ ಬಗ್ಗೆ ಸೂಕ್ತವಾದ ಅಧ್ಯಯನ ಹಾಗೂ ಪರಿಹಾರ ಮಾರ್ಗ ಅಗತ್ಯವಾಗಿದೆ ಎಂದು ಅಡಿಕೆ ಬೆಳೆಗಾರರ ಪರವಾಗಿ ತಿಳಿಸಿತ್ತು.
ಇದಕ್ಕೆ ಸ್ಪಂದಿಸಿದ ವಿಜ್ಞಾನಿಗಳ ತಂಡ ಸುಳ್ಯ, ಪುತ್ತೂರು, ಕಡಬ ಪ್ರದೇಶದ ಕೆಲವು ಅಡಿಕೆ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಿದ್ದಿರುವ ಅಡಿಕೆ ಸ್ಯಾಂಪಲ್ ಗಳ ಸಂಗ್ರಹಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ವಿಜ್ಞಾನಿಗಳ ತಂಡದಲ್ಲಿ ಸಸ್ಯ ಸಂತಾನೋತ್ಪತ್ತಿ ವಿಜ್ಞಾನಿ ಡಾ. ಎನ್. ಆರ್. ನಾಗರಾಜ, ಕೃಷಿ ಕೀಟಶಾಸ್ತ್ರ ವಿಜ್ಞಾನಿ ಡಾ. ಶಿವಾಜಿ ಹೌಸ್ರಾವ್ ಥೂಬ್, ಸಸ್ಯ ರೋಗಶಾಸ್ತ್ರ ವಿಜ್ಞಾನಿ ಡಾ. ಆರ್. ಥವಾ ಪ್ರಕಾಶ ಪಾಂಡಿಯನ್ ಮತ್ತು ಹಿರಿಯ ತಾಂತ್ರಿಕ ಅಧಿಕಾರಿ ಸಂತೋಷ್ ಕುಮಾರ್ ಭಾಗವಹಿಸಿದ್ದರು. ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ಕಿನಿಲ, ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಮೊದಲಾದವರು ಜೊತೆಗಿದ್ದರು.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel