ಅಡಿಕೆ ಮೇಲಿನ ಅಪಪ್ರಚಾರಕ್ಕೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಖಂಡನೆ

July 21, 2019
9:00 AM
ಮಂಚಿ ಶ್ರೀನಿವಾಸ ಆಚಾರ್

ಪುತ್ತೂರು: ಅಡಿಕೆ ಹಾನಿಕಾರಕವೆಂದು ಒಂದು ಲಾಬಿ ನಿರಂತರ ಅಪಪ್ರಚಾರ ನಡೆಸುತ್ತಿದೆ. ಕಳೆದ ಎರಡು ದಶಕಗಳಿಂದ ಇದು ನಡೆಯುತ್ತಿದೆ. ಮಾಧ್ಯಮಗಳಲ್ಲಿ, ಸೆಮಿನಾರ್ ಗಳಲ್ಲಿ ಈ ಬಗ್ಗೆ  ಪ್ರಯತ್ನಿಸಲಾಗುತ್ತಿದೆ. ಪಾರ್ಲಿಮೆಂಟ್‍ನಲ್ಲಿ ಕೂಡಾ ಪುನ: ಪುನ: ಪ್ರಶ್ನೆಗಳನ್ನು ಕೇಳಿಸುವ ಮೂಲಕ ಅದರ ದುರುದ್ದೇಶ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಹೇಳಿದ್ದಾರೆ.

ಅಧಿಕಾರಿಗಳ ಮೂಲಕ ನಡೆಯುವ ಇದು ಮಂತ್ರಿಗಳಿಗೂ ತಿಳಿಯುವುದಿಲ್ಲ. ಸಾಕಷ್ಟು ಅಧಿಕಾರಿಗಳು, ವಿಜ್ಞಾನಿಗಳು, ವೈದ್ಯರು ಹಾಗೂ ಬುದ್ಧಿಜೀವಿಗಳಂತೆ ನಟಿಸುವವರು ಇದರಲ್ಲಿ ಶಾಮೀಲಾಗಿರುತ್ತಾರೆ. ಬದಲಾಗಿ ಈವರೆಗೆ ಯಾವುದೇ ನೈಜ ಸಂಶೋಧನೆಯು ಅಡಿಕೆ ಹಾನಿಕಾರಕವೆಂದು ಹೇಳಿಲ್ಲ. ಬಹಳಷ್ಟು ವಿದೇಶಿ ಸಂಶೋಧನೆಗಳು ಅಡಿಕೆಯ ಉಪಯೋಗವು ಆರೋಗ್ಯಕ್ಕೆ ಪೂರಕವೆಂದೇ ಹೇಳಿವೆ. ಇತ್ತೀಚೆಗೆ ಸಿಪಿಸಿಆರ್ ಐ ಕಾಸರಗೋಡಿನಲ್ಲಿ ನಡೆದ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ಕೂಡಾ ಅಡಿಕೆಯ ಬಗ್ಗೆ ಯಾವುದೇ ಋಣಾತ್ಮಕ ಪರಿಣಾಮಗಳ ಬಗ್ಗೆ ಉಲ್ಲೇಖ ಬಂದಿಲ್ಲ. ಆದರೆ ಈ ವಿಷಯಗಳು ಮಾಧ್ಯಮಗಳಲ್ಲಿ ಬೆಳಕಿಗೆ ಬರುವುದಿಲ್ಲ. ಇಂತಹ ಲಾಬಿಗಳು ಕೆಲಸ ಮಾಡುವುದು ಸರ್ವವಿದಿತ.

ಉದಾಹರಣೆಗಾಗಿ

1) ತೆಂಗಿನ ಎಣ್ಣೆ ಹಾನಿಕಾರಕ ಎಂದು ಪ್ರಚುರಪಡಿಸಿ ಸಾಕಷ್ಟು ಹಾನಿ ಮಾಡಲಾಗಿದೆ.
2) ಕೊಲೆಸ್ಟರಾಲ್ ಬಗ್ಗೆ ಭಯ ಹುಟ್ಟಿಸಿ ಸಾಕಷ್ಟು ತೊಂದರೆ ಮಾಡಲಾಗಿದೆ. ಒಂದು ಅಂದಾಜಿನಂತೆ ಔಷಧ ಕಂಪೆನಿಗಳಿಗೆ Trillian Dollar (1000 Billions) ವ್ಯಾಪಾರ ಒದಗಿಸಿದೆ.
3) ಹಾಗೆಯೇ ಡಯಾಬೆಟಿಕ್ ಹಾಗೂ ರಕ್ತದೊತ್ತಡಗಳ ಬಗ್ಗೆ ಸುಳ್ಳು ಮಾಹಿತಿ ಸೃಷ್ಟಿಸಿ ಔಷಧ ಕಂಪೆನಿಗಳು ಕೋಟ್ಯಾಂತರ ಗಳಿಸುತ್ತಿವೆ.

ಇವೆಲ್ಲ ಒಂದು ಆಪತ್ಕಾರಿ ಬೆಳವಣಿಗೆ. ಕಾಣದ ಕೈಗಳ ಈ ಕೃತ್ಯ ಖಂಡನಾಕಾರಿ. ಆದರೆ ಇಂತಹ ಪ್ರಯತ್ನ ನೈಜ ಹಾನಿಕಾರಕ ವಸ್ತುಗಳ ಬಗ್ಗೆ ಇಲ್ಲ ಯಾಕೆ. ಉದಾ: ಮದ್ಯ, ತಂಬಾಕು ಹಾಗೂ ಮಾದಕವಸ್ತುಗಳು.
ಅಡಿಕೆಯ ಉಪಯೋಗ ನಿಜವಾಗಿ ಲಾಭದಾಯಕ. ಶುಭಕಾರ್ಯಗಳಲ್ಲಿ ಔಷಧವಾಗಿ ಶತಮಾನಗಳಿಂದ ಇದು ಬಳಕೆಯಲ್ಲಿದೆ. ಅಜೀರ್ಣ, ಚರ್ಮರೋಗ ಇವುಗಳಿಗೆ ವ್ಯಾಪಕವಾಗಿ ಬಳಕೆಯಲ್ಲಿದೆ. ಹಿತಮಿತ ಬಳಕೆ ಆರೋಗ್ಯವರ್ಧಕ. ಇಷ್ಟೆಲ್ಲ ತಿಳಿದೂ ಸರಕಾರದ ಸ್ಪಷ್ಟ ನಿರ್ದೆಶನದ ಹೊರತಾಗಿಯೂ ಬಹಳಷ್ಟು ಕಳಪೆ ಗುಣಮಟ್ಟದ ಅಡಿಕೆ ಆಮದು ಆಗುತ್ತಿದೆ. ಎಲ್ಲಾ ಅಡೆತಡೆಗಳನ್ನು ಮೀರಿ ಇದು ದೇಶದ ಒಳಗೆ ನುಸುಳುತ್ತಿದೆ. ಕೃಷಿಕರಿಗೆ ನ್ಯಾಯಬೇಕು. ನೀರಿನ ಕೊರತೆ, ನುರಿತ ಕಾರ್ಮಿಕರ ಕೊರತೆ, ಏರುತ್ತಿರುವ ಒಳಸುರಿಗಳ ಬೆಲೆ, ಕೊಳೆರೋಗ ಮೂಲಕ (ಪರಿಣಾಮಕಾರಿ ಔಷಧ ಲಭ್ಯವಿಲ್ಲದಿರುವುದು) ಕಂಗಾಲಾಗಿರುವ ಬೆಳೆಗಾರರಿಗೆ ಸೂಕ್ತ ಪರಿಹಾರ ಬೇಕು ಎಂದು ಮಂಚಿ ಶ್ರೀನಿವಾಸ ಆಚಾರ್ ಒತ್ತಾಯಿಸಿದ್ದಾರೆ.

 

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಚಿಕ್ಕಮಗಳೂರು ಜಿಲ್ಲೆ | ಮಂಗನ ಕಾಯಿಲೆ ಸೋಂಕಿಗೆ ವೃದ್ಧೆ ಬಲಿ | ಮಂಗನಕಾಯಿಲೆ ಬಗ್ಗೆ ಇರಲಿ ಎಚ್ಚರ |
March 18, 2025
8:31 PM
by: The Rural Mirror ಸುದ್ದಿಜಾಲ
ಸ್ಥಳೀಯ ಮಟ್ಟದಲ್ಲಿ ಸೌರ ವಿದ್ಯುತ್ ಉತ್ಪಾದಿಸಿ ರೈತರ ಪಂಪ್ ಸೆಟ್ ಗಳಿಗೆ ಪೂರೈಸಲು ಚಿಂತನೆ | ಸದ್ಯ ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ |
March 18, 2025
8:13 PM
by: The Rural Mirror ಸುದ್ದಿಜಾಲ
ಉತ್ತರ ಒಳನಾಡಿನಲ್ಲಿ ಬಿಸಿಹವೆ – ಹವಾಮಾನ ಇಲಾಖೆ ಮುನ್ಸೂಚನೆ
March 18, 2025
7:40 PM
by: The Rural Mirror ಸುದ್ದಿಜಾಲ
ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಪೋಷಕರನ್ನು ಬಿಟ್ಟು ಮಕ್ಕಳು ನಾಪತ್ತೆ…!
March 17, 2025
7:02 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror