ಆರೋಪಿ ಗಣೇಶ್
ಪುತ್ತೂರು:ಅಡುಗೆ ಸರಿಯಾಗಿ ಮಾಡಲಿಲ್ಲ ಎಂಬ ವಿಚಾರಕ್ಕೆ ಕೋಪಗೊಂಡು ಪತಿಯೇ ಪತ್ನಿಯನ್ನು ಇರಿದು ಕೊಂಡ ಘಟನೆ ಪುತ್ತೂರು ತಾಲೂಕಿನ ಕಲ್ಲಪದವು ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ. ಗಣೇಶ್ ಎಂಬಾತ ಕೊಲೆ ಮಾಡಿದ ಆರೋಪಿ, ಅಕ್ಷತಾ ಮೃತ ಪಟ್ಟವರು.
ಪುತ್ತೂರು ತಾಲೂಕಿನ ಕಲ್ಲಪದವು ಎಂಬಲ್ಲಿ ಗಣೇಶ್ ಎಂಬಾತನು ತನ್ನ ಮನೆಯಲ್ಲಿ ಪತ್ನಿ ಅಕ್ಷತಾ ಎಂಬಾಕೆಯನ್ನು ಕ್ಷುಲ್ಲಕ ಕಾರಣಕ್ಕಾಗಿ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದು, ಗಾಯಗೊಂಡ ಅಕ್ಷತಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಸಂಜೆ ವೇಳೆ ಅಡುಗೆ ಸರಿ ಮಾಡಲಿಲ್ಲ ಎಂಬ ಪತಿ-ಪತ್ನಿಗೆ ಮಾತು ಬೆಳೆದು ಚೂರಿಯಿಂದ ಗಣೇಶನು ಅಕ್ಷತಾಳಿಗೆ ಇರಿದಿದ್ದ. ಈ ಸಂದರ್ಭ ಗಾಯಗೊಂಡ ಅಕ್ಷತಾ ಪಕ್ಕದ ಮನೆಗೆ ತೆರಳಿದಾಗ ಅಲ್ಲಿಗೂ ಬಂದು ಇರಿಯಲು ಯತ್ನಿಸಿದಾಗ ಅಲ್ಲಿದ್ದವರು ಆತನನ್ನು ತಡೆದಿರುತ್ತಾರೆ. ಆಗ ಆರೋಪಿಯು ಸ್ಥಳದಿಂದ ಓಡಿಹೋಗಿದ್ದ.
ಕುತ್ತಿಗೆ, ಮುಖ ಮತ್ತಿತರ ಕಡೆ ಗಂಭೀರ ಗಾಯಗೊಂಡು ಕುಸಿದು ಬಿದ್ದ ಅಕ್ಷತಾ ಅವರನ್ನು ಆಟೋರಿಕ್ಷಾದಲ್ಲಿ ಅಕ್ಷತಾ ಅವರ ತಾಯಿ ಹಾಗೂ ಗಣೇಶನ ಅಣ್ಣನಾದ ಬಾಲಕೃಷ್ಣ ಅವರು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ಅಕ್ಷತಾ ಮೃತಪಟ್ಟಿದ್ದಾರೆ. ಪುತ್ತೂರು ತಾಲೂಕು ನಿಡ್ಪಳ್ಳಿ ಗ್ರಾಮದ ದೊಂಬಟೆಬರಿ ಮನೆ ಕಮಲ ಎಂಬವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತಲೆಮರೆಸಿಕೊಂಡಿದ್ದ ಆರೋಪಿ ಗಣೇಶ್ ಎಂಬಾತನನ್ನು ಬಂಧಿಸಲಾಗಿದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…