ಸುದ್ದಿಗಳು

ಅಡ್ಡಮತದಾನ ಪ್ರಕರಣ : ಇಂದೇ ಕೊನೆಯ ದಿನ , ನಾಳೆಯೇ ಶಿಸ್ತು ಕ್ರಮ ?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನ ಪ್ರಕರಣಕ್ಕೆ ಈ ವಾರ ತೆರೆ ಬೀಳಲಿದೆ ಎಂದು ಮೂಲಗಳು ತಿಳಿಸಿವೆ. ಶುಕ್ರವಾರ ಸಂಜೆಯ ಒಳಗೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಎಲ್ಲರೂ ರಾಜೀನಾಮೆ ನೀಡಬೇಕು.ಇಲ್ಲದೇ ಇದ್ದರೆ ಶನಿವಾರ ಶಿಸ್ತುಕ್ರಮವಾಗಲಿದೆ ಎಂದು ಬಿಜೆಪಿ ಹಾಗೂ ಸಂಘಪರಿವಾರದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಸಹಕಾರಿ ನಿಯಮದ ಪ್ರಕಾರ  ಅಧ್ಯಕ್ಷ ಹಾಗೂ ನಿರ್ದೇಶಕರು ರಾಜೀನಾಮೆಯನ್ನು ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಿಗೆ ನೀಡಬೇಕು. ಆ ಬಳಿಕ ರಾಜೀನಾಮೆ ಪ್ರಕ್ರಿಯೆ ನಡೆಯಲಿದೆ. ಆದರೆ ಆರಂಭದ ಹಂತದಲ್ಲಿ ರಾಜೀನಾಮೆ ಪತ್ರವನ್ನು ಸಂಘಪರಿವಾರ ಅಥವಾ ಬಿಜೆಪಿ ಪ್ರಮುಖರಲ್ಲಿ ನೀಡಲು ಸೂಚನೆ ನಿಡಲಾಗಿದೆ ಎಂದು ತಿಳಿದುಬಂದಿದ್ದು ಈ ಹಿನ್ನೆಲೆಯಲ್ಲಿ  3 ಮಂದಿ ಪಕ್ಷದ ಪ್ರಮುಖರಲ್ಲಿ  ಗುರುವಾರವೇ ರಾಜೀನಾಮೆ ಪತ್ರ ನೀಡಿದ್ದಾರೆ ಎಂದು ತಿಳಿದುಬಂದಿದೆ. ಉಳಿದವರು ಯಾವಾಗ ರಾಜೀನಾಮೆ ನೀಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ಒಂದು ವೇಳೆ ರಾಜೀನಾಮೆ ನೀಡದೇ ಇದ್ದರೆ ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸುವುದು  ಹಾಗೂ ಅಗತ್ಯ ಬಿದ್ದರೆ ಉಚ್ಛಾಟನೆ ಕೂಡಾ ನಡೆಯಲಿದೆ, ರಾಜೀನಾಮೆ ನೀಡದೇ ಸಹಕಾರಿ ಸಂಘದ ಎಲ್ಲಾ ನಿರ್ದೇಶಕರು  ಬೆಂಬಲ ವ್ಯಕ್ತಪಡಿಸಿದರೆ ಇಡೀ ಸಹಕಾರಿ ಸಂಘವೇ ಬಿಜೆಪಿ ಅಥವಾ ಸಹಕಾರಿ ಭಾರತಿ ತೆಕ್ಕೆಯಿಂದ ಹೋದರೂ ಚಿಂತೆ ಇಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ, ಅದೂ ಇಲ್ಲದೇ ಹೋದರೆ ಅವಿಶ್ವಾಸ ನಿರ್ಣಯದ ಮಾರ್ಗವಿದ್ದರೆ ಅದನ್ನೂ ಉಳಿದ ನಿರ್ದೇಶಕರು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸುಳ್ಯದಲ್ಲಿ ನಡೆದ ಅಡ್ಡಮತದಾನ  ಬಿಜೆಪಿ ಹಾಗೂ ಸಹಕಾರ ಭಾರತಿ, ಸಂಘಪರಿವಾರಕ್ಕೆ ಬಾರೀ ತಲೆನೋವು ತಂದಿದೆ. ಸುಳ್ಯದಂತಹ  ಬಿಜೆಪಿಯ ಸಂಘಟನಾತ್ಮಕ ಪ್ರದೇಶದಲ್ಲಿ ಅಡ್ಡಮತದಾನ ನಡೆದಿರುವುದು  ಪಕ್ಷಕ್ಕೆ ಹಾಗೂ ಸಂಘ ಪರಿವಾರಕ್ಕೆ ಮುಜುಗರ ತಂದಿತ್ತು. ಹೀಗಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಮತದಾನ ಮಾಡಿರುವ ಸಹಕಾರಿ ಸಂಘದ ನಿರ್ದೇಶಕರು ಹಾಗೂ ಅಧ್ಯಕ್ಷರು ಸೇರಿದಂತೆ ಎಲ್ಲಾ 17 ಮಂದಿ ರಾಜೀನಾಮೆ ನೀಡಬೇಕು ಎಂಬ ಸೂಚನೆ ಬಿಜೆಪಿ, ಸಂಘಪರಿವಾರ  ನೀಡಿದರೂ ಜಾರಿಯಾಗಿಲ್ಲ. ಯಾರೊಬ್ಬರೂ ರಾಜೀನಾಮೆ ನೀಡಿರಲಿಲ್ಲ. ಹಲವು ಬಾರಿ ಮುಂದೂಡಿದ್ದ ಶಿಸ್ತು ಕ್ರಮದ ಪ್ರಶ್ನೆಗಳನ್ನು ಕಾರ್ಯಕರ್ತರು ಕೇಳಿದ್ದರು.ಇದೀಗ ಶನಿವಾರ ಅಂತಿಮವಾಗಿ ಶಿಸ್ತುಕ್ರಮವಾಗುವುದು ನಿಶ್ಚಿತವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಕ್ರಮ ಅಡಿಕೆ ಸಾಗಾಟ ಪತ್ತೆ | 466 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌

ಮಿಜೋರಾಂನ ಚಾಂಫೈನಲ್ಲಿ ಅಸ್ಸಾಂ ರೈಫಲ್ಸ್ 466 ಚೀಲ ಅಡಿಕೆಯನ್ನು ವಶಕ್ಕೆ ಪಡೆದಿದೆ. ಈ…

48 minutes ago

ಆ.15 ರಿಂದ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಸರ್ಕಾರ ಆದೇಶ

ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಇರುವ ದೇವಾಲಯಗಳಲ್ಲಿ ಕಡ್ಡಾಯವಾಗಿ ನೀರಿನ ಬಾಟಲ್ ಸೇರಿದಂತೆ ಪ್ಲಾಸ್ಟಿಕ್ …

3 hours ago

15 ದಿನಗಳಿಗೊಮ್ಮೆ ಶಾಲೆ, ಅಂಗನವಾಡಿಗಳ ನೀರಿನ ತಪಾಸಣೆ – ಜಿ. ಪಂ ಸಿಇಒ ಸೂಚನೆ

ಪ್ರತಿ 15 ದಿನಗಳಿಗೊಮ್ಮೆ ಶಾಲೆ ಮತ್ತು ಅಂಗನವಾಡಿಗಳ ಕುಡಿಯುವ ನೀರನ್ನು ಪರೀಕ್ಷೆಗೊಳಪಡಿಸಿ  ತಪಾಸಣೆ…

4 hours ago

ಹವಾಮಾನ ವರದಿ | 13-08-2025 | ಆ.21 ರವರೆಗೆ ಮಳೆ ವಿಸ್ತರಣೆ ಎಲ್ಲಿ ? ವಾಯುಭಾರ ಕುಸಿತದ ಕಾರಣದಿಂದ ಮಳೆ ಎಲ್ಲೆಲ್ಲಾ ಇದೆ..?

ಬಂಗಾಳಕೊಲ್ಲಿಯ ಆಂದ್ರಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಒಡಿಸ್ಸಾ ಕರಾವಳಿ ತನಕ ಸಾಗಿ,…

10 hours ago

ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಸಹಾಯಧನ |ವಿವಿಧ ಕಾರ್ಯಕ್ರಮಗಳ ಮೂಲಕ ರೈತರಿಗೆ ನೆರವು

ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ತೋಟಗಾರಿಕಾ ಬೆಳೆಗಳಿಗೆ…

16 hours ago

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಕರಾವಳಿಯಲ್ಲಿ ವ್ಯಾಪಕ ಮಳೆಯಾಗಿದೆ. ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಉತ್ತರ…

16 hours ago