ಅತಿರುದ್ರ ಮಹಾಯಾಗ ಯಾಗದ “ಹವಿಸ್ಸು ಭತ್ತ” ಕೃಷಿ ನಾಟಿ ಮಹೋತ್ಸವ

August 6, 2019
10:00 AM

ಬಡಿಯಡ್ಕ:  ದೇವರಗುಡ್ಡೆ ಶ್ರೀಶೈಲ ಮಹಾದೇವ ಕ್ಷೇತ್ರದಲ್ಲಿ ನಡೆಯಲಿರುವ ಅತಿರುದ್ರ ಮಹಾಯಾಗಕ್ಕೆ ಯಾಗದ ಹವಿಸ್ಸು ಭತ್ತ ಕೃಷಿ ನಾಟಿ ಮಹೋತ್ಸವವು ಬೇಳ ಚೌಕ್ಕಾರು ಕರ್ಪಿತ್ತಿಲು ಅರಿಕ್ಕೆಲ್ ಮರಾಟಿಕೆರೆಯಲ್ಲಿ ನಡೆಯಿತು.

Advertisement
Advertisement

2020 ಫೆಬ್ರವರಿ 26 ರಿಂದ ಮಾರ್ಚ್ 2 ರ ತನಕ ಅತಿ ವಿಶಿಷ್ಟವಾದ ಅತಿರುದ್ರ ಮಹಾಯಾಗವು ನಡೆಯಲಿರುವುದು. ಯಾಗದ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿದ್ದು, ಆಹುತಿಯನ್ನು ನೀಡಲಿರುವ ಹವಿಸ್ಸುಗಳೆಲ್ಲವನ್ನೂ ವಿಷಮುಕ್ತವಾಗಿ ಸಾವಯವ ಕೃಷಿಯ ಮೂಲಕ ನಡೆಸಲಾಗುವುದು.  ಸಿದ್ಧತೆಯ ಭಾಗವಾಗಿ ವಿವಿಧೆಡೆ ಈಗಾಗಲೇ ಸಮಿತಿಗಳನ್ನು ರೂಪೀಕರಿಸಲಾಗಿದ್ದು, ನೀರ್ಚಾಲು ಸಮಿತಿಯ ನೇತೃತ್ವದಲ್ಲಿ ಚೌಕ್ಕಾರು ಕರ್ಪಿತ್ತಿಲು ನಾರಾಯಣ ರೈ ಹಾಗೂ ದೂಮಣ್ಣ ರೈಗಳ ಗದ್ದೆಯಲ್ಲಿ ನಡೆದ ಭತ್ತ ಕೃಷಿ ನಾಟಿ ಮಹೋತ್ಸವಕ್ಕೆ ಹರ ಹರ ಮಹಾದೇವ್ ದೇವನಾಮದೊಂದಿಗೆ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ಭತ್ತದ ನೇಜಿ ಭಕ್ತರಿಗೆ ಹಸ್ತಾಂತರಿಸಿ ಅನುಗ್ರಹಿಸಿದರು. ದೇವರ ನಾಮಸ್ಮರಣೆಯೊಂದಿಗೆ ನಮ್ಮ ಪಾಲಿಗೊದಗಿದ ದೇವರ ಸೇವೆಯನ್ನು ಕೈಗೊಳ್ಳಲು ನೂರಾರು ಭಕ್ತಾದಿಗಳು ಒಂದುಗೂಡಿದ್ದರು. ಪುಟ್ಟ ಮಕ್ಕಳು, ಮಾತೆಯರು, ಮಹನೀಯರು ಒಟ್ಟು ಸೇರಿ ಶೀಘ್ರದಲ್ಲಿ ನಾಟಿಕಾರ್ಯವನ್ನು ಮುಗಿಸಿದರು. ಈ ಸಂದರ್ಭದಲ್ಲಿ ಊರಪರವೂರ ಅನೇಕ ಮಂದಿ ಗಣ್ಯರು ಪಾಲ್ಗೊಂಡಿದ್ದರು.

Advertisement

ಯಾಗದ ಪೂರ್ವಭಾವಿ ಸಿದ್ಧತೆಗಳು ಈಗಾಗಲೇ ಆರಂಭವಾಗಿದ್ದು, ಯಾಗಕ್ಕೆ ಅಗತ್ಯವಿರುವ ಧಾನ್ಯಗಳನ್ನು ಪ್ರಕೃತಿ ಸಹಜವಾಗಿ ಉತ್ಪಾದಿಸುವ ಉದ್ದೇಶದಿಂದ ಭತ್ತದ ಕೃಷಿಯನ್ನು ಮಾಡಲಾಗುತ್ತದೆ. – ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ, ತಂತ್ರಿಗಳು

 

Advertisement

ಅತಿರುದ್ರ ಮಹಾಯಾಗಕ್ಕೆ ಹವಿಸ್ಸು ಭತ್ತ ಕೃಷಿ ನಾಟಿ ಮಹೋತ್ಸವದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ, ಯಜ್ಞದಿಂದ ಪ್ರಕೃತಿ ಸಮೃದ್ಧವಾಗುತ್ತದೆ. ಭೂಮಿಗೆ ಮಳೆ ಬರಬೇಕಾದರೆ ಯಜ್ಞವನ್ನು ನಡೆಸಬೇಕು. ಮಳೆಯಿಂದ ನಮಗೆ ಬೆಳೆ ಲಭಿಸುತ್ತದೆ. ತನ್ಮೂಲಕ ಮನುಷ್ಯನಿಗೆ ಅತೀ ಅಗತ್ಯವಾದ ಆಹಾರ ಲಭಿಸುತ್ತದೆ. ಪ್ರಕೃತಿಯಲ್ಲಿ ಇವತ್ತು ನಮಗೆ ಧಾನ್ಯ ದೊರಕಬೇಕಾದರೆ ದೇವರ ಅನುಗ್ರಹವಿರಬೇಕು ಎಂದು  ತಿಳಿಸಿದರು.

Advertisement

ಅತಿರುದ್ರ ಯಾಗ ಸಮಿತಿಯ ನೀರ್ಚಾಲು ಘಟಕದ ಅಧ್ಯಕ್ಷ ಕೃಷ್ಣ ಮಣಿಯಾಣಿ ಮೊಳೆಯಾರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಯಾಗಸಮಿತಿಯ ಮಾರ್ಗದರ್ಶಕ ವಸಂತ ಪೈ ಬದಿಯಡ್ಕ ಶುಭಾಶಂಸನೆಗೈದರು.  ಧಾರ್ಮಿಕ ಮುಖಂಡ ಜಯದೇವ ಖಂಡಿಗೆ ಮಾತನಾಡಿದರು. ನ್ಯಾಯವಾದಿ ಸತೀಶ್ ಕೋಟೆಕಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ನೀರ್ಚಾಲು ವಲಯ ಯಾಗ ಸಮಿತಿಯ ಗೌರವಾಧ್ಯಕ್ಷ ರಾಮ ಪಾಟಾಳಿ, ರಾಮಪ್ಪ ಮಂಜೇಶ್ವರ, ಬದಿಯಡ್ಕ ಗ್ರಾ.ಪಂ.ಸದಸ್ಯ ಶಂಕರ ಡಿ., ಡಾ| ಜಯಪ್ರಕಾಶ ನಾಯಕ್, ರಾಮಕೃಷ್ಣ ಆಳ್ವ, ನಾರಾಯಣ ರೈ, ಸೂರ್ಯಪ್ರಕಾಶ, ಕುಂಜಾರು ಶ್ಯಾಮಭಟ್ ವೇದಿಕೆಯಲ್ಲಿ ಉಪಸ್ಥಿತರಿದರು.

ಮೋಹನದಾಸ ರೈ ಸ್ವಾಗತಿಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೌಮ್ಯಲತಾ ವಂದಿಸಿದರು.

Advertisement

ಹಿರಿಯ ಕೃಷಿಕರಿಗೆ ಸನ್ಮಾನ :
ಊರಿನಲ್ಲಿ ಅನೇಕ ವರ್ಷಗಳಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಹಿರಿಯರಾದ ತಿಮ್ಮಪ್ಪ ಪಾಟಾಳಿ ಚೌಕಾರು, ಸೀತು, ಮದರು, ಬಡದಿ, ಸುಶೀಲ, ಮೀನಾಕ್ಷಿ ಹಾಗೂ ಗದ್ದೆಯನ್ನು ಉಳುಮೆ ಮಾಡಿದ ಎಡ್ವಿನ್ ಕೆದೋಡಿ ಅವರನ್ನು ಈ ಸಂದರ್ಭದಲ್ಲಿ ಶಾಲು ಹೊದೆಸಿ ಗೌರವಿಸಲಾಯಿತು. ಸಭಾಕಾರ್ಯಕ್ರಮದ ನಂತರ ಗಂಜಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

 

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |
May 3, 2024
9:58 PM
by: ದ ರೂರಲ್ ಮಿರರ್.ಕಾಂ
ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ
May 3, 2024
12:48 PM
by: ಸಾಯಿಶೇಖರ್ ಕರಿಕಳ
ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ

You cannot copy content of this page - Copyright -The Rural Mirror