ಅಧಿಕಾರದ ಹಿಂದೆ ಬಿದ್ದಿಲ್ಲ….. ಪಕ್ಷ ಸಂಘಟನೆಯಲ್ಲಿ ಸಕ್ರೀಯನಾಗುತ್ತೇನೆ – ಶಾಸಕ ಅಂಗಾರ

August 29, 2019
9:34 PM

ಮಂಗಳೂರು: ನಾನು ಅಧಿಕಾರದ ಹಿಂದೆ ಎಂದೂ ಹೋಗಿಲ್ಲ. ಈಗಲೂ ಅಧಿಕಾರದ ಹಿಂದೆ ಬಿದ್ದಿಲ್ಲ. ಪಕ್ಷ ಮತ್ತು ಸಂಘಟನೆಯ ವಿಚಾರಧಾರೆಯಡಿ ಬೆಳೆದು ಬಂದ ಕಾರಣ ಅಧಿಕಾರದ ಆಸೆ ಇಲ್ಲ‌. ನನ್ನ ಬಗ್ಗೆ ಸಂಶಯ ಬೇಡ ಪಕ್ಷ ಸಂಘಟನೆಯಲ್ಲಿ ನಳಿನ್ ಕುಮಾರ್ ಜತೆಗಿದ್ದು ಪೂರ್ಣ ಪ್ರಮಾಣದಲ್ಲಿ ಸಕ್ರೀಯರಾಗುತ್ತೇನೆ. ಕ್ಷೇತ್ರದ ಜನರ ಸೇವೆ ನಿರಂತರವಾಗಿ ಮಾಡುತ್ತೇನೆ ಹೀಗೆಂದವರು ಸುಳ್ಯ ಶಾಸಕ ಎಸ್.ಅಂಗಾರ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಜಿಲ್ಲಾ ಬಿಜೆಪಿಯಿಂದ ನೀಡಲಾದ ಅಭಿನಂದನಾ ಸಮಾರಂಭದಲ್ಲಿ ಅಂಗಾರರು ತಮ್ಮ ಮನದಾಳವನ್ನು ಬಿಚ್ಚಿಟ್ಟರು.

ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ನಳಿನ್ ಕುಮಾರ್ ಕೂಡ ಅಂಗಾರರ ಹಿರಿತನವನ್ನೂ, ಸರಳತೆಯನ್ನು ಕೊಂಡಾಡಿದರು. ಶಾಸಕ ಅಂಗಾರ ಅವರನ್ನು ಉಲ್ಲೇಖಿಸಿ ಮಾತನಾಡಿದ ಅವರು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಅವರು ಅಹಂಕಾರ ತೋರಿಲ್ಲ, ಗುಂಪುಗಾರಿಕೆ ಮಾಡಿಲ್ಲ, ಯಾರ ಮನೆ ಬಾಗಿಲಿಗೂ ಸೀಟಿಗಾಗಿ ಅಲೆದಾಡಿಲ್ಲ ಎಂದರು‌. ನಾನು ಕೂಡಾ ರಾಜ್ಯಾಧ್ಯಕ್ಷ ಸ್ಥಾನವನ್ನು ಬಯಸಿಲ್ಲ. ಸಂಘದ ಕಾರ್ಯದಲ್ಲಿ ನನ್ನನ್ನು ತೊಡಗಿಸಿಕೊಂಡು ಸಮಾಜಕ್ಕಾಗಿ ದುಡಿದ ಕಾರಣ ಅವಕಾಶ ಬಂದಿದೆ ಎಂದರು‌.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 09-07-2026 | ಕರ್ನಾಟಕದಲ್ಲಿ ಮುಂಗಾರು ದುರ್ಬಲ..! ಜುಲೈ 11 ರಿಂದ ಮಳೆ ಮತ್ತಷ್ಟು ಇಳಿಕೆ, ಬಿಸಿಲಿನ ಅವಧಿ ಹೆಚ್ಚಳ ಸಾಧ್ಯ
July 9, 2026
1:18 PM
by: ಸಾಯಿಶೇಖರ್ ಕರಿಕಳ
ಜುಲೈ ಮಳೆಯಿಂದ ದೇಶಕ್ಕೆ ನೆಮ್ಮದಿ…! ಮಳೆ ಕೊರತೆ 12%ಕ್ಕೆ ಇಳಿಕೆ
July 9, 2026
1:04 PM
by: ದ ರೂರಲ್ ಮಿರರ್.ಕಾಂ
ಇಂಧನಕ್ಕೂ ರೈತನೇ ಆಧಾರ…! ಇಥೆನಾಲ್‌ ಯೋಜನೆಯಿಂದ ರೈತರಿಗೆ ₹1.6 ಲಕ್ಷ ಕೋಟಿ ಹೆಚ್ಚುವರಿ ಆದಾಯ
July 9, 2026
12:36 PM
by: ದ ರೂರಲ್ ಮಿರರ್.ಕಾಂ
ಅಮೆರಿಕ-ಇರಾನ್ ಯುದ್ಧ ಮತ್ತೆ ಭುಗಿಲೇ..? ಕದನ ವಿರಾಮ ಅಂತ್ಯ ಎಂದ ಟ್ರಂಪ್ – ಹೊಸ ದಾಳಿಗಳಿಂದ ಜಾಗತಿಕ ಆತಂಕ
July 9, 2026
12:24 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror