ಅಧಿಕಾರಿಗಳ ಗೈರು : ಪಂಜದಲ್ಲಿ ಗ್ರಾಮ ಸಭೆ ಮುಂದೂಡಿಕೆ

July 17, 2019
12:43 PM

ಪಂಜ: ವಿವಿಧ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಾತಿಯ ಕಾರಣದಿಂದ ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆ ಮುಂದೂಡಿದ ಘಟನೆ ಬುಧವಾರ ಪಂಜದಲ್ಲಿ ನಡೆದಿದೆ.

Advertisement

ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆ ಬುಧವಾರ ಆಯೋಜನೆಗೊಂಡಿತ್ತು. ಆರಂಭದಲ್ಲಿ ಜನರ ಕೋರಂ ಇಲ್ಲದ ಕಾರಣ ತಡವಾಗಿ ಗ್ರಾಮ ಸಭೆ ಆರಂಭವಾಯಿತು. ನಂತರ ಜನರು ಬಮದರೂ ಅಧಿಕಾರಿಗಳ ಕೊರತೆ ಕಂಡುಬಂತು. ಈ ಸಂದರ್ಭ ಜನರು ಗ್ರಾಪಂ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಪಿ ಡಿ ಒ ಅವರು ವಿವಿಧ ಇಲಾಖೆಗೆ ಸಂಪರ್ಕ ಮಾಡಿ ಅಧಿಕಾರಿಗಳನ್ನು  ಕರೆಯಿಸಿದರೂ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ , ಮೆಸ್ಕಾಂ, ಪಶುಸಂಗೋಪನಾ ಇಲಾಖಾ ಅಧಿಕಾರಿಗಳು ಗೈರಾಗಿದ್ದರು. ಹೀಗಾಗಿ ಗ್ರಾಮಸ್ಥರೇ ವರದಿ ನೀಡಿ ಬಳಿಕ ಸಭೆಯಿಂದ ಹೊರನಡೆದರು. ಹೀಗಾಗಿ ಗ್ರಾಮ ಸಬೆ ಮುಂದೂಡಲಾಯಿತು.

ಗ್ರಾಮ ಸರಕಾರ ಇತ್ತೀಚೆಗೆ ವೈಫಲ್ಯವಾಗುತ್ತಿದೆ. ಅಧಿಕಾರ ಹಳ್ಳಿಯಲ್ಲೇ ಇದೆ. ಪ್ರತೀ ಹಂತದಲ್ಲೂ ಗ್ರಾಮ ಸಭೆಯ ನಿರ್ಣವೇ ಅಂತಿಮವಾಗುತ್ತದೆ. ಹೀಗಾಗಿ  ಅಧಿಕಾರ ಜನರಲ್ಲೇ ಇದೆ. ಈ ಕಾರಣದಿಂದ ಗ್ರಾಮ ಸಭೆ, ಗ್ರಾಮ ಪಂಚಾಯತ್ ಆಡಳಿತ ಬಲವಾಗಬೇಕು. ಇಲಾಖೆಗಳು, ಅಧಿಕಾರಿಗಳು ಗ್ರಾಮ ಸಭೆ, ಗ್ರಾಮ ಸರಕಾರವನ್ನು ನಿರ್ಲಕ್ಷ್ಯ  ಮಾಡುವ ಬಗ್ಗೆ ಸುಳ್ಯನ್ಯೂಸ್.ಕಾಂ ಇಂದು ಫೋಕಸ್ ಸ್ಟೋರಿ ಮಾಡಿತ್ತು. ಇದಕ್ಕೆ ಪಂಜದ ವರದಿಯೂ ಸಾಕ್ಷಿಯಾಯಿತು.

 

ಈ ವರದಿಯ ಲಿಂಕ್ ಇಲ್ಲಿದೆ…

Advertisement

https://theruralmirror.com/?p=6965

 

 

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹಸುರೆಂಬ ಉಸಿರಿನ ಮಹತ್ವ ಇದು…
July 13, 2025
10:55 PM
by: ಎ ಪಿ ಸದಾಶಿವ ಮರಿಕೆ
ಹಲಸಿನ ಬೀಜದ ಖಾರಾ ಸೇವ್‌ – ನೀವೂ ಮಾಡಿನೋಡಿ
July 13, 2025
10:15 PM
by: The Rural Mirror ಸುದ್ದಿಜಾಲ
ಸಂಪತ್ತಿನಷ್ಟೇ ಸದ್ಭುದ್ಧಿಯೂ ಮುಖ್ಯ – ರಾಘವೇಶ್ವರ ಶ್ರೀ
July 13, 2025
9:37 PM
by: The Rural Mirror ಸುದ್ದಿಜಾಲ
ಸಾಮಾಜಿಕ ಕಾರ್ಯಕರ್ತ ಧನಂಜಯ ವಾಗ್ಲೆ ಇನ್ನಿಲ್ಲ | ಅವರು ಬರೆದಿರುವ ಓದಲೇಬೇಕಾದ ಬರಹ ಇಲ್ಲಿದೆ…
July 13, 2025
5:09 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group