ಬೆಳ್ಳಾರೆ : ಸೋತವನನ್ನು ದೂರವಿಡುವ ಜಾಯಮಾನ ಇನ್ನೂ ಹಾಗೇ ಇದೆ. ಅಂಕಗಳಿಕೆ ಮಾತ್ರವೇ ಯಶಸ್ಸಿನ ಮಾನದಂಡವಲ್ಲ. ಅಂತೆಯೆ ಅನುತ್ತೀರ್ಣರಾದರನ್ನು ಮೇಲೆತ್ತುವುದೆ ಶಿಕ್ಷಕರ ನೈಜ ಸಾಮರ್ಥ್ಯ ವಾಗಿದೆ ಎಂದು ಜೇಸಿ ತರಬೇತುದಾರ ಡಾ| ಸುಂದರ ಕೇನಾಜೆ ಹೇಳಿದರು.
ಬೆಳ್ಳಾರೆ ಜೇಸಿಐ ವತಿಯಿಂದ ಜ್ಞಾನದೀಪ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಶಿಕ್ಷಕರಿಗೆ ಬೋಧನಾ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮಮದ ಅಧ್ಯಕ್ಷತೆಯನ್ನು ಬೆಳ್ಳಾರೆ ಜೇಸಿಐ ವಲಯದ ಅಧ್ಯಕ್ಷ ಲೋಕೇಶ್ ತಂಟೆಪ್ಪಾಡಿ ವಹಿಸಿದರು. ವೇದಿಕೆಯಲ್ಲಿ ಯುವ ಜೇಸಿ ಸಾಗರ್ ಉಪಸ್ಥಿತರಿದ್ದರು.
ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಪ್ರಸ್ತಾವಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರವೀಣ್‍ಕುಮಾರ್ ಬೆಳ್ಳಾರೆ ವಂದಿಸಿದರು. ಉಪನ್ಯಾಸಕ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.
ಹಲಸು ಮೌಲ್ಯವರ್ಧನೆಯಾಗಿ ಅಡುಗೆ ಮನೆ ಸೇರುತ್ತಿದೆ. ಅದರ ಜೊತೆಗೇ ಹಲಸು ವಿವಿಧ ರೂಪದಲ್ಲಿ…
ಸಮಾಜಕ್ಕೆ, ರಾಷ್ಟ್ರಕ್ಕೆ ವಿಶ್ವಕ್ಕೆ ಬೆಳಕು ನೀಡುವ ವ್ಯವಸ್ಥೆಯನ್ನು ಬೆಳೆಸುವುದು ಇಡೀ ಸಮಾಜದ ಜವಾಬ್ದಾರಿ…
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಧನಂಜಯ ವಾಗ್ಲೆ ಅವರು ಈಚೆಗೆ ನಿಧನರಾದರು.…
ಬಾಂಗ್ಲಾ ದೇಶದ ಕರಾವಳಿಯಲ್ಲಿ ಉಂಟಾಗಿರುವ ತಿರುವಿಕೆಯ ಪರಿಣಾಮದಿಂದ ನಮ್ಮ ಕರಾವಳಿಯಲ್ಲಿ ಮಳೆಯ ಪ್ರಮಾಣ…
ಮೊಬೈಲ್ ಎಷ್ಟು ಅಪಾಯಕಾರಿ ಸ್ಥಿತಿಗೆ ಮಕ್ಕಳನ್ನು ದೂಡುತ್ತದೆ ಎಂದರೆ, ಕಣ್ಣು ಮಾತ್ರವಲ್ಲ ಮನಸ್ಸುಗಳನ್ನೂ…
ಶರಧಿ.ಡಿ.ಎಸ್, 3 ನೇ ತರಗತಿ, ಶ್ರೀ ಭಾರತೀ ವಿದ್ಯಾ ಪೀಠ, ಮುಜುಂಗಾವು ಎಡನಾಡು,…