ಅಪ್ಪನ ಪ್ರೀತಿ

June 25, 2019
10:00 AM
ಕೈಯ ಹಿಡಿದು ನಡೆಸೋ ದೇವರು ಎಂದರೆ ಅಪ್ಪನು ತಾನೇ..?
ಕನಸ ಬಿತ್ತಿ ,ನನಸಾಗಿಸೋ ಜೊತೆಗಾರನು ತಾನೆ..!
ಅಪ್ಪ ಎಂದರೆ ನನಗೆ ಜೀವವು…
ಅಪ್ಪನ ಪ್ರೀತಿಯೇ ನನಗೆ ಎಲ್ಲವೂ…..||1||
ಪ್ರೇಮದ ಸಿರಿಯಲಿ ಬೆಳೆಸಿದವನು
ಜಗದ ಪರಿಚಯವನು ಇತ್ತವನು
ಕನಸಿನ ಕೈಯಾಗಿ ,ನನಸಾಗಲು‌ ಜೊತೆಯಾಗಿ
ಬಾಳಲ್ಲಿ ಆನಂದ ತುಂಬಿದವನು||2||
ಗದರೋ ಮಾತಿನಲಿ ,ಪ್ರೀತಿಯು ತುಂಬಿದೆ
ಮೊಗದ ಗಾಂಭೀರ್ಯದಲಿ ,ಹಿತವು ಅಡಗಿದೆ
ಅಪ್ಪನ ಶ್ರಮವೆಲ್ಲವೂ ನಮ್ಮ ಬದುಕಿನ ಹಿತಕ್ಕಾಗಿ
ಕಾಯುತಿಹನು ನನ್ನನ್ನು‌ ನೆರಳಿನಂತೆ
ಸಲಹುತಿಹನು‌ ಇನ್ನು ಪುಟ್ಟ ಮಗುವಿನಂತೆ||3||
ಅಪ್ಪನ ನುಡಿಯು ಅಮೃತದಂತೆ
ಅಪ್ಪನ ನೋಟವು ಬೆಳದಿಂಗಳಂತೆ
ನನ್ನ ಪಾಲಿಗೆ ಅಪ್ಪ ದೇವರಂತೆ
ಕಾಣೋ ಕನಸು ಒಂದೇನೇ
ಬಾಳಬೇಕು ನಾವು ಎಂದೆಂದೂ ಹೀಗೇನೆ ||4||
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಆರೋಪದ ಆಚೆ ನಿಂತು ಒಮ್ಮೆ ಯೋಚಿಸಿದ್ದೀರಾ..?
July 12, 2026
11:57 AM
by: ಮಹೇಶ್ ಪುಚ್ಚಪ್ಪಾಡಿ
E20 ಪೆಟ್ರೋಲ್‌ : ದೇಶದ ಹಿತದ ಹೆಸರಿನಲ್ಲಿ ಸಾಮಾನ್ಯರ ಹೆಗಲಿನ ಮೇಲೆ ಹೆಚ್ಚು”ವರಿ”ಯೇ?
July 8, 2026
12:42 PM
by: ಮಹೇಶ್ ಪುಚ್ಚಪ್ಪಾಡಿ
ಬಾಳ ಮಧ್ಯಾಹ್ನದ ಲಹರಿ
July 5, 2026
3:10 PM
by: ದ ರೂರಲ್ ಮಿರರ್.ಕಾಂ
ವಿವಾಹದ ಬದಲಾಗುತ್ತಿರುವ ಮುಖ
July 5, 2026
2:16 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror