ನವದೆಹಲಿ: ಕಳೆದ 20 ವರ್ಷಗಳಲ್ಲಿ ಕಾಣಿಸಿಕೊಂಡ ಚಂಡಮಾರುತಗಳಲ್ಲೇ ಅತ್ಯಂತ ಪ್ರಬಲವಾದ ಚಂಡಮಾರುತ ‘ಅಂಫಾನ್’ ಬಾಂಗ್ಲಾದೇಶ ಹಾಗೂ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ್ದು, ಬಾಂಗ್ಲಾದಲ್ಲಿ ಚಂಡಮಾರುತವು ಮೊದಲ ಬಲಿ ಪಡೆದಿದೆ. ಈ ನಡುವೆ ಭಾರೀ ಗಾಳಿ ಮಳೆಗೆ ಒಡಿಶಾದಲ್ಲಿ 2 ಮಂದಿ ಬಲಿಯಾಗಿದ್ದಾರೆ. ನೂರಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದೆ ಎಂದು ವರದಿಯಾಗಿದೆ.
ಪ್ರಬಲವಾಗಿ ಕಾಣಿಸಿಕೊಂಡ ಚಂಡಮಾರುತ ಸಂಜೆ 7 ಗಂಟೆಯ ಹೊತ್ತಿಗೆ ಕರಾವಳಿ ಹಾಗೂ ಪಶ್ಚಿಮ ಬಂಗಾಳ-ಬಾಂಗ್ಲಾದೇಶದ ಕರಾವಳಿ ಪ್ರದೇಶವನ್ನು ಪಶ್ಚಿಮ ಬಂಗಾಳದ ಕಡೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಅದಕ್ಕಿಂತಲೂ ಮುನ್ನವೇ ಕರಾವಳಿ ತೀರಕ್ಕೆ ಚಂಡಮಾರುತ ಅಪ್ಪಳಿಸಿದೆ. ಚಂಡಮಾರುತವು ಮೊದಲು ಪಶ್ವಿಮ ಬಂಗಾಳದ ದಿಗಾ ಮತ್ತು ಹತಿಯಾ ನಡುವೆ ಇರುವ ಸುಂದರ್‌ಬನ್ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿ ಬಳಿಕ ಬೇರೆ ಕಡೆಗೆ ಪಸರಿಸಿಲಿದೆ ಎಂಬ ಕಾರಣದಿಂದ ಜನರನ್ನು ಸ್ಥಳಾಂತರಿಸುತ್ತಿದ್ದ ಸಂದರ್ಭದಲ್ಲಿ ಹಡಗು ಪಲ್ಟಿಯಾಗಿ ರೆಡ್ ಕ್ರಸೆಂಡ್ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಅಂಫಾನ್ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ ಕರಾವಳಿಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನರನ್ನು ಸಮುದ್ರ ತೀರದಿಂದ ಸ್ಥಳಾಂತರ ಮಾಡಲಾಗಿದೆ.
ಅಂಫಾನ್ ಚಂಡಮಾರುತವು ಗಂಟೆಗೆ 155-165 ಕಿ.ಮೀ ಗಳಷ್ಟಿರಲಿದ್ದು, 185 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು ಈಗಾಗಲೇ ವಿಪರೀತ ಬಿರುಗಾಳಿ ಕಂಡಿದೆ. ಬೆಳಿಗ್ಗೆಯಿಂದಲೇ ಒಡಿಶಾದ ಭದ್ರಕ್, ಪಾರಾದೀಪ್, ಬಾಲಾಸೋರ್, ಚಂಡೀಪುರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು ನಿರಂತರವಾಗಿ ಮಳೆ ಸುರಿಯುತ್ತಿದೆ. ಸದ್ಯ ಚಂಡಮಾರುತ ಭೀಕರ ರೂಪವನ್ನು ತಳೆದಿದೆ.
20 ವರ್ಷಗಳಲ್ಲೇ ಕಂಡಿರದ ಚಂಡಮಾರುತ ಇದಾಗಿದ್ದು 1999ರ ಒಡಿಶಾ ಚಂಡಮಾರುತದ ಬಳಿಕ ಎರಡನೇ ಗಂಭೀರ ಮತ್ತು ಅತಿ ದೊಡ್ಡ ಸೂಪರ್ ಸೈಕ್ಲೋನ್ ಆಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…