ಸೌತಾಂಪ್ಟನ್: ನಿರಾಶಾದಾಯಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡ ಅಫ್ಘಾನಿಸ್ಥಾನ ತಂಡಕ್ಕೆ 225 ರನ್ ಗಳ ಗುರಿ ನೀಡಿದೆ. ನಾಯಕ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಬಾರಿಸಿದ ಸತತ ಮೂರನೇ ಅರ್ಧಶತಕದ ಹೊರತಾಗಿಯೂ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ನಿರೀಕ್ಷಿತ ಸ್ಕೋರ್ ಬಂದಿಲ್ಲ.
ಟಾಸ್ ಜಯಿಸಿದ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಭಾರತ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 224 ರನ್ ಗಳಿಸಿತು.
ಭಾರತದ ಪರ ಕೊಹ್ಲಿ ಸರ್ವಾಧಿಕ ಸ್ಕೋರ್(67, 63 ಎಸೆತ, 5 ಬೌಂಡರಿ) ಗಳಿಸಿದರೆ, ಆಲ್‌ರೌಂಡರ್ ಕೇದಾರ್ ಜಾಧವ್(52, 68 ಎಸೆತ,3 ಬೌಂಡರಿ, 1 ಸಿಕ್ಸರ್ )ಕೆಳ ಕ್ರಮಾಂಕದಲ್ಲಿ ತಂಡವನ್ನು ಆಧರಿಸಿದರು.
ಆರಂಭಿಕ ಆಟಗಾರ ರಾಹುಲ್(30), ವಿಜಯ ಶಂಕರ್(29) ಹಾಗೂ ಎಂಎಸ್ ಧೋನಿ(28) ಎರಡಂಕೆಯ ಸ್ಕೋರ್ ಗಳಿಸಿದರು.
ರೋಹಿತ್ ಶರ್ಮಾ 4.2 ನೇ ಓವರ್‌ನಲ್ಲಿ 10 ಎಸೆತ ಎದುರಿಸಿ ಕೇವಲ 1 ರನ್ ಗಳಿಸಿ ನಿರ್ಗಮಿಸಿದರು. ಬಳಿಕ 2ನೇ ವಿಕೆಟ್‌ಗೆ ರಾಹುಲ್‌ರೊಂದಿಗೆ ಕೊಹ್ಲಿ 57 ರನ್ ಹಾಗೂ 3ನೇ ವಿಕೆಟ್‌ಗೆ ವಿಜಯ ಶಂಕರ್‌ರೊಂದಿಗೆ 58 ರನ್ ಸೇರಿಸಿ ಜವಾಬ್ದಾರಿಯಿಂದ ಆಡಿದರು.
ಕೊಹ್ಲಿ 48 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 52ನೇ ಅರ್ಧಶತಕ ಸಿಡಿಸಿದರು. ಇತ್ತೀಚಿನ ವರದಿ ಬಂದಾಗ ಅಫ್ಘಾನಿಸ್ಥಾನ 23 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 84 ರನ್ ಗಳಿಸಿದೆ
ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…
ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…
ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…
ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…
ತಮಿಳುನಾಡು ಕರಾವಳಿ ಸಮೀಪ ಉಂಟಾಗಿರುವ ವಾಯುಭಾರ ಕುಸಿತವು ಆಂದ್ರಾ ಕರಾವಳಿ ದಾಟಿ ಉತ್ತರಕ್ಕೆ…
ಹಲಸಿನ ಹಣ್ಣಿನ ಹಲ್ವಕ್ಕೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣು 1 ಕಪ್. ಜಾರ್…