ಸುಳ್ಯ: ಅಬುದಾಬಿ ಲಾಟರಿಯ ಅದೃಷ್ಟ ಸುಳ್ಯದ ಯುವಕನಿಗೆ ಒಲಿದಿರುವ ಸುಳ್ಯನ್ಯೂಸ್.ಕಾಂ ವರದಿ ವೈರಲ್ ಆಗಿರುವ ಜೊತೆಗೆ ಯುವಕ ಮಹಮ್ಮದ್ ಫಯಾಜ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಈ ಸಂತಸದ ಸುದ್ದಿಯು ಸುಳ್ಯನ್ಯೂಸ್.ಕಾಂ ನಲ್ಲಿ ವರದಿಯಾದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿತ್ತು. ಇದಾದ ಕೆಲವೇ ಹೊತ್ತಲ್ಲಿ ಓದುಗರ ಸಂಖ್ಯೆ ಒಮ್ಮೆಲೇ ಹೆಚ್ಚಾದ್ದರಿಂದ ವೆಬ್ ಸೈಟ್ ಗೆ ಟ್ರಾಫಿಕ್ ಸಮಸ್ಯೆ ಕಂಡುಬಂದಿತ್ತು. ಹೀಗಾಗಿ ಮಧ್ಯಾಹ್ನದವರೆಗೆ ಅನೇಕರಿಗೆ ನ್ಯೂಸ್ ಓದಲು ಸಾದ್ಯವಾಗಲಿಲ್ಲ. ಹೀಗಾಗಿ ಹಲವಾರು ಮಂದಿಯಿಂದ ಈ ಬಗ್ಗೆ ದೂರುಗಳು ಬಂದಿದ್ದವು. ಇದನ್ನು ಸರಿ ಪಡಿಸಲು ಪ್ರಯತ್ನಿಸಲಾಯಿತು. ಮಧ್ಯಾಹ್ನದ ಹೊತ್ತಿಗೆ ಸರಿಯಾಗಿತ್ತು. ಅದರೆ ಜೊತೆಗೆ ಸಂಜೆಯವರೆಗೆ ನ್ಯೂಸ್ ಪ್ರಕಟ ಮಾಡುವುದಕ್ಕೂ ಸಾಧ್ಯವಾಗಲಿಲ್ಲ .ನ್ಯೂಸ್ ಪ್ರಕಟಿಸಲು ಸಾಧ್ಯವಾಗದೇ ಇರುವುದಕ್ಕೆ ಕ್ಷಮೆ ಕೋರುತ್ತಾ, ಓದುಗರ ಬೆಂಬಲ ಹಾಗೂ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. 24 ಗಂಟೆಯಲ್ಲಿ ಇಂದೊದೇ ವರದಿಯನ್ನು 30 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ ಎನ್ನುವ ಸಂಗತಿಯನ್ನೂ ನಿಮ್ಮ ಮುಂದೆ ಇಡುತ್ತಿದ್ದೇವೆ. ಇದೇ ರೀತಿ ಮುಂದೆಯೂ ನಿಮ್ಮ ಸಹಕಾರವನ್ನು ಯಾಚಿಸುತ್ತೇವೆ.