ಅಮರಮುಡ್ನೂರು ಗ್ರಾಮಪಂಚಾಯಿತಿನ ನೂತನ ಕಾಮಗಾರಿಗಳ ಉದ್ಘಾಟನೆ: ಮಾದರಿ ಆದರ್ಶ ಗ್ರಾಮ ನನ್ನ ಉದ್ದೇಶ- ಅಂಗಾರ

November 16, 2019
11:54 AM

ಸುಳ್ಯ: ತಾಲೂಕಿನ ಪ್ರತಿ ಗ್ರಾಮಗಳನ್ನು ಆಯ್ಕೆ ಮಾಡಿ, ಮಾದರಿ ಆದರ್ಶಗ್ರಾಮವನ್ನಾಗಿ ಮಾಡುವ ಉದ್ದೇಶ ಹೊಂದಿದ್ದೇನೆ. ಆರಂಭದ ಹಂತದಲ್ಲಿ ಅಮರಮುಡ್ನೂರು ಗ್ರಾಮವನ್ನು ಕೈಗೆತ್ತಿಕೊಂಡು ಡಿಸೆಂಬರ್ ಒಳಗೆ ಗ್ರಾಮದ ಅಭಿವೃದ್ಧಿ ಮತ್ತು ಬೇಡಿಕೆಯನ್ನು ಸರ್ವೆ ಮಾಡಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಗ್ರಾಮವನ್ನು ಮುಂದಿನ ಒಂದು ವರ್ಷದಲ್ಲಿ ಮಾದರಿ ಆದರ್ಶಗ್ರಾಮವನ್ನಾಗಿ ಮಾಡುವ ಉದ್ದೇಶ ಇದೆ ಎಂದು ಶಾಸಕ ಎಸ್.ಅಂಗಾರ ಹೇಳಿದರು.

Advertisement
Advertisement
Advertisement

ಅವರು ಶುಕ್ರವಾರ ಕುಕ್ಕುಜಡ್ಕ ಪ್ರಾ.ಕೃ.ಪ.ಸ.ಸಂಘದ ಅಮರ ಸಹಕಾರ ಭವನದಲ್ಲಿ ಸುಳ್ಯತಾಲೂಕು ಪಂಚಾಯಿತಿ, ಗ್ರಾ.ಪಂ. ಅಮರಮುಡ್ನೂರು, ದ.ಕ.ಜಿ.ಪಂ. ಇಂಜಿನಿಯರಿಂಗ್ 4ನೇ ಉಪವಿಭಾಗ ಸುಳ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ನೂತನ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು. ಜನಪ್ರತಿನಿಧಿಗಳೊಂದಿಗೆ ಜನರು ಕೈಜೋಡಿಸಿದಾಗ, ಆದರ್ಶಗ್ರಾಮದ ಉದ್ದೇಶಕ್ಕೆ ಮತ್ತಷ್ಟು ವೇಗ ದೊರೆಯುತ್ತದೆ. ನನಗೆ ಅಧಿಕಾರಕ್ಕಾಗಿ ಸ್ಥಾನ ಮುಖ್ಯ ಅಲ್ಲ. ಕ್ಷೇತ್ರದ ಅಭಿವೃದ್ದಿಯೇ ನನ್ನ ಚಿತಂತನೆಯಾಗಿದೆ. ಇದನ್ನು ಈಡೇರಿಸುತ್ತೇನೆ ಎಂದು ಅಂಗಾರ ಹೇಳಿದರು.

Advertisement

ತಾ.ಪಂ.ಸದಸ್ಯ ರಾಧಾಕೃಷ್ಣ ಬೊಳ್ಳೂರು ಮಾತನಾಡಿ, ಅಮರಮುಡ್ನೂರು ಗ್ರಾಮಪಂಚಾಯಿತಿ ಉದ್ಯೋಗಖಾತ್ರಿ ಯೋಜನೆಯಲ್ಲಿ ಸಾರ್ವಜನಿಕ ಮತ್ತು ವೈಯಕ್ತಿಕವಾಗಿ ಪಡೆದು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಯೋಜನೆಯಿಂದ ಪ್ರತಿ ಮನೆಯ ವ್ಯಕ್ತಿಗಳು ಫಲಾನುಭವಿಗಳಾಗಿದ್ದಾರೆ. ಇದರ ಜತೆಗೆ ಗ್ರಾಮ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ಗ್ರಾಮ ಇನ್ನುಷ್ಟು ಅಭಿವೃದ್ಧಿಯನ್ನು ಶಾಸಕರ ನೇತೃತ್ವದಲ್ಲಿ ಕಾಣಲಿದ್ದೇವೆ. ಇದಕ್ಕೆ ಪ್ರತಿ ಗ್ರಾಮದ ಪ್ರಜೆಯ ಸಹಕಾರ ಅಗತ್ಯವಾಗಿದೆ ಎಂದರು.

ಅಮರಮುಡ್ನೂರು ಗ್ರಾ.ಪಂ. ಅಧ್ಯಕ್ಷೆ ಸೀತಾ ಎಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಜಿ.ಪಂ. ಸದಸ್ಯೆ ಪುಷ್ಪಾವತಿ ಬಾಳಿಲ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ ಎನ್., ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್, ಜಿ.ಪಂ. ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹನುಮಂತರಾಯಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಶ್ಮಿ ಕೆ.ಎಂ., ಕುಕ್ಕುಜಡ್ಕ ಪ್ರಾ.ಕೃ.ಪ.ಸ.ಸಂ. ಚೊಕ್ಕಾಡಿ ಅಧ್ಯಕ್ಷ ರಾಘವೇಂದ್ರ ಪುಳಿಮಾರಡ್ಕ ಭಾಗವಹಿಸಿದರು.

Advertisement

ಕಾಮಗಾರಿ ಗುತ್ತಿಗೆದಾರರಾದ ಯೋಗೀಶ್, ಪ್ರೇಮಪ್ರಕಾಶ ಅವರನ್ನು ಸನ್ಮಾನಿಸಲಾಯಿತು. ಗ್ರಾ.ಪಂ.ಸದಸ್ಯ ತಿಮ್ಮಪ್ಪ ಗೌಡ ತಂಟೆಪ್ಪಾಡಿ ಸ್ವಾಗತಿಸಿ, ಸದಸ್ಯ ಪ್ರದೀಪ್ ಬೊಳ್ಳೂರು ವಂದಿಸಿದರು. ಪಂಚಾಯಿತಿ ಕಾರ್ಯದರ್ಶಿ ದಯಾನಂದ ನಿರೂಪಿಸಿದರು.

Advertisement

ಇದೇ ವೇಳೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಮತ್ತು ಮಳೆಹಾನಿ ಯೋಜನೆ ಹಾಗೂ ಗ್ರಾ.ಪಂ.ನ ಎಸ್ಕೋ ಖಾತೆ ಮತ್ತು ನರೇಗಾ ಅನುದಾನದಿಂದ ಮಾಡಿರುವ ಕುಕ್ಕುಜಡ್ಕ ಅಜ್ಜನಗದ್ದೆ ರಸ್ತೆಯ ಕಾಂಕ್ರಿಟೀಕರಣ ನರೇಗಾ ಯೋಜನೆಯಡಿ ಪೈಲಾರು ಎಂಬಲ್ಲಿ ನೂತನವಾಗಿ ನಿರ್ಮಿಸಿರುವ ಸಂಜೀವಿನಿ ವರ್ಕ್ ಶೆಡ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ನರೇಗಾ ಯೋಜನೆಯ ಅನುದಾನದಲ್ಲಿ ಶೇಣಿ ಎಂಬಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡದ ಉದ್ಘಾಟನೆ ಹಾಗೂ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ, ಶಾಸಕರ ಅನುದಾನದಲ್ಲಿ ಆನೆಕಾರ ಎಂಬಲ್ಲಿ ರಸ್ತೆ ಕಾಂಕ್ರಿಟೀಕರಣಕ್ಕೆ ಗುದ್ದಲಿ ಪೂಜೆ ಈ ಸಂದರ್ಭದಲ್ಲಿ ನೆರವೇರಿತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಕ್ಯಾನ್ಸರ್‌ಕಾರಕವಲ್ಲ | WHO ವರದಿ ಸತ್ಯಕ್ಕೆ ದೂರವಾದುದು | ಅಧ್ಯಯನದ ನೆರವಿಗೆ ಕೇಂದ್ರ ಸರ್ಕಾರಕ್ಕೆ ಮನವಿ | ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿಕೆ |
November 22, 2024
4:02 PM
by: ದ ರೂರಲ್ ಮಿರರ್.ಕಾಂ
ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |
November 22, 2024
2:32 PM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror