ಸುಳ್ಯ: ಎಲ್ಲರಂತೆ ಆಟವಾಡಿ ಬೆಳೆಯಬೇಕಾಗಿದ್ದ ಅಮೃತಾಳ ಬಾಳಿಗೆ ಬಲ ಥೋರಾಸಿಕ್ ಸ್ಕೋಲಿಯೋಸಿಸ್ ಭಾದಿಸಿ ಕೆಲ ಸಮಯದಿಂದ ಸಂಕಟ ಪಡುತ್ತಿದ್ದಾಳೆ. ಈಕೆ ಮಾವಿನಕಟ್ಟೆ ಹಿ.ಪ್ರಾ.ಶಾಲೆಯ 5ನೇ ತರಗತಿ ವಿದ್ಯಾರ್ಥಿ.
ದೇವಚಳ್ಳ ಗ್ರಾಮದ ತಳೂರು ಮೆತ್ತಡ್ಕ ನಿವಾಸಿ ಸತೀಶ್ ನಾಯ್ಕ ಮತ್ತು ಗಾಯತ್ರಿ ಯವರ ಮೂವರು ಪುತ್ರಿಯರಲ್ಲಿ ಎರಡನೆಯವಳು. ಕಳೆದ 6 ತಿಂಗಳಿಂದ ಬೆನ್ನು ನೋವು ಆರಂಭವಾಗಿ ಕ್ರಮೇಣ ಬೆನ್ನು ಸಂಪೂರ್ಣ ಬಾಗಿದೆ. ಎಲ್ಲ ಮಕ್ಕಳಂತೆ ಬೆಳೆಯಬೇಕಾಗಿದ್ದ ಅಮೃತಾಳ ಬಾಳಲ್ಲಿ ಕತ್ತಲು ಆವರಿಸಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ. ಇದನ್ನು ಪರೀಕ್ಷಿಸಿದ ಮಂಗಳೂರಿನ ಯೇನಪೋಯ ಆಸ್ಪತ್ರೆಯ ವೈಧ್ಯರು ಸರಿಪಡಿಸುವ ಭರವಸೆ ನೀಡಿದ್ದಾರೆ. ಇದಕ್ಕೆ ಸುಮಾರು 4 ಲಕ್ಷಕ್ಕೂ ಅಧಿಕ ಖರ್ಚು ತಗಲಬಹುದು ಎಂದು ವೈದ್ಯರು ತಿಳಿಸಿರುತ್ತಾರೆ. ಆದರೆ ತೀರ ಬಡತನದಲ್ಲಿರುವ ಇವರ ಪೋಷಕರಿಗೆ ಚಿಕಿತ್ಸೆಗೆ ಬೇಕಾದ ವೆಚ್ಚ ಭರಿಸುವುದು ಅಸಾಧ್ಯವಾಗಿದೆ. ಇದೀಗ ಅಜ್ಜಿ ಜಾನಕಿ ಯವರು ಅಮೃತಾಳ ಬಾಳನ್ನು ಬೆಳಗಲು ತನ್ನಿಂದ ಆದ ಪ್ರಯತ್ನ ಆರಂಭಿಸಿದ್ದಾರೆ. ಇವರ ಜೊತೆ ಸಹೃದಯಿಗಳ ಸಹಾಯ ಹಸ್ತ ಬೇಕಿದೆ. ಹಿಂದಿನಂತೆ ಅಮೃತಾ ನಲಿದಾಡುವಂತಾಗಬೇಕಿದೆ. ಸಹಾಯ ಹಸ್ತ ಚಾಚುವವರು ಜಾನಕಿ ಮೆತ್ತಡ್ಕ ಮೊ: 7760636927 ಸಂಪರ್ಕ ಮಾಡಬಹುದು.
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು…
ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏಪ್ರಿಲ್ 18…