ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ತಳೂರು ಮೆತ್ತಡ್ಕದ ನಿವಾಸಿ ಸತೀಶ್ ನಾಯ್ಕ್ ಮತ್ತು ಗಾಯತ್ರಿ ನಾಯ್ಕ ಅವರ ಪುತ್ರಿಗೆ ಶಸ್ತ್ರಚಿಕಿತ್ಸೆಯಾಗಬೇಕಿದೆ. ಈಗ ಅವರಿಗೆ ನೆರವು ಬೇಕಾಗಿದೆ. ಆನ್ ಲೈನ್ ಮೂಲಕವೂ ನೆರವು ನೀಡಬಹುದಾಗಿದ್ದು ಕೋಟೆ ಫೌಂಡೇಶನ್ ಈ ಕಾರ್ಯ ಮಾಡುತ್ತಿದೆ. ಈಗಾಗಲೇ ದಾನಿಗಳು ಆನ್ ಲೈನ್ ಮೂಲಕ ಸಹಾಯ ಮಾಡಿದ್ದ8ು ಸುಮಾರು 35 ಸಾವಿರಕ್ಕೂ ಅಧಿಕ ಸಂಗ್ರಹವಾಗಿದೆ. ಇನ್ನಷ್ಟು ಸಹಾಯ ಬೇಕಾಗಿದೆ. ಬಾಲಕಿಯೊಬ್ಬಳ ಬದುಕಿಗೆ ಬೆಳಕಾಗಲು ನಮ್ಮ ಇಂದಿನ ಫೋಕಸ್…
ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ತಳೂರು ಮೆತ್ತಡ್ಕ ನಿವಾಸಿ ಸತೀಶ್ ನಾಯ್ಕ ಮತ್ತು ಗಾಯತ್ರಿ ನಾಯ್ಕ ಅವರ ಮೂವರು ಪುತ್ರಿಯರಲ್ಲಿ ಎರಡನೆಯವಳಾದ ಅಮೃತಾ ಕಳೆದ 6 ತಿಂಗಳಿನಿಂದ Thoracic Scoliosis ಎಂಬ ರೋಗಕ್ಕೆ ತುತ್ತಾಗಿದ್ದಳು.
ಬೆನ್ನು ನೋವು ಆರಂಭವಾಗಿ ಕ್ರಮೇಣ ಬೆನ್ನು ಸಂಪೂರ್ಣ ಬಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ. ಇದನ್ನು ಪರೀಕ್ಷಿಸಿದ ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಮೂಲಕ ಸರಿಪಡಿಸುವ ಭರವಸೆ ನೀಡಿದ್ದಾರೆ. ವೈದ್ಯರು ಆಸ್ಪತ್ರೆಯ ಪ್ರಮುಖ ವೆಚ್ಚಗಳನ್ನು ಮಾತ್ರವೇ ಪಡೆದುಕೊಳ್ಳುವುದಾಗಿ ಹೇಳಿದ್ದಾರೆ, ಹೀಗಾದರೂ ಇದಕ್ಕೆ ಸುಮಾರು 3 ಲಕ್ಷಕ್ಕೂ ಅಧಿಕ ಖರ್ಚು ತಗಲಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಬಡ ಕುಟುಂಬ ಇದು. ಈಗಾಗಲೇ ಸ್ಥಳೀಯರು ಸಹಾಯ ಮಾಡಿದ್ದಾರೆ. ಶಸ್ತ್ರಚಿಕಿತ್ಸೆಗೆ 3 ಲಕ್ಷ ಹೊಂದಿಸಲು ಕಷ್ಟವಾಗುತ್ತಿದೆ. ಇದನ್ನು ಮನಗಂಡ ಕೋಟೆ ಫೌಂಡೇಶನ್ ಆನ್ ಲೈನ್ ಮೂಲಕ ದಾನಿಗಳ ನೆರವಿಗೆ ಮುಂದಾಗಿದೆ. ಕೋಟೆ ಫೌಂಡೇಶನ್ ಸಾಮಾಜಿಕವಾದ ಹಲವಾರು ಕೆಲಸ ಕಾರ್ಯ ಮಾಡುತ್ತಿದೆ. ಅಮೃಳಾ ಬಾಳಿಗೂ ಬೆಳಕಾಗಲು ಆನ್ ಲೈನ್ ಮೂಲಕ ನೆರವು ಕೇಳಿದೆ. ಪಾರದೆರ್ಶಕವಾದ ಈ ವ್ಯವಸ್ಥೆಯಲ್ಲಿ ಈಗಾಗಲೇ 35 ಸಾವಿರಕ್ಕೂ ಸಂಗ್ರಹವಾಗಿದೆ. ದಾನಿಗಳು ಆನ್ ಲೈನ್ ಮೂಲಕ ನೆರವು ನೀಡಬಹುದಾಗಿದೆ. ಈ ಮೂಲಕ ಅಮೃತಾ ಬಾಳಿಗೆ ಬೆಳಕಾಗಬಹುದು. ನೆರವು ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೂಲಕ ಹೋಗಿ ಆನ್ ಲೈನ್ ನಲ್ಲಿ ನೆರವು ನೀಡಬಹುದು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…