ಸುಳ್ಯ: ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್ ಇದರ ವಾರ್ಷಿಕ ಮಹಾಸಭೆ ಸುಳ್ಯದ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮದುವೆಗದ್ದೆ ಭೋಜಪ್ಪ ಗೌಡ ಸಭಾಂಗಣದಲ್ಲಿ ನಡೆಯಿತು. ಇದೇ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಅಧ್ಯಕ್ಷರಾಗಿ ಬಿ.ಕೆ. ಮಾಧವ , ಪ್ರಧಾನ ಕಾರ್ಯದರ್ಶಿಯಾಗಿ ಕೆ. ಟಿ.ವಿಶ್ವನಾಥ್ ಆಯ್ಕೆಯಾದರು.
ಸಭೆಯ ಅಧ್ಯಕ್ಷತೆಯನ್ನು ಎನ್.ಎ. ರಾಮಚಂದ್ರ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ಟಿ. ವಿಶ್ವನಾಥ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಬಶೀರ್.ಆರ್.ಬಿ. ಲೆಕ್ಕಾಚಾರ ಮಂಡಿಸಿದರು.
ಸಭೆಯನ್ನು ಉದ್ದೇಶಿಸಿ ನಿರ್ಗಮನ ಅಧ್ಯಕ್ಷ ಎನ್.ಎ. ರಾಮಚಂದ್ರ, ನೂತನ ಅಧ್ಯಕ್ಷ ಬಿ.ಕೆ. ಮಾಧವ, ಜಿಲ್ಲಾ ನಿರ್ಣಾಯಕ ಮಂಡಳಿ ಅಧ್ಯಕ್ಷ ಶಿವರಾಮ ಏನೆಕಲ್ ಮಾತನಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶರತ್ ಅಡ್ಕಾರು, ನಿರ್ಣಾಯಕ ಮಂಡಳಿ ಅಧ್ಯಕ್ಷ ಮಾಯಿಲಪ್ಪ, ಸಂಚಾಲಕರಾದ ನಟರಾಜ, ಸಂದೀಪ್ ಪಲ್ಲೋಡಿ ಉಪಸ್ಥಿತರಿದ್ದರು.
ಕೋಶಾಧಿಕಾರಿ ದೊಡ್ಡಣ್ಣ ಬರೆಮೇಲು ಸ್ವಾಗತಿಸಿ, ಸುಧಾಕರ ರೈ ಬಾಳಿಲ ಧನ್ಯವಾದ ಮಾಡಿದರು. ಕೆ.ಟಿ. ವಿಶ್ವನಾಥ ಕಾರ್ಯಕ್ರಮ ನಿರೂಪಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ:
ಗೌರವಾಧ್ಯಕ್ಷರಾಗಿ ಎನ್. ಎ. ರಾಮಚಂದ್ರ, ಅಧ್ಯಕ್ಷರಾಗಿ ಬಿ.ಕೆ. ಮಾಧವ, ಉಪಾಧ್ಯಕ್ಷರಾಗಿ ಕೆ.ಎಸ್. ಗೋಪಾಲಕೃಷ್ಣ ಕರೋಡಿ, ಶರತ್ ಅಡ್ಕಾರ್, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಟಿ.ವಿಶ್ವನಾಥ್, ಜತೆ ಕಾರ್ಯದರ್ಶಿಯಾಗಿ ಹರಿಪ್ರಕಾಶ್ ಅಡ್ಕಾರ್, ಕೋಶಾಧಿಕಾರಿಯಾಗಿ ಸುಧಾಕರ ರೈ ಬಾಳಿಲ, ಸಂಘಟನಾ ಕಾರ್ಯದರ್ಶಿಯಾಗಿ ಬಶೀರ್ ಆರ್ ಬಿ., ಹರ್ಷಿತ್, ನಿರ್ದೇಶಕರುಗಳಾಗಿ ದೊಡ್ಡಣ್ಣ ಬರೆಮೇಲು, ಎ.ಸಿ. ವಸಂತ, ರವಿ ಪ್ರಕಾಶ್, ಸತೀಶ್ ಕೆ.ಜಿ., ಹಮೀದ್ ಕೊಳಂಜಿಕೋಡಿ, ರಾಧಾಕೃಷ್ಣ ರೈ ಬೂಡು, ಮಹಮ್ಮದ್ ನಾಸೀರ್, ಮಹಾಪೋಷಕಾಧ್ಯಕ್ಷರಾಗಿ ನಿತ್ಯಾನಂದ ಮುಂಡೋಡಿ, ಪೋಷಕಾಧ್ಯಕ್ಷರಾಗಿ ಅಕ್ಷಯ್ ಕುರುಂಜಿ, ಗೌರವ ಸಲಹೆಗಾರರಾಗಿ ಸುಧಾಕರ ರೈ ಪಿ,ಬಿ., ಶಿವರಾಮ ಏನೆಕಲ್, ಎಸ್ ಸಂಶುದ್ದೀನ್, ಎನ್. ಜಯಪ್ರಕಾಶ್ ರೈ, ಕೆ.ಎಂ. ಮುಸ್ತಫಾ ಆಯ್ಕೆಯಾದರು.
ನಿರ್ಣಾಯಕ ಮಂಡಳಿಯ ಪದಾಧಿಕಾರಿಗಳು :
ಅಧ್ಯಕ್ಷರಾಗಿ ಮಾಯಿಲಪ್ಪ ಕೆ., ಸಂಚಾಲಕರಾಗಿ ನಟರಾಜ ಎಂ.ಎಸ್., ಸಂದೀಪ್ ಪಲ್ಲೋಡಿ, ಸದಸ್ಯರುಗಳಾಗಿ ಶಿವರಾಮ ಏನೆಕಲ್ಲು, ದೊಡ್ಡಣ್ಣ ಬರೆಮೇಲು, ಎ.ಸಿ. ವಸಂತ, ವಿಶ್ವನಾಥ ಕೆ., ಮಂಜುನಾಥ, ವೀರನಾಥ, ರಂಗನಾಥ, ಪದ್ಮನಾಭ ಏನೆಕಲ್, ಉಮೇಶ್, ತೀರ್ಥವರ್ಣ, ಸೀತಾರಾಮ, ವಿನ್ಯಾಸ, ಮಿಥುನ್ ಆಯ್ಕೆಯಾದರು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…