ನವದೆಹಲಿ: ಅಮೆರಿಕ ನಿರ್ಮಿತ 8 ಅಪಾಚೆ ಎಎಚ್-64ಇ ಯುದ್ಧಹೆಲಿಕಾಪ್ಟರ್ಗಳು ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿದೆ. ಪಠಾನ್ಕೋಟ್ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಾಯುಪಡೆ ಮುಖ್ಯಸ್ಥ ಏರ್ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಹೆಲಿಕಾಪ್ಟರ್‌ಗಳನ್ನು ಬರಮಾಡಿಕೊಂಡರು.
ಭಾರತದ ವಾಯುಪಡೆಯ ಆಧುನೀಕರಣ ಯೋಜನೆಗಳ ಭಾಗವಾಗಿ ಯುಎಸ್ ನಿರ್ಮಿತ ಅಪಾಚೆ ಎಎಚ್ -64 ಇ ಹೆಲಿಕಾಪ್ಟರ್‌ಗಳನ್ನು ಸೇರ್ಪಡೆ ಮಾಡಲಾಗಿದೆ.
ಒಟ್ಟು 22 ಅಪಾಚೆ ಯುದ್ಧಹೆಲಿಕಾಪ್ಟರ್ಗಳನ್ನು ಖರೀದಿಸಲಾಗುತ್ತಿದೆ. ಇನ್ನುಳಿದ ಹೆಲಿಕಾಪ್ಟರ್ಗಳು ಕಂತಿನಲ್ಲಿ ಬರಲಿದ್ದು, ಹಂತಹಂತವಾಗಿ ಅವನ್ನು ಸೇವೆಗೆ ಸೇರ್ಪಡೆಗೊಳಿಸಿಕೊಳ್ಳಲಾಗುವುದು. ವಾಯುಪಡೆ ಹಿಂದೆಯೂ ಯುದ್ಧಹೆಲಿಕಾಪ್ಟರ್ಗಳನ್ನು ಹೊಂದಿತ್ತು. ಆದರೆ ಅಪಾಚೆ ಯುದ್ಧ ಹೆಲಿಕಾಪ್ಟರ್ಗಳು ಹೆಚ್ಚಿನ ನಿಖರತೆಯೊಂದಿಗೆ ದಾಳಿ ಮಾಡುವ ಸಾಮರ್ಥ್ಯ ಹೊಂದಿವೆ ಎಂದು ವಾಯಪಡೆಯ ವಕ್ತಾರರು ಹೇಳಿದ್ದಾರೆ. ಎಎಚ್-64ಇ ಯುದ್ಧಹೆಲಿಕಾಪ್ಟರ್ಗಳು ವಿಶ್ವದಲ್ಲಿ ಸದ್ಯ ಲಭ್ಯ ಇರುವ ಅತ್ಯಾಧುನಿಕ ಯುದ್ಧ ಹೆಲಿಕಾಪ್ಟರ್ಗಳಾಗಿವೆ.