ಅಮೇರಿಕ ನಿರ್ಮಿತ 8 ಅಪಾಚೆ ಯುದ್ಧವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆ

September 3, 2019
10:03 PM

ನವದೆಹಲಿ: ಅಮೆರಿಕ ನಿರ್ಮಿತ 8 ಅಪಾಚೆ ಎಎಚ್​-64ಇ ಯುದ್ಧಹೆಲಿಕಾಪ್ಟರ್​ಗಳು ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿದೆ. ಪಠಾನ್​ಕೋಟ್​ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಾಯುಪಡೆ ಮುಖ್ಯಸ್ಥ ಏರ್​ಚೀಫ್​ ಮಾರ್ಷಲ್​ ಬಿ.ಎಸ್​. ಧನೋವಾ ಹೆಲಿಕಾಪ್ಟರ್​ಗಳನ್ನು ಬರಮಾಡಿಕೊಂಡರು.

ಭಾರತದ ವಾಯುಪಡೆಯ ಆಧುನೀಕರಣ ಯೋಜನೆಗಳ ಭಾಗವಾಗಿ ಯುಎಸ್ ನಿರ್ಮಿತ ಅಪಾಚೆ ಎಎಚ್ -64 ಇ ಹೆಲಿಕಾಪ್ಟರ್‌ಗಳನ್ನು ಸೇರ್ಪಡೆ ಮಾಡಲಾಗಿದೆ.
ಒಟ್ಟು 22 ಅಪಾಚೆ ಯುದ್ಧಹೆಲಿಕಾಪ್ಟರ್​ಗಳನ್ನು ಖರೀದಿಸಲಾಗುತ್ತಿದೆ. ಇನ್ನುಳಿದ ಹೆಲಿಕಾಪ್ಟರ್​ಗಳು ಕಂತಿನಲ್ಲಿ ಬರಲಿದ್ದು, ಹಂತಹಂತವಾಗಿ ಅವನ್ನು ಸೇವೆಗೆ ಸೇರ್ಪಡೆಗೊಳಿಸಿಕೊಳ್ಳಲಾಗುವುದು. ವಾಯುಪಡೆ ಹಿಂದೆಯೂ ಯುದ್ಧಹೆಲಿಕಾಪ್ಟರ್​ಗಳನ್ನು ಹೊಂದಿತ್ತು. ಆದರೆ ಅಪಾಚೆ ಯುದ್ಧ ಹೆಲಿಕಾಪ್ಟರ್​ಗಳು ಹೆಚ್ಚಿನ ನಿಖರತೆಯೊಂದಿಗೆ ದಾಳಿ ಮಾಡುವ ಸಾಮರ್ಥ್ಯ ಹೊಂದಿವೆ ಎಂದು ವಾಯಪಡೆಯ ವಕ್ತಾರರು ಹೇಳಿದ್ದಾರೆ. ಎಎಚ್​-64ಇ ಯುದ್ಧಹೆಲಿಕಾಪ್ಟರ್​ಗಳು ವಿಶ್ವದಲ್ಲಿ ಸದ್ಯ ಲಭ್ಯ ಇರುವ ಅತ್ಯಾಧುನಿಕ ಯುದ್ಧ ಹೆಲಿಕಾಪ್ಟರ್​ಗಳಾಗಿವೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 1.11.2026 | ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕು | ನವೆಂಬರ್ 3ರಿಂದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆ ನಿರೀಕ್ಷೆ
November 1, 2026
11:19 AM
by: ಸಾಯಿಶೇಖರ್ ಕರಿಕಳ
ರೈತರ ಹಿತರಕ್ಷಣೆಗಾಗಿ ಹಾಲಿನ ದರ ಏರಿಕೆ – ಪಕ್ಷಾತೀತವಾಗಿ ಕೈಗೊಂಡ ನಿರ್ಧಾರ
November 1, 2026
8:00 AM
by: ದ ರೂರಲ್ ಮಿರರ್.ಕಾಂ
45 ವರ್ಷಗಳ ಕೈಚಳಕ… ಪ್ಲಾಸ್ಟಿಕ್‌ಗೆ ಜಾಗವಿಲ್ಲದ ಸಾಂಪ್ರದಾಯಿಕ ಗೂಡು ದೀಪ
November 1, 2026
7:55 AM
by: ದ ರೂರಲ್ ಮಿರರ್.ಕಾಂ
ದೀಪಾವಳಿಗೆ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ – ಕಟ್ಟುನಿಟ್ಟಿನ ನಿಯಮ ಪಾಲನೆಗೆ ಸೂಚನೆ
November 1, 2026
7:46 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror