ಸುಳ್ಯ: ಅಯ್ಯನಕಟ್ಟೆ ಪರಿಸರ ಶೃಂಗಾರಗೊಂಡು ಜಾತ್ರೋತ್ಸವಕ್ಕೆ ಅಣಿಯಾಗುತ್ತಿದೆ.
Advertisement
Advertisement
ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಸ್ಥಾನ ಮೂರುಕಲ್ಲಡ್ಕ ಇಲ್ಲಿನ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಜ.25 ರಿಂದ ಜ. 27 ರ ತನಕ ಹಾಗೂ ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆ ಜಾತ್ರೆಯು ಜ. 27 ರಿಂದ ಜ. 30ರ ತನಕ ಜರಗಲಿದೆ. ಈ ಪ್ರಯುಕ್ತ ಸಿದ್ಧತೆಗಳು ಅಂತಿಮ ಹಂತದಲ್ಲಿದೆ. ಪ್ರದೇಶದಲ್ಲೆಲ್ಲ ತಳಿರು ತೋರಣ, ಕೇಸರಿ ವರ್ಣದ ಬ್ಯಾನರ್, ಬಂಟಿಂಗ್ಸ್, ರಾರಾಜಿಸುತ್ತಿದೆ. ಆಕರ್ಷಕ ದ್ವಾರಗಳು, ರಸ್ತೆ ಬದಿಯಲ್ಲಿನ ಅಲಂಕಾರಗಳು ಕೈ ಬೀಸಿ ಕರೆಯುತಿದೆ. ಬ್ರಹ್ಮಕಲಶೋತ್ಸವಕ್ಕೆ ಮತ್ತು ಜಾತ್ರೋತ್ಸವದ ಸಿದ್ಧತೆಗೆ ಕಳಂಜ, ಬಾಳಿಲ, ಮುಪ್ಪೇರ್ಯ ಗ್ರಾಮದ ಜನರು ಹಗಲಿರುಳೆನ್ನದೆ ದುಡಿಯುತ್ತಿದ್ದಾರೆ.
ಶ್ರಮದಾನದ ಮೂಲಕ ಸಿದ್ಧತೆಗೆ ಅಂತಿಮ ಸ್ಪರ್ಶ ನೀಡಲಾಗಿದೆ. ನಾಡಿಗೆಲ್ಲ ಆಮಂತ್ರಣ ಪತ್ರಿಕೆ ಹಂಚಲಾಗಿದೆ. ಒಟ್ಟಿನಲ್ಲಿ ವಾರಗಳ ಕಾಲ ನಡೆಯುವ ಬ್ರಹ್ಮಕಲಶೋತ್ಸವ ಮತ್ತು ವೈಭವದ ಜಾತ್ರೆಗೆ ಊರಿಗೆ ಊರೇ ಸಿದ್ಧಗೊಂಡಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement