ಸುಳ್ಯ: ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಸ್ಥಾನ ಮೂರುಕಲ್ಲಡ್ಕ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಅಯ್ಯನಕಟ್ಟೆ ಜಾತ್ರೆಯ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ವೈಭವ ಮನಸೂರೆಗೊಳ್ಳುತಿದೆ.
ಸೋಮವಾರ ರಾತ್ರಿ ಮಂಗಳೂರಿನ ಸನಾತನ ನಾಟ್ಯಾಲಯ ಪ್ರಸ್ತುತ ಪಡಿಸಿದ ಸಾಂಸ್ಕೃತಿಕ ವೈಭವ-ಪುಣ್ಯ ಭೂಮಿ ಭಾರತ ಆದರ್ಶ ಗೋಖಲೆ ನೇತೃತ್ವದಲ್ಲಿ ನಡೆಯಿತು.
ಅಲ್ಲದೆ ಶ್ರೀರಾಮ ಭಜನಾ ಮಂಡಳಿ ಕಿಲಂಗೋಡಿ, ಶ್ರೀ ಮಹಾವಿಷ್ಣು ಭಜನಾ ಮಂಡಳಿ, ಬಾಳಿಲ ಮುಪ್ಪೇರ್ಯ, ಶ್ರೀ ಮಹಾದೇವ ಭಜನಾ ಮಂಡಳಿ, ಪುಳ್ಕೂರು, ಕಾಸರಗೋಡು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸುಜನ್ ಕೆ.ವಿ., ಸುಜಿತ್ ಕೆ.ವಿ. ಮತ್ತು ಬಳಗದವರಿಂದ ಗಾನ-ಕುಂಚ, ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಕೋಟೆಮುಂಡುಗಾರು ಇವರಿಂದ ಕುಣಿತ ಭಜನೆ, ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ ಇದರ ಸದಸ್ಯರಿಂದ ರಾಘವ ಕಳಂಜರವರ ಸಂಯೋಜನೆಯಲ್ಲಿ ಸಿದ್ಧವೇಷ ಮತ್ತು ಕೋಲಾಟ ನಡೆಯಿತು.
ಜ. 29 ರಂದು ಕಲ್ಲಮಾಡದಲ್ಲಿ ಸಂಜೆ 7 ರಿಂದ ದ.ಕ.ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಬಯಲಾಟ – ಪಾಂಡವಾಶ್ವಮೇಧ ನಡೆಯಲಿದೆ.