ಬೆಳ್ಳಾರೆ: ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೇವಸ್ಥಾನ ಮೂರು ಕಲ್ಕಡ್ಕ ಇದರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜ. 25 ರಿಂದ 27 ರವರೆಗೆ ಹಾಗೂ ಅಯ್ಯನಕಟ್ಟೆ ಜಾತ್ರೆ ಜ. 27 ರಿಂದ ಜ. 30 ರ ತನಕ ನಡೆಯಲಿದ್ದು, ಈ ಬಗ್ಗೆ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಡಿ. 14 ರಂದು ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಸಭಾ ಭವನದಲ್ಲಿ ನಡೆಯಿತು.
ಬೆಳ್ಳಾರೆ ಕ್ಷೇತ್ರದ ಜಿ.ಪಂ. ಸದಸ್ಯ ಎಸ್.ಎನ್. ಮನ್ಮಥ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಜೀರ್ಣೋದ್ಧಾರ, ಬ್ರಹ್ಮ ಕಲಶೋತ್ಸವ ಮತ್ತು ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಜಿ.ಎಸ್.ಎನ್. ಪ್ರಸಾದ್ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಎ.ಎಂ. ಸುಧಾಕರ ರೈ ಆಮಂತ್ರಣ ಪತ್ರಿಕೆ ವಿತರಿಸುವ ಬಗ್ಗೆ ಹಾಗೂ ಸ್ಮರಣ ಸಂಚಿಕೆಯ ಬಗ್ಗೆ ಮಾಹಿತಿ ನೀಡಿದರು.
ಆಡಳಿತ ಸಮಿತಿ ಅಧ್ಯಕ್ಷ ಲಕ್ಷಣ ಗೌಡ ಬೇರಿಕೆ, ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಎನ್. ವಿಶ್ವನಾಥ ರೈ, ಅಧ್ಯಕ್ಷ ಮಾಧವ ಗೌಡ ಅಯ್ಯನಕಟ್ಟೆ, ಕಾರ್ಯಾಧ್ಯಕ್ಷ ಕೂಸಪ್ಪ ಗೌಡ ಮುಗುಪು, ಸಂಚಾಲಕರಾದ ಟಿ. ಲಿಂಗಪ್ಪ ಗೌಡ, ಬಿ. ರಾಮಚಂದ್ರ ರಾವ್, ಎಂ. ಸುಬ್ರಹ್ಮಣ್ಯ ಮುಂಡುಗಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.