ಸುಳ್ಯ: ಅರಂತೋಡು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ತಿಂಗಳಿಗೊಮ್ಮೆ ಶೇಕ್ ಮುಹಿಯ್ಯದ್ದೀನ್ ಜಿಸ್ತಿ ಅಜೀರ್ ಖ್ವಾಜಾ ರವರ ಹೆಸರಿನಲ್ಲಿ ಆಚರಿಸಿಕೊಂಡು ಬರುತ್ತಿರುವ ದ್ಸಿಕ್ರ್ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮ ಹಾಗೂ ಏಕದಿನ ಮತಪ್ರಭಾಷಣ ಕಾರ್ಯಕ್ರಮವು ಫೆ.19ಮತ್ತು ಫೆ.20ರಂದು ಅರಂತೋಡು ಮಸೀದಿ ವಠಾರದಲ್ಲಿ ನಡೆಯಲಿದೆ.
ಫೆ.19ರಂದು ರಾತ್ರಿ 7 ಗಂಟೆಗೆ ಕಲ್ಲೆಗ ಜುಮ್ಮಾಮಸೀದಿ ಖತೀಬರಾದ ಬಹು ಉಸ್ತಾದ್ ಅಬೂಬಕ್ಕರ್ ಸಿದ್ದೀಕ್ ಜಲಾಲಿಯವರಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಫೆ.20 ರಂದು ಮಗ್ರಿಬ್ ನಂತರ ನಡೆಯುವ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮಕ್ಕೆ ಬಹು ಶೈಖುನಾ ನಾಲಾಂಗೇರಿ ಉಸ್ತಾದ್ ಕಣ್ಣೂರು ಕೇರಳರವರ ನೇತೃತ್ವದಲ್ಲಿ ನಡೆಯಲಿದ್ದು, ಬಹು ಡಾ ಅಹ್ಮದ್ ಕಬೀರ್ ಬಾಖವಿ ಅಲ್ ಬಾನಿ ಕೇರಳ ಇವರಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸ್ ಹಾಕ್ ಬಾಖವಿ ವಹಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಪೆರಾಜೆ ಜುಮ್ಮಾ ಮಸೀದಿ ಖತೀಬರಾದ ಬಹು ಅಬೂಬಕ್ಕರ್ ಸಖಾಫಿ, ಪೇರಡ್ಕ ಜುಮ್ಮಾ ಮಸೀದಿ ಖತೀಬರಾದ ಅಲ್ಹಾಜ್ ಅಶ್ರಫ್ ಫೈಝಿ, ಕಲ್ಲುಗಂಡಿ ಜುಮ್ಮಾ ಮಸೀದಿ ಖತೀಬರಾದ ಬಹು ಅಬ್ದುಲ್ಅಝೀಝ್ ಬಾಖವಿ, ಸಂಪಾಜೆ ಜುಮ್ಮಾಮಸೀದಿ ಖತೀಬರಾದ ಬಹು ಅಲ್ ಜಮಾಲುದ್ದೀನ್ ಅಮಾನಿ, ನವಾಜ್ ದಾರಿಮಿ, ಬಶೀರ್ ಮದನಿ, ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ, ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ.ಎಮ್ .ಶಹೀದ್, ಅರಂತೋಡು ಜಮಾ ಅತ್ ಉಪಾಧ್ಯಕ್ಷ ಹಾಜಿ ಕೆ.ಎಮ್ .ಮಹಮ್ಮದ್ , ದ್ಸಿಕ್ರ್ ಸ್ವಲಾತ್ ಸಮಿತಿ ಉಪಾಧ್ಯಕ್ಷ ಕೆ.ಎಮ್ ಅಬೂಬಕ್ಕರ್ , ಜಮಾ ಅತ್ ಕಾರ್ಯದರ್ಶಿ ಕೆ.ಎಮ್ .ಮೂಸಾನ್, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅಧ್ಯಕ್ಷ ಅಬ್ದುಲ್ ಮಜೀದ್, ಎಸ್ ಕೆ ಎಸ್ಎಸ್ ಎಫ್ ಅರಂತೋಡು ಶಾಖೆಯ ಅಧ್ಯಕ್ಷ ರಾದ ತಾಜುದ್ದೀನ್ ಎಸ್ ಅರಂತೋಡು,ಯುವ ಉದ್ಯಮಿ ಯು.ಎ.ಇ.ಸೈಫುದ್ದೀನ್ ಪಠೇಲ್ ಸೇರಿದಂತೆ ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…