ಅರಂತೋಡು :ಅರಂತೋಡು ಬದ್ರಿಯಾ ಜುಮ್ಮಾಮಸೀದಿ ವತಿಯಿಂದ ಹಜ್ ಯಾತ್ರೆ ಗೆ ತೆರಳಲಿರುವ ಅರಂತೋಡು ಮಸೀದಿಯ ಖತೀಬರಾದ ಇಸಾಕ್ ಬಾಖವಿ, ಪೇರಡ್ಕ ಮಸೀದಿ ಖತೀಬರಾದ ಅಶ್ರಫ್ ಫೈಝಿ ಸುಕಂದಕಟ್ಟೆ,ಪೇರಡ್ಕ ಮದರಸದ ಸದರ್ ಮುಅಲ್ಲಿಂ ಝಕರಿಯಾ ದಾರಿಮಿ,ಅಬ್ದುಲ್ ಹಮೀದ್ಅಡಿಮರಡ್ಕ ರವರಿಗೆ ಬೀಳ್ಕೊಡುಗೆ ಸಮಾರಂಭವು ಅರಂತೋಡು ಮದರಸದ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಅರಂತೋಡು ಜಮಾಅತ್ ಅಧ್ಯಕ್ಷ ಅಬ್ದುಲ್ ಖಾದರ್ ಪಠೇಲ್ ವಹಿಸಿದರು. ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಬಹು ಇಸಾಖ್ ಬಾಖವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಸ್ಲಾಂ ಧರ್ಮದ ಐದು ಪುಣ್ಯ ಕಾರ್ಯದಲ್ಲಿ ಹಜ್ಜ್ ಕರ್ಮ ಒಂದಾಗಿದ್ದು .ಹಜ್ಜ್ ಕಾರ್ಯ ನಿರ್ವಹಿಸಲು ಒಲಿದವರು ಭಾಗ್ಯವಂತವರು ಎಂದು ಹೇಳಿದರು.ಈ ಸಂದರ್ಭದಲ್ಲಿ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಅಬ್ದುಲಾ ಮಾಸ್ಟರ್ ಪ್ರಸ್ತಾವಿಕ ಭಾಷಣ ಮಾಡಿದರು.
ಸ್ವಲಾತ್ ಸಮಿತಿ ಉಪಾಧ್ಯಕ್ಷ ಅಬೂಬಕ್ಕರ್ ಪಾರೆಕ್ಕಲ್,ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅಧ್ಯಕ್ಷ ಅಬ್ದುಲ್ ಮಜೀದ್ ,ನಾಸಿರುದ್ದೀನ್ ಪಠೇಲ್ ಮುಅಸ್ಸಿನ್ ಬಶೀರ್ ದಾರಿಮಿ,ನುಸ್ರತುಲ್ ಇಸ್ಲಾಂ ಮದರಸ ಮ್ಯಾನೇಜ್‌ಮೆಂಟ್ ಸಂಚಾಲಕ ಕೆ.ಎಮ್ .ಮೂಸಾನ್,ಜಮಾಅತ್ ನ ಮಾಜಿ ಅಧ್ಯಕ್ಷರು ,ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು . ಜಮಾಅತ್ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿದರು.ಎ.ಹೆಚ್.ವೈ.ಎ ಕಾರ್ಯದರ್ಶಿ ಫಸಿಲು ವಂದಿಸಿದರು.
ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…
ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…